ಮಧುಮೇಹಿಗಳು ಸಕ್ಕರೆ ಬದಲಿಗೆ ಬೆಲ್ಲ ಬಳಸಬಹುದೇ? ಇದಕ್ಕೆ ಸೂಕ್ತ ಉತ್ತರ ಇಲ್ಲಿದೆ ನೋಡಿ….

0
3439

ಬೆಲ್ಲ ಬಾಯಿಗೆ ಮಾತ್ರ ಸಿಹಿ ಅಲ್ಲ, ಆರೋಗ್ಯಕ್ಕೂ ಸಿಹಿಯೇ. ಸಕ್ಕರೆಗೆ ಬದಲಿಯಾಗಿ ಬೆಲ್ಲ ಉಪಯೋಗಿಸುವುದು ಹಣ ಹಾಗೂ ಆರೋಗ್ಯ ಎರಡೂ ದೃಷ್ಟಿಯಿಂದಲೂ ಉತ್ತಮ. ಆದರೆ ಈ ಮಾತು ಮಧುಮೇಹಿಗಳಿಗೆ ಅನ್ವಯಿಸುವುದಿಲ್ಲ. ನಿಮಗೆಲ್ಲ ತಿಳಿದಿರುವ ಹಾಗೆ ಬೆಲ್ಲದಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ.

ಸಕ್ಕರೆಗೆ ಹೋಲಿಸಿದರೆ ಬೆಲ್ಲ ಹೆಚ್ಚು ಆರೋಗ್ಯಕರ ಎಂದು ಹೇಳಲಾಗುತ್ತದೆ. ಹಾಗಿದ್ದರೂ ಮಧುಮೇಹಿಗಳು ಬೆಲ್ಲ ತಿನ್ನಬಹುದೇ? ಕೆಲವು ಜನರಲ್ಲಿ ಈ ರೀತಿಯಾದ ಪ್ರಶ್ನೆ ಇದ್ದೆ ಇರುತ್ತೆ. ಇನ್ನು ಕೆಲವರು ಇಲ್ಲ ಬೆಲ್ಲ ಸಕ್ಕರೆಗಿಂತ ಒಳ್ಳೆಯದು ಎಂದು ಮಧುಮೇಹಿಗಳು ಇದನ್ನು ಸೇವಿಸುತ್ತಾರೆ. ಇಷ್ಟೆಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಖಂಡಿತ ಇಲ್ಲ, ಮಧುಮೇಹಿಗಳು ಬೆಲ್ಲವನ್ನು ತಿನ್ನುವಂತಿಲ್ಲ. ಅದರಿಂದ ಮಾಡಿದ ಪದಾರ್ಥಗಳನ್ನೂ ತಿನ್ನುವಂತಿಲ್ಲ. ಇದರಲ್ಲಿರುವ ಸುಕ್ರೋಸ್‌ ಅಂಶ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚುವಂತೆ ಮಾಡುವುದು. ಅಷ್ಟೇ ಯಾಕೆ ಇದರಲ್ಲಿ ಕಬ್ಬಿಣದಂಶ, ನಾರಿನಂಶ ಹೆಚ್ಚಿದ್ದರೂ ಮಧುಮೇಹಿಗಳಿಗೆ ಒಳ್ಳೆಯದಲ್ಲ. ಯಾಕೆಂದರೆ ಬೆಲ್ಲದಲ್ಲಿ 65 ರಿಂದ 85 ಶೇಕಡಾ ಸಕ್ಕರೆ ಅಂಶವಿರುವುದರಿಂದ ಮಧುಮೇಹಿಗಳು ಬೆಲ್ಲ ಸೇವಿಸದೇ ಇರುವುದೇ ಉತ್ತಮ.

ಹಾಗೆ ನೋಡಲಿಕ್ಕೆ ಹೋದರೆ ಸಕ್ಕರೆ ತಿಂದರೆ ಮಧುಮೇಹಿಗಳಲ್ಲಿ ತಕ್ಷಣವೇ ಸಕ್ಕರೆಯಂಶ ಜಾಸ್ತಿಯಾದರೆ, ಬೆಲ್ಲ ತಿಂದರೆ ನಿಧಾನಕ್ಕೆ ಸಕ್ಕರೆಯಂಶ ಹೆಚ್ಚಾಗುವುದು. ಆದ್ದರಿಂದ ಮಧುಮೇಹಿಗಳು ಸಕ್ಕರೆ ಮತ್ತು ಬೆಲ್ಲವನ್ನು ತಿನ್ನದಿರುವುದೇ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.