ರೋಗ ನಿರೋಧಕವಾಗಿ ಮತ್ತು ಸಿಹಿ ತಿಂಡಿಗಳ ಪರಿಮಳಕ್ಕಾಗಿ ಉಪಯೋಗಿಸುವ ಏಲಕ್ಕಿಯನ್ನು ಅತಿಯಾಗಿ ತಿಂದರೆ ಎಷ್ಟೊಂದು ತೊಂದರೆಗಳಿವೆ ನೋಡಿ..

0
1275

ಅತಿಯಾದರೆ ಅಮೃತವೂ ವಿಷವಂತೆ ಈ ಮಾತನ್ನು ಹಿರಿಯರು ಹೇಳಿರುವುದು ಸುಳ್ಳಲ್ಲ ಏಕೆಂದರೆ ಹಿರಿಯರು ಮಾಡಿದ ಗಾದೆಗಳು ಅನುಭವದ ಮಾತುಗಳು ಎಂದು ಸುಳ್ಳಲ್ಲ ಇದೆಲ್ಲ ಯಾಕೆ ಹೇಳುತ್ತಿರುವುದು ಅಂದ್ರೆ ರೋಗನಿರೋಧಕ ಶಕ್ತಿ, ಜೀರ್ಣ ಶಕ್ತಿ ವೃದ್ಧಿಸುವ ಜತೆಗೆ ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಏಲಕ್ಕಿ ಅತ್ತಿಯಾಗಿ ತಿಂದರೆ ಆರೋಗ್ಯಕ್ಕೆ ಮಾರಕವಂತೆ.

Also read: ನಿತ್ಯ ಏಲಕ್ಕಿ ನೀರು ಕುಡಿದರೆ ದೇಹಕ್ಕೆ ಇಷ್ಟೆಲ್ಲ ಲಾಭವಾಗುತ್ತೆ ಎಂದು ತಿಳಿದರೆ, ಈಗಿನಿಂದಲೇ ಇದನ್ನು ಕುಡಿಯಲು ಶುರುಮಾಡ್ತೀರ…!

ಆಯೋ ಇದೇನು ಹೊಸ ವಿಷಯ ನಾವು ಏಲಕ್ಕಿಯನ್ನು ರೋಗ ನಿರೋಧಕವಾಗಿ ಮತ್ತು ಸಿಹಿಯಾದ ಆಹಾರ ಪದಾರ್ಥಗಳಲ್ಲಿ ಬಳಸುತ್ತೇವೆ ಇಷ್ಟು ದಿನಗಳು ಇಲ್ಲದು ಈಗೇಕೆ ಅಂತ ಗೊಣಗಬಹುದು ಆದರೆ ಈ ಕುರಿತು ಹಲವಾರು ಪರೀಕ್ಷೆಗಳು ನಡೆದು ಅತ್ತಿಯಾದ ಏಲಕ್ಕಿ ಸೇವನೆಯಿಂದ ಆರೋಗ್ಯದಲ್ಲಿ ಆಗುವ ತೊಂದರೆಗಳನ್ನು ತಿಳಿಸಿದ್ದಾರೆ.

ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಏಲಕ್ಕಿಯನ್ನು, ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳಕ್ಕಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಅನೇಕ ಔಷಧಿ ಗುಣಗಳಿದ್ದು, ಕಾಫಿ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುತ್ತಾರೆ. ವಾಣಿಜ್ಯ ಬೆಳೆಯಾಗಿ ಪ್ರಸಿದ್ಧಿ ಪಡೆದಿರುವ ಇದು ಮಸಾಲೆ ರಾಜ ಎಂದೇ ಖ್ಯಾತಿ ಪಡೆದಿದೆ.

ಮೊದಲಿನಿಂದ ಬಂದಿರುವ ವಿಷಯ ಅಂದರೆ ಏಲಕ್ಕಿಯಿಂದ ರೋಗನಿರೋಧಕ ಶಕ್ತಿ, ಜೀರ್ಣ ಶಕ್ತಿ ವೃದ್ಧಿಸುವ ಜತೆಗೆ ಆರೋಗ್ಯಕ್ಕೆ ಉತ್ತಮ ಎಂದು ಸಾಕಷ್ಟು ಉಪಯೋಗಗಳು ತಿಳಿಸಿವೆ. ಆದರೆ ಏಲಕ್ಕಿಯಿಂದಲೂ ಅನೇಕ ಅಡ್ಡಪರಿಣಾಮ ಇದೆ ಎಂದರೆ ನೀವು ನಂಬಲೇಬೇಕು. ಕೆಲವರಿಗೆ ಏಲಕ್ಕಿ ಜಗಿಯುವ ಹವ್ಯಾಸವಿರುತ್ತದೆ. ಅತೀಯಾದ ಏಲಕ್ಕಿ ಸೇವನೆಯಿಂದ ಆಗುವ ಅನೇಕ ದುಷ್ಟಪರಿಣಾಮಗಳು ಇಲ್ಲಿವೆ ನೋಡಿ.

Also read: ಪ್ರಯಾಣ ಮಾಡುವಾಗ ವಾಂತಿ ಹಾಗೂ ತಲೆಸುತ್ತಿನಿಂದ ಮುಕ್ತಿ ಸಿಗಬೇಕಾದರೆ ಈ ಮನೆಮದ್ದುಗಳನ್ನು ಪಾಲಿಸಿ…!!

ಅಲರ್ಜಿ ಸಮಸ್ಯೆ:

ಏಲಕ್ಕಿಯನ್ನು ದೀರ್ಘ ಸಮಯದಿಂದ ಅಥವಾ ಅಧಿಕವಾಗಿ ಉಪಯೋಗಿಸಿದರೆ ಚರ್ಮದ ಅಲರ್ಜಿ ಸಮಸ್ಯೆ ಕಾಡುತ್ತದೆ. ಜತೆಗೆ ಎದೆ ನೋವು, ಗಂಟಲು ಸಮಸ್ಯೆ ಬರಬಹುದು. ಆರಾಮದಾಯಕವಾಗಿ ಇರಲಾರದು. ಉಸಿರಾಟದ ತೊಂದರೆ ಹೆಚ್ಚಾಗುತ್ತದೆ.

ಪಿತ್ತಕೋಶದ ತೊಂದರೆ:

ಮಿತಿಗಿಂತ ಅಧಿಕ ಏಲಕ್ಕಿ ಸೇವನೆ ಪಿತ್ತಕೋಶದಲ್ಲಿ ಕಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ. ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದುಬಂದಿದೆ. ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ಆಗದೆ ಇದ್ದರೆ ಪಿತ್ತಕೋಶದಲ್ಲಿ ಕಲ್ಲುಗಳು ಬೆಳೆಯಲಾರಂಭಿಸುತ್ತವೆ. ನೀವು ಈಗಾಗಲೇ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದಲ್ಲಿ, ಏಲಕ್ಕಿ ಸೇವನೆ ತಕ್ಷಣ ನಿಲ್ಲಿಸಿ.

ಎದೆಯಲ್ಲಿ ಉರಿಊತದ ತೊಂದರೆ:

ಏಲಕ್ಕಿಯಲ್ಲಿ ಖಾರದ ಅಂಶವಿರುವುದರಿಂದ ಮತ್ತು ಅಧಿಕ ಒತ್ತಡ ನೀಡುತೆ ಇದರಿಂದ ತಿಂದ ಆಹಾರವು ಜೀರ್ಣದ ಸಮಯದಲ್ಲಿ ಖಾರವಾದ ಮತ್ತು ಉರಿಊತ ಕಂಡು ಬರುತ್ತೆ.

ಚರ್ಮದ ಬಿರುಕು:

ಚಳಿಗಾಲದಲ್ಲಿ ಕಂಡು ಬರುವ ಚರ್ಮದ ಬಿರಿಕು ಏಲಕ್ಕಿ ಸೇವನೆ ಹೆಚ್ಚಾದರೆ ಚರ್ಮದ ತೊಂದರೆಗಳು ಕಂಡು ಬರುತ್ತದೆ ಮತ್ತು ಅನೇಕ ಚರ್ಮದ ಸಮಸ್ಯೆಗಳು ಕಂಡು ಬರುತ್ತದೆ.

ಔಷಧಿ ಸೇವಿಸುವವರು ಏಲಕ್ಕಿ ಸೇವಿಸಬೇಕ?

ನೀವು ಯಾವುದಾದರು ಔಷಧಿ ಸೇವಿಸುತ್ತಿದ್ದಲ್ಲಿ, ಏಲಕ್ಕಿ ಬಳಕೆಯಿಂದ ಆದಷ್ಟು ದೂರವಿರಿ. ಈ ಸಂದರ್ಭ ಏಲಕ್ಕಿ ಸೇವಿಸಿದರೆ ಗಂಭೀರವಾದ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಏನಾದರೂ ಇದನ್ನು ಕಡೆಗಣಿಸಿದರೆ, ನೀವು ಸೇವಿಸುವ ಔಷಧಿಯಿಂದಲೇ ತೊಂದರೆಗೆ ಒಳಗಾಗುವಿರಿ.

Also read: ಆರೋಗ್ಯದ ಜೊತೆ ಜೊತೆಗೆ ಲವಂಗದಿಂದ ಹಲವಾರು ಲಾಭಗಳಿವೆ ಅನ್ನೋದು ನಿಮಗೆ ಗೊತ್ತೇ?

ಈ ಕೆಳಗಿನ ಔಷಧಿಗಳನ್ನು ಸೇವಿಸುತ್ತಿದ್ದಲ್ಲಿ ಏಲಕ್ಕಿಯಿಂದ ದೂರವಿರುವುದು ಒಳಿತು.

ಹೆಚ್​ಐವಿ, ಪಿತ್ತಕೋಶದ ಸಮಸ್ಯೆ, ಖಿನ್ನತೆ, ಪದೇ ಪದೇ ಮಲ-ಮೂತ್ರ ಹೋಗುವ ಸಮಸ್ಯೆ ಹಾಗೂ ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ಏಲಕ್ಕಿಯನ್ನು ಸೇವಿಸಬಾರದು.