ಹೊಟ್ಟೆ ಸರಿಯಿಲ್ಲ ಅಂತ ಒದ್ದಾಡೋ ಬದಲು ಪರಂಗಿ ಹಣ್ಣನ್ನು ತಿನ್ನಿ, ಅದರಿಂದ ಈ ರೀತಿಯ ಹೊಟ್ಟೆ ನೋವು ಮಾಯವಾಗುತ್ತೆ..

0
1637

ಕ್ರಿ ಸ 1626 ಕ್ಕೂ ಮುನ್ನವೇ ಪೋರ್ಚುಗೀಸರಿಂದಾಗಿ ಭಾರತಕ್ಕೆ ಬಂದ ಪಪ್ಪಾಯಿ ಔಷಧಿ ಗುಣಗಳ ಆಗರ.

೧) ಪಪ್ಪಾಯಿ ಪಚನಕ್ಕೆ ಸಹಕಾರಿ. ಕಡಿಮೆ ಜೀರ್ಣ ಶಕ್ತಿ ಹಾಗು ಯಕೃತ್ ದೋಷ ಉಳ್ಳವರು ಪಪ್ಪಾಯಿ ಹಣ್ಣನ್ನು ಜೇನಿನೊಂದಿಗೆ ನಿತ್ಯವೂ ಸೇವಿಸಿದರೆ ಒಳ್ಳೆಯದು.
೨) ಮಲ ಬದ್ಧತೆಯಿಂದ ಬಳಲುತ್ತಿರುವವರು ರಾತ್ರಿ ಊಟದ ಬಳಿಕ ಪಪ್ಪಾಯಿ ಹಣ್ಣನ್ನು ಸೇವಿಸಿ ಹಾಲು ಕುಡಿಯಿರಿ.
೩) ಪಪ್ಪಾಯಿ ಎಲೆಯನ್ನು ಜಜ್ಜಿ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು, ಬಾವು ಕಡಿಮೆಯಾಗುತ್ತದೆ.
೩) ಊಟಕ್ಕೆ ಮುನ್ನ ಪಪ್ಪಾಯಿ ಹಣ್ಣನ್ನು ಸೇವಿಸಿದರೆ ಮೂತ್ರರೋಗಗಳ ನಿವಾರಣೆಯಾಗುತ್ತದೆ.


೪) ಪಪ್ಪಾಯಿ ಸೇವನೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದು ಇರುಳುಗಣ್ಣನ್ನು ನಿವಾರಿಸುತ್ತದೆ.
೫) ಚರ್ಮರೋಗಗಳಲ್ಲಿ ಪಪ್ಪಾಯಿ ಕಾಯಿಯ ಹಾಲನ್ನು ಹಚ್ಚಿದರೆ ತುರಿಕೆ, ಕಜ್ಜಿ, ಮುಂತಾದ ಚರ್ಮರೋಗದಿಂದ ಪಾರಾಗಬಹುದು.
೬) ಪಪ್ಪಾಯಿ ಸೇವಿಸಿದರೆ ಬಾಣಂತಿ ಎದೆಹಾಲು ಹೆಚ್ಚುತ್ತದೆ.
೭) ಪಪ್ಪಾಯಿ ಹಣ್ಣನ್ನು ಹಾಲು ಮತ್ತು ಜೇನಿನ ಜೊತೆಗೆ ಸೇವಿಸಿದರೆ ಹೃದಯಕ್ಕೆ ಒಳ್ಳೆಯದು.
೮) ಪಪ್ಪಾಯಿ ಹಣ್ಣಿನ ಲೇಪವನ್ನು ಹಚ್ಚಿದರೆ ಮೊಡವೆಗಳು ಮಾಯವಾಗುತ್ತದೆ.


೯) ಹಣ್ಣಾದ ಪಪ್ಪಾಯಿಯ ಬೀಜ ಮತ್ತು ಸಿಪ್ಪೆ ಸಹಿತ ಅರೆದು, ತಲೆಗೆ ಲೇಪಿಸಿ ಅರ್ಧ ಗಂಟೆಯ ಅನಂತರ ಸ್ನಾನ ಮಾಡಿದರೆ ಕೂದಲು ಕಾಂತಿಯುತವಾಗುತ್ತವೆ.
೧೦) ಪಪ್ಪಾಯಿಯಲ್ಲಿ ಹಲವು ಪೋಷಕಾಂಶಗಳು ಇರುವುದರಿಂದ ಬೆಳೆಯುವ ಮಕ್ಕಳಿಗೆ ತಿನ್ನಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.


೧೧) ಪಪ್ಪಾಯಿ ಕಾಯಿಯ ರಸವನ್ನು ಬಾಯಿ ಹುಣ್ಣಿಗೆ ಲೇಪಿಸಿದರೆ ಹುಣ್ಣು ಗುಣವಾಗುತ್ತದೆ.( ದಿನದಲ್ಲಿ ಮೂರು ಅಥವಾ ನಾಲ್ಕು ಬಾರಿ)


೧೨) ಭೇದಿ ಸಂದರ್ಭದಲ್ಲಿ ಗಂಟೆಗೊಮ್ಮೆ ನಾಲ್ಕೈದು ಚಮಚ ಪಪ್ಪಾಯಿ ಹಣ್ಣಿನ ರಸ ಕುಡಿಸಿದರೆ ಒಳ್ಳೆಯದು.
೧೩) ಹಣ್ಣಿನ ಸಿಪ್ಪೆಯನ್ನು ತಿಕ್ಕಿಕೊಂಡರೆ ಚರ್ಮ ಮೃದುವಾಗುತ್ತದೆ ಮತ್ತು ಕಲೆಗಳು ನಿವಾರಣೆಯಾಗುತ್ತದೆ.
೧೪) ಪಪ್ಪಾಯಿ ಬೇರಿನ ಕಷಾಯ ಸೇವಿಸಿದರೆ ಹೊಟ್ಟೆ ಹುಳು ನಾಶವಾಗುತ್ತವೆ. ಇದು ಕ್ರಿಮಿಹರವು ಹೌದು.
೧೫)ಪಪ್ಪಾಯಿ ಕಾಯಿಯ ಹಾಲನ್ನು ಲೇಪಿಸಿದರೆ ಚೇಳು ಕಡಿತದ ನೋವು ಉರಿ ಕಡಿಮೆಯಾಗುತ್ತದೆ.