ಮೋದಿ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಅನೇಕ ಪ್ರಯೋಜನಗಳಿವೆ, ಹೇಗೆ ಪಡೆದುಕೊಳ್ಳಬೇಕು ಅಂತ ಓದಿ!!

1
2399

ಭಾರತವನ್ನು ಅನಾದಿಕಾಲದಿಂದಲೂ ಪುರುಷ ಪ್ರಧಾನ ದೇಶವೆಂದು ಕರೆಯಲ್ಪಟ್ಟಿದ್ದು ಹೆಣ್ಣು ಎಂದರೆ ಅಡುಗೆ ಮನೆಗೆ, ಮಗು ಹೆರುವುದಕ್ಕೆ ಎಂದು ಮೀಸಲು ಮಾಡಿದ್ದಾರೆ. ನಮ್ಮ ದೇಶದ ಜಾತಿ ಪದ್ಧತಿ, ಕೆಲವು ಕಟ್ಟುಪಾಡುಗಳು ನಮ್ಮ ಮಹಿಳೆಯರ ಹಕ್ಕುಗಳನ್ನು ದಮನಗೊಳಿಸಿ ಅವುಗಳನ್ನು ಹತ್ತಿಕ್ಕಲಾಗಿದೆ. ಗಂಡು ದುಡಿದು ಕುಟುಂಬದ ಜವಾಬ್ದಾರಿ ಹೊರುತ್ತಾನೆ ಆದರೆ ಹೆಣ್ಣು ಕೇವಲ ಪೋಷಕರ ಹೊಣೆಗಾರಿಕೆಯಾಗಿರುತ್ತಾಳೆ ಎಂದು ನಮ್ಮ ಜನ, ಸಮಾಜ ನಂಬಿದ್ದಾರೆ ಆದರೆ ಅನೇಕ ಕುಟುಂಬಗಳು ಹೆಣ್ಣಿನ ದುಡಿಮೆಯ ಮೇಲೆ ಅವಲಂಬಿತವಾಗಿವೆ. ಹೆಣ್ಣು ಸಹಾ ಗಂಡಿಗೆ ಸಮಾನಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ತಾನು ಸಹ ಎಲ್ಲಾ ತರಹದ ಕೆಲಸಗಳನ್ನು ಜವಾಬ್ದಾರಿಯನ್ನು ಹೊರಲು ಅರ್ಹಳು ಎಂದು ಸಮಾಜಕ್ಕೆ ತೋರಿಸಿದ್ದಾಳೆ.

ಎಷ್ಟೋ ಕುಟುಂಬಗಳು ಹೆಣ್ಣು ಹೊರೆಯಾಗುತ್ತಾಳೆ ಎಂಬ ತಪ್ಪು ಕಲ್ಪನೆಯನ್ನಿಟ್ಟುಕೊಂಡು ಜನರು ಹೆಣ್ಣು – ಭ್ರೂಣ ಹತ್ಯೆಗೆ ಮುಂದಾಗುತ್ತಾರೆ. ಇನ್ನು ಕೆಲವು ಜನರು ಹೆಣ್ಣು ಮಗು ಹುಟ್ಟುತ್ತಿದ್ದಂತೆಯೇ ಕೊಲ್ಲುವ ಪಾಪ ಕರ್ಮ ಮಾಡುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ 1000 ಗಂಡುಮಕ್ಕಳಿಗೆ ಕೇವಲ 879 ಹೆಣ್ಣುಮಕ್ಕಳಿರುವರೆಂದು ಕಂಡು ಬಂದಿದೆ.

ಆದರೆ ನರೇಂದ್ರ ಮೋದಿಯವರು ಸಮತೋಲನ ಸಮಾಜ ಕಟ್ಟಲು ವಿದ್ಯಾಭ್ಯಾಸದಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಹಾಗು ಇಂತಹ ಪಕ್ಷಪಾತೀಯ ಪದ್ದತಿಯನ್ನು ಮುಕ್ತಗೊಳಿಸಲು ” ಬೇಟಿ ಬಚಾವೋ ಬೇಟಿ ಪಢಾವೋ ” ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಈ ಯೋಜನೆಯ ಅನುಕೂಲಗಳು:

  • ಈ ಯೋಜನೆಯ ಅಡಿಯಲ್ಲಿ ಮಗುವಿಗೆ ಹಾಗೂ ಪೋಷಕರಿಗೆ ವಿಶೇಷವಾದ ಧನ ಸಹಾಯ ಹಾಗೂ ಅನೇಕ ಪ್ರಯೋಜನಗಳನ್ನು ನೀಡುವ ಮೂಲಕ ಹೆಣ್ಣು ಮಕ್ಕಳನ್ನು ಬೆಳೆಸುವ ಪ್ರೋತ್ಸಾಹ ನೀಡಿದ್ದಾರೆ.
  • ಗಂಡು ಮಕ್ಕಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಹೆಣ್ಣು ಮಕ್ಕಳಿಗೂ ನೀಡಲಾಗುತ್ತದೆ ಎನ್ನುವುದನ್ನು ಈ ಯೋಜನೆ ಖಚಿತಪಡಿಸುತ್ತದೆ.
  • ಅಲ್ಲದೇ, ಈ ಯೋಜನೆ ಹೆಣ್ಣುಮಗುವಿಗೂ ಸರಿಯಾದ ಶಿಕ್ಷಣವನ್ನು ನೀಡುತ್ತೇವೆ ಎನ್ನುವುದನ್ನು ಖಚಿತಪಡಿಸುತ್ತದೆ.
  • ಹೆಣ್ಣುಮಗುವಿನ ಮದುವೆಗಾಗಿ ಹಣವನ್ನು ಉಳಿಸುವಲ್ಲಿ ಪೋಷಕರಿಗೆ ಸಹಕಾರಿಯಾಗಿದೆ. ಇದು ಜನರ ಮನಸ್ಸನ್ನು ಬದಲಾಯಿಸುವಲ್ಲಿ ಸಹಾಯ ಮಾಡುತ್ತದೆ.
  • ಹೆಣ್ಣುಮಗುವಿನ ಪೋಷಕರಿಗೆ ತೆರೆಗೆ ವಿನಾಯಿತಿಯನ್ನು ನೀಡಲಾಗುತ್ತದೆ. ಅಲ್ಲದೇ ಉಳಿತಾಯ ಖಾತೆಯಲ್ಲಿ ಬಡ್ಡಿದರವು ಪ್ರತಿ ಇತರ ಉತ್ಪನ್ನಗಳ ಪೈಕಿ ಹೆಚ್ಚಾಗಿರುತ್ತದೆ.
  • ಒಮ್ಮೆ ಹೆಣ್ಣುಮಗುವು ಅರ್ಹವಾದ ವಯಸ್ಸನ್ನು ತಲುಪಿದಾಗ ಉಳಿತಾಯ ಖಾತೆಯಲ್ಲಿ ಜಮೆಯಾದ ಹಣವನ್ನು ಆ ಹೆಣ್ಣುಮಗಳಿಗೆ ನೀಡಲಾಗುತ್ತದೆ.

ಇಂತಹ ಕೆಟ್ಟ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ನರೇಂದ್ರ ಮೋದಿಯವರು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯನ್ನು ಪ್ರಾರಂಭಿಸುವುದರ ಮೂಲಕ ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗನ್ನು ದೂರಗೊಳಿಸುವುದು ಮತ್ತು ಲಿಂಗ ಅನುಪಾತವನ್ನು ತಡೆಗಟ್ಟುವ ಪ್ರಯತ್ನಗಳು ಈ ಯೋಜನೆಯಿಂದ ಯಶಸ್ವಿಯಾಗಿದೆ. ಜೊತೆಗೆ ಹೆಣ್ಣು ಸಂಸಾರದ ಕಣ್ಣು, ಸಮಾಜದ ಬೆಳಕು ಎನ್ನುವುದು ಜನರಿಗೆ ಅರ್ಥೈಸುತ್ತಿದ್ದಾರೆ.