ಪ್ರಾಣಯಾಮ ಮಾಡುವುದರಿಂದ ದೇಹವು ಸ್ವಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

0
4709

ಪ್ರಾಣಯಾಮ ಮಾಡುವುದರಿಂದ ದೇಹವು ಸ್ವಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

Also read: ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ದೇಹಕ್ಕೆ ಯೋಗ ಅಗತ್ಯ

ಪ್ರಾಣಯಾಮ ದಿಂದ ದೇಹವು ಸ್ವಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಪರಿಚಲನೆಯ ವ್ಯವಸ್ತೆಯನ್ನೂ ಸುಧಾರಿಸುತ್ತದೆ. ಹಾಗೂ ದೇಹದ ವಿಷಕಾರಿ ಅಂಶಗಳನ್ನು ಹೊರಗೆ ಹೋಗುವಂತೆ ಮಾಡುತ್ತದೆ. ಸೈನಸ್, ಅಸ್ತಮಾ, ಬೊಜ್ಜು, ಖಿನ್ನತೆ, ಮೈಗ್ರೈನ್ ಮೊದಲಾದ ಸಮಸ್ಯಗಳಿದ್ದರೆ ದಿನ ನಿತ್ಯ ಪ್ರಾಣಾಯಾಮ ಮಾಡಿ.

ಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯ ತುಂಬುವುದರ ಜೊತೆಗೆ ದಿನ ನಿತ್ಯದ ಕೆಲಸದಲ್ಲಿ ಬರುವ ಒತ್ತಡವನ್ನು ದೂರಮಾಡುತ್ತದೆ. ಇದು ದೇಹದ ಚೈತನ್ಯ ತ್ವರಿತ ಗತಿಯಲ್ಲಿ ಹರಚ್ಚಿಸಲು ನೆರವಾಗುತ್ತದೆ. ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸುತ್ತದೆ.

ಇದರಿಂದಾಗಿ ಚೆನ್ನಾಗಿ ನಿದ್ರೆ ಬರುತ್ತದೆ. ಭಾವನಾತ್ಮಕ ಒತ್ತಡಗಳಿಗೂ ದೂರವಿರುವಂತೆ ಮಾಡಿ, ನೆಮ್ಮದಿಯ ಮನಸ್ಥಿತಿ ಕಾರಣವಾಗುತ್ತದೆ.

ಆಳವಾಗಿ ಉಸಿರಾಡುವುದರಿಂದ ದೇಹಕ್ಕೆ ಹೆಚ್ಚು ಆಮ್ಲಜನಕ ಸರಬರಾಜು ಆಗುವಂತೆ ಮಾಡುತ್ತದೆ. ಈ ಮೂಲಕ ಏಕಾಗ್ರತೆ ಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಶ್ರವಣ ಶಕ್ತಿ ಮತ್ತು ದೈಷ್ಟಿ ಇನ್ನಷ್ಟು ಚಿನ್ನಾಗಿ ಕೂಡ ಇದು ನೆರವಾಗುತ್ತದೆ.

ಪ್ರಾಣಾಯಾಮ ಮಾಡುವ ವಿಧಾನ

ಕಾಲುಗಳನ್ನು ಮಡಚಿ ಕುಳಿತುಕೊಳ್ಳಬೇಕು. ಬಲ ಹೆಬ್ಬೆರಳಿನಿಂದ ಮೂಗಿನ ಬಲ ಭಾಗದ ಹೊಳ್ಳೆಯನ್ನು ಮುಚ್ಚಿಕೊಳ್ಳಬೇಕು. ಈಗ ಎಡ ಹೊಳ್ಳೆಯಿಂದ  ಆಳವಾಗಿ ಉಸಿರು ಎಳೆದುಕೊಂಡು ಉಂಗುರ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಿ ಬಲ ಹೊಳ್ಳೆಯಿಂದ ಹೊರಗೆ ಬಿಡಬೇಕು. ಅದೇ ರೀತಿ ನಂತರ ಬಲ ಹೊಳ್ಳೆಯಿಂದ ಉಸಿರು ಎಳೆದುಕೊಂಡು ಎಡ ಹೊಳ್ಳೆಯಿಂದ ಹೊರಗೆ ಬಿಡಬೇಕು.

Also read: ನಿಮಗೆ ಉಸಿರಾಟದ ತೊಂದರೆ ಇದ್ದರೆ ಇದನ್ನು ಓದಲೇಬೇಕು!!!