ಹಣ್ಣಿನ ಸಿಪ್ಪೆಯ ಔಷಧೀಯ ಗುಣಗಳನ್ನು ತಿಳಿದುಕೊಂಡರೆ, ಇನ್ಯಾವತ್ತೂ ಸಿಪ್ಪೆಯನ್ನ ಬಿಸಾಡೋಲ್ಲ…!!

0
1328

ಹಣ್ಣುಗಳು ಅಷ್ಟೇ ಅಲ್ಲ ಅದರ ಸಿಪ್ಪೆಯಲ್ಲೂ ಕೂಡ ಪೋಷಕಾಂಶಗಳ ಕಣಜ ಎಂದು ಹೇಳಿದರೆ ತಪ್ಪಾಗಲಾರದು. ಇವು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ. ಹಣ್ಣಿನ ತಿರುಳಿನ ಜೊತೆ ಹಣ್ಣಿನ ಸಿಪ್ಪೆಗಳು ಪೌಷ್ಠಿಕಾಂಶಗಳನ್ನು ಒಳಗೊಂಡಿರುತ್ತವೆ ಹಾಗೂ ಹಣ್ಣಿನ ಜೊತೆ ಸಿಪ್ಪೆಯನ್ನು ಸ್ವಚ್ಛಗೊಳಿಸಿ ತಿನ್ನುವುದು ಒಳ್ಳೆಯದು. ಅಧ್ಯಯನ ವರದಿಗಳ ಪ್ರಕಾರ ಸಿಪ್ಪೆಗಳಿಂದ ಕ್ಯಾನ್ಸರ್ ತಡೆಯಬಹುದು. ಅದಕ್ಕೆ ವೈದ್ಯರು ರೋಗಿಗೆ ಹಣ್ಣನ್ನು ಸಿಪ್ಪೆ ಸಹಿತ ತಿನ್ನಲು ಸಲಹೆ ಮಾಡುತ್ತಾರೆ.

ವಾಸ್ತವವಾಗಿ ಎಲ್ಲಾ ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಲು ಸಾಧ್ಯವಿಲ್ಲ. ಬಾಳೆಹಣ್ಣು, ದಾಳಿಂಬೆ, ಸೀತಾಫಲ, ಮೂಸಂಬಿ, ಕಿತ್ತಳೆ, ಚಕ್ಕೋತ ಮೊದಲಾದವುಗಳ ತಿರುಳನ್ನು ತಿಂದು ಸಿಪ್ಪೆಯನ್ನು ತ್ಯಜಿಸುತ್ತೇವೆ. ಬಹು ಉಪಯೋಗಕ್ಕೆ ಬರುವ ಹಣ್ಣಿನ ಸಿಪ್ಪೆಗಳು ಸರಿಯಾದ ಉಪಯೋಗವನ್ನು ತಿಳಿಯದೆ ಸುಮ್ಮನೆ ವ್ಯರ್ಥವಾಗಿಹೋಗುತ್ತೆ. ಆದರೆ ಅದರಲ್ಲಿರುವ ಅಂಶಗಳ ಬಗ್ಗೆ ತಿಳಿದುಕೊಂಡರೆ ಅವುಗಳ ಉಪಯೋಗವನ್ನು ಸಂಪೂರ್ಣವಾಗಿ ಪಡೆಯಬಹುದು.

ಹಾಗಾದರೆ ಯಾವ ಹಣ್ಣಿನ ಸಿಪ್ಪೆಯಲ್ಲಿ ಏನಿದೆ ಎಂದು ತಿಳಿಯೋಣ

  • ದಾಳಿಂಬೆ ಸಿಪ್ಪೆಯು ಮೊಡವೆ, ಕಜ್ಜಿ, ಕೂದಲು ಉದುರುವುದು, ತಲೆ ಹೊಟ್ಟನ್ನು ನಿವಾರಣೆ ಮಾಡುವುದರ ಜತೆಗೆ ಹೃದಯ ಸಂಬಂಧಿ ಕಾಯಿಲೆ, ಗಂಟಲು ನೋವು, ಹಲ್ಲಿನ ಸ್ವಚ್ಛತೆ, ಸಡಿಲವಾದಲ್ಲಿ ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ.
  • ಕಿತ್ತಳೆ ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ವಿಶೇಷವಾಗಿ ಉಸಿರಾಟದ ತೊಂದರೆಗಳಾದ ಅಸ್ತಮಾ, ಬ್ರಾಂಕೈಟಿಸ್ ಮೊದಲಾದ ಉಸಿರು ಸಂಬಂಧಿ ರೋಗಗಳಿಂದ ರಕ್ಷಣೆ ಪಡೆಯಬಹುದು. ಇದನ್ನು ಒಣಗಿಸಿ ಪುಡಿ ಮಾಡಿ ಸಹ ಸೇವಿಸಬಹುದು.
  • ಕಲ್ಲಂಗಡಿ ಸಿಪ್ಪೆಯ ಬಿಳಿ ಭಾಗದಲ್ಲಿ ಇರುವಂತಹ ಹಲವಾರು ಪೌಷ್ಟಿಕಾಂಶಗಳು ತೂಕ ಕಡಿಮೆ ಮಾಡಲು ನೆರವಾಗುವುದು. ಕಲ್ಲಂಗಡಿ ಸಿಪ್ಪೆಯನ್ನು ತ್ವಚೆಗೆ ಉಜ್ಜಿಕೊಂಡರೆ ಜಿಡ್ಡಿನಂಶ ಹೊರಬಂದು ತ್ವಚೆಯ ಕಾಂತಿ ಹೆಚ್ಚಾಗುವುದು.

  • ನಿಂಬೆಯ ಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಬ್ಯಾಂಡೇಜ… ಬಟ್ಟೆಯಲ್ಲಿ ಸುತ್ತಿಕೊಂಡು ನೋವಿರುವ ಜಾಗದ ಮೇಲೆ ಕಟ್ಟಿಕೊಳ್ಳಬೇಕು. ಎರಡರಿಂದ ಮೂರು ಗಂಟೆ ಹಾಗೆಯೇ ಕಟ್ಟಿಕೊಂಡಿದ್ದರೆ ನೋವು ನಿವಾರಣೆಯಾಗುತ್ತದೆ.
  • ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲಿಗೆ ಉಜ್ಜಿಕೊಳ್ಳುವುದರಿಂದ ಹಲ್ಲು ಬಿಳಿಯಾಗುವುದು. ಸುಟ್ಟ ಚರ್ಮದ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಇಡುವುದರಿಂದ ಕೂಡ ನೋವು ಶಮನವಾಗುವುದು. ಒಡೆದ ಪಾದಗಳಿಗೆ ಬಾಳೆಹಣ್ಣಿನ ಸಿಪ್ಪೆ ಹಾಕಿ ಉಜ್ಜಿಕೊಂಡರೆ ಒಂದು ವಾರದಲ್ಲಿ ಉತ್ತಮ ಫಲಿತಾಂಶ ಕಂಡು ಬರುವುದು. ಕಿಡ್ನಿಯಲ್ಲಿ ಕಲ್ಲು ಕರಗಿಸುವುದು ಹಾಗೂ ತೂಕ ಇಳಿಸಿಕೊಳ್ಳಲು ಬಾಳೆ ಸಿಪ್ಪೆಯ ಜ್ಯೂಸ್‌ ಸಹಕಾರಿ.

  • ಪಪ್ಪಾಯಿ ಹಣ್ಣಿನ ಸಿಪ್ಪೆ ತಿನ್ನಲು ಕಹಿಯಾಗಿರಬಹುದು. ಆದರೆ ಪಪ್ಪಾಯಿ ಸಿಪ್ಪೆಯಲ್ಲಿ ಕರುಳನ್ನು ಸ್ವಚ್ಛಗೊಳಿಸುವ ಕೆಲವು ರಾಸಾಯನಿಕ ಅಂಶಗಳಿವೆ. ಒಂದು ವೇಳೆ ಅಜೀರ್ಣ, ಮಲಬದ್ಧತೆ ಮೊದಲಾದ ಸಮಸ್ಯೆಗಳು ಎದುರಾದರೆ ಪಪ್ಪಾಯಿಯ ಸಿಪ್ಪೆಯನ್ನು ನುಣ್ಣಗೆ ಅರೆದು ಮಜ್ಜಿಗೆಯೊಂದಿಗೆ ಬೆರೆಸಿ ಒಂದು ಲೋಟ ಕುಡಿದರೆ ಮರುದಿನ ಹೊಟ್ಟೆ ಶುದ್ಧವಾಗುತ್ತದೆ.
  • ಸೇಬುಹಣ್ಣಿನ ಸಿಪ್ಪೆಯಲ್ಲಿ ನಾರಿನಂಶ ಹೇರಳವಾಗಿದೆ. ಇದು ಮಲಬದ್ಧತೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಅಲ್ಲದೇ ಈ ಸಿಪ್ಪೆಯನ್ನು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕೆಲವು ಬಗೆಯ ಕ್ಯಾನ್ಸರ್‌ಗಳನ್ನೂ ತಡೆಯಲು ಸಾಧ್ಯವಾಗುತ್ತದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಸೇಬುಗಳ ಸಿಪ್ಪೆಗಳ ಮೇಲೆ ಮೇಣದ ಲೇಪನವನ್ನು ಹಾಕುವ ಕಾರಣ ಬಿಸಿನೀರಿಗೆ ಪ್ಪು ಬೆರೆಸಿ ಚೆನ್ನಾಗಿ ತೊಳೆದುಕೊಂಡು ಬಳಿಕವೇ ಸೇವಿಸಬೇಕು.