ಹುಣಸೆ ಎಲೆ, ಹಣ್ಣು, ಬೀಜ, ತೊಗಟೆಯಲ್ಲಿನ ಔಷಧೋಪಯೋಗಗಳು..!!

0
3767

Kannada News | Health tips in kannada

  1. ಹುಣಸೆ ಎಲೆಗಳನ್ನು ಯೋನುವರೇ ಲೋಟ ನೀರಿನಲ್ಲಿ ಹಾಕಿ ಕುಡಿಸಿ, ಅರ್ಧಕ್ಕೆ ಬರುವ ತನಕ ಇಂಗಿಸಿ. ಈ ಬೆಂದ ಎಲೆಗಳನ್ನು ಕಿವಾಚಿ ಎರಡು ಚಿಟಿಕೆ ಹುರಿದ ಇಂಗು, ಒಂದು ಚಿಟಿಕೆ ಉಪ್ಪು ಬೆರೆಸಿ ಕುಡಿದರೆ ಕೆಮ್ಮು ಕಫ ನಿವಾರಣೆಯಾಗುತ್ತದೆ.

Image result for Tamarind

2. ಹುಣಸೆಯ ಮರದಲ್ಲಿ ಮುಂದಕ್ಕೆ ಚಾಚಿರುವ ತೊಗಟೆಯನ್ನು ತೆಗೆದು ಸುತ್ತು ಅದರ ಪುಡಿಯನ್ನು ನಿತ್ಯ ಬೆಳೆಗ್ಗೆ ಮತ್ತು ರಾತ್ರಿ ಎರಡು ಚಿಟಿಕೆಯಷ್ಟನ್ನು ನೀರಿನಲ್ಲಿ ಹಾಕಿ ಸೇವಿಸಿದರೆ ಕ್ಷಯ ರೋಗಿಗಳಿಗೆ ಹಿತಕರ. (೩೦-೪೫ ದಿನ ಔಷಧಿ ಸೇವನೆ ಅಗತ್ಯ. ಪಥ್ಯ: ಹಳೆಯ ಅಕ್ಕಿಯ ಅನ್ನ, ತೊಗರಿಬೇಳೆ ಸಾರು, ಹಾಲು, ಉದ್ದು, ಹುರುಳಿ, ದ್ರಾಕ್ಷಿ, ಬಿಸಿ ನೀರು.)

Image result for Tamarind tree

3. ಮೂರು ಗಜ್ಜುಗಗಳಷ್ಟು ಗಾತ್ರದ ಹಳೆಯ ಹುಣಸೆಹಣ್ಣನ್ನು ಎಳೆನೀರಿನಲ್ಲಿ ಕದಡಿ, ಸೋಸಿ ಕುಡಿದರೆ ಬಹುಮೂತ್ರ ಹಾಗು ಉರಿಮೂತ್ರದ ಸಮಸ್ಯೆ ನಿವಾರಣೆ.

4. ಬಾಳೆಹಣ್ಣಿನ ಜೊತೆ ಹುಣಸೆಹಣ್ಣನ್ನು ಕಿವಾಚಿ ನೀರು ಬೆರೆಸಿ ಸೇವಿಸಿದರೆ ಮಲಭಾದ್ದತೆ ದೂರವಾಗುವುದು. (ದಿನಕ್ಕೆ ೧-೨ ಬರಿ)

Image result for Tamarind and banana

5. ೧೦೦ ಮಿ.ಲೀಟರ್ ಮೊಸರು, ೧೦೦ ಮಿ.ಲೀಟರ್ ಹುಣಸೆ ಸೊಪ್ಪಿನ ರಸ ಎರಡನ್ನೂ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಮೂತ್ರ ಕಟ್ಟು ಸರಿಯಾಗುತ್ತದೆ.

Image result for Tamarind and curd

6. ಹುಣಸೆಯ ರಸ ಹಚ್ಚಿದರೆ ದದ್ದು ಗುಣವಾಗುತ್ತದೆ.

Related image

7. ಹುಣಸೆಯಾ ಎಲೆಗಳನ್ನು ಮಜ್ಜಿಗೆಯಲ್ಲಿ ಕಿವಾಚಿ ಸೋಸಿ ಅದರಲ್ಲಿ ರಕ್ತ ಬೋಳ ಮತ್ತು ಸಾಸಿವೆಯನ್ನು ಸೇರಿಸಿ, ಬೇಯಿಸಿ, ಅರಿದು ಕಾಲಿನ ಅಣಿಯ ಮೇಲೆ ಆಗಾಗ್ಗೆ ಹಚ್ಚುತ್ತಿದ್ದರೆ ಆಣಿ ಗುಣವಾಗುತ್ತದೆ.

8. ಹಳೆಯ ಹುಣಸೆಹುಳಿ ಮತ್ತು ಚಿಟಕೆ ಕೆನೆ ಸುಣ್ಣವನ್ನು ಅರೆದು ತೆಳ್ಳಗಿನ ಬಟ್ಟೆಯಲ್ಲಿ ಕಟ್ಟಿದರೆ ಅಂಡ ವೃದ್ಧಿ ವಾಸಿಯಾಗುತ್ತದೆ. (೭ರಿಂದ ೧೪ ದಿನ)

9. ಹೆಚ್ಚಿನ ಎಲ್ಲ ವೈದ್ಯಕೀಯ ಪದ್ಧತಿಗಳಲ್ಲಿ ಹುಣಸೆಹಣ್ಣಿನ ಬಳಕೆಯಿದೆ.

10. ಜೇನುತುಪ್ಪದ ಜೊತೆ ಹುಣಸೆಹಣ್ಣಿನ ರಸ ಸೇವಿಸಿದರೆ ಪಚನಕ್ರಿಯೆ ಉತ್ತಮವಾಗುತ್ತದೆ. ವಾಯು ಭಾದೆ ಗುಣವಾಗುತ್ತದೆ.

11. ಹುಣಸೆ ಎಲೆಗಳನ್ನು ಬಟ್ಟೆಯಲ್ಲಿ ಕಟ್ಟಿ ಶಾಖ ನೀಡಿದರೆ ಗಂಟು ನೋವು ನಿವಾರಣೆ. ಹುಣಸೆಹಣ್ಣು ಮತ್ತು ಉಪ್ಪನ್ನು ಅರೆದು ಗಂಟು ನೋವಿರುವ ಕಡೆಗೆ ಹಚ್ಚಿದರೂ ನೋವು ಕಡಿಮೆ ಯಾಗುತ್ತದೆ.

Image result for Tamarind leave

12. ಹುಣಸೆಹಣ್ಣಿನ ರಸವನ್ನು ಬಿಸಿ ನೀರಿಗೆ ಸೇರಿಸಿ ಬಾಯಿ ಮತ್ತು ಗಂಟಲು ಮುಕ್ಕಳಿಸಿದರೆ ಗಂಟಲು ನೋವು, ಬಾಯಿಹುಣ್ಣು ಕಡಿಮೆಯಾಗುತ್ತದೆ.

Image result for Tamarind juice with hot water

13. ಹುಣಸೆಹಣ್ಣಿನ ರಸದ ಸೇವನೆ ಧಾತ್ತುರಿಯ ವಿಷಾದ ಪ್ರಭಾವ ಮತ್ತು ಮದ್ಯದ ದುಷ್ಪರಿಣಾಮಗಳನ್ನು ಕಡಿಮೆಯಾಗಿಸುತ್ತದೆ.

14. ಹುಣಸೆಬೀಜದ ಕಷಾಯ ಧೀರ್ಘಕಾಲಿನ ಭೇದಿಗೆ ಉತ್ತಮ ಮದ್ದು.

Image result for hunase kashaya

15. ಹುಣಸೆಯ ಬೀಜವನ್ನು ನಿಂಬೆ ರಸದಲ್ಲಿ ಅರಿದು ಹಚ್ಚಿದರೆ ತೂರಿ ಕಜ್ಜಿ ಗುಣವಾಗುತ್ತದೆ.

Image result for Tamarind seeds in lemon

16. ಹುಣಸೆ ಬೀಜಗಳನ್ನು ನೀರಿನಲ್ಲಿ ನೆನಸಿ ಮೇಲಿನ ಸಿಪ್ಪೆ ತೆಗೆದು ಬಿಸಿಲಿನಲ್ಲಿ ಒಣಗಿಸಬೇಕು. ಇವುಗಳನ್ನು ಹುರಿದು ಪುಡಿ ಮಾಡಿ, ಅರ್ಧದಿಂದ ಒಂದು ಚಮಚ ನಿತ್ಯ ಹಾಲಿನೊಂದಿಗೆ ಕುಡಿದರೆ ಶೀಘ್ರ ವೀರ್ಯಸ್ಖಲನ ನಿವಾರಣೆಯಾಗುತ್ತದೆ.

17. ಹುಣಸೆಹಣ್ಣಿಗೆ ಮೆಣಸಿನ ಪುಡಿ, ಉಪ್ಪು ಬೆರೆಸಿ ಸೇವಿಸಿದರೆ ಅಜೀರ್ಣ – ಅರುಚಿ ನಿವಾರಣೆ.

18. ಹುಣಸೆ ಹಳೆಯದಾದಷ್ಟು ಹೃದಯಕ್ಕೆ ಹಿತಕರ. ಅಲ್ಲದೆ ವಾತ, ಪಿತ್ತ, ಕಫ ಮೂರನ್ನು ನಿಗ್ರಹಿಸುತ್ತದೆ.

19. ಕುಷ್ಠ ರೋಗ ಚಿಕಿತ್ಸೆಯಲ್ಲಿ ಬಳಸುವ ಔಷಧಗಳಲ್ಲಿ ಹುಣಸೇ ಹಣ್ಣು ಒಂದು.

Also Read: ನೀರಿಗೆ ಶುಂಠಿ ಸೇರಿಸಿ ಸೇವಿಸದರೆ ಏನ್ ಆಗುತ್ತೆ ಗೊತ್ತಾ..!