ಫೆ.16ರ ಒಳಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್​ ನೇಮಕ; ಸಿಎಲ್​ಪಿ ನಾಯಕ ಸ್ಥಾನವನ್ನು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಪೈನಲ್.?

0
391

ರಾಜ್ಯ ಬಿಜೆಪಿ ಪಕ್ಷದ ಸಚಿವ ಸಂಪುಟ ಮತ್ತು ದೆಹಲಿ ಚುನಾವಣೆ ಪಲಿತಾಂಶ ಹಿನ್ನೆಲೆಯಲ್ಲಿ ತಣ್ಣಗಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕಸರತ್ತು ಮತ್ತೆ ಚುರುಕು ಪಡೆದುಗೊಂಡಿದ್ದು, ಹೈಕಮಾಂಡ್​ ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿ.ಕೆ. ಶಿವಕುಮಾರ್​ ಹಾಗೂ ಸಿಎಲ್​ಪಿ ನಾಯಕ ಸ್ಥಾನವನ್ನು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರಿಗೆ ನೀಡಲು ಹೈಕಮಾಂಡ್ ತಯಾರಿ ನಡೆಸಿದ್ದು. ಫೆ.16ರ ಒಳಗಾಗಿ ಎಲ್ಲವನ್ನೂ ಫೈನಲ್ ಮಾಡಲು ಕಾಂಗ್ರೆಸ್​ ಹೈಕಮಾಂಡ್ ಮುಂದಾಗಿದೆ.

ಹೌದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತಾಗಿ ರಾಜ್ಯ ನಾಯಕರಲ್ಲಿ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಹೈಕಮಾಂಡ್‌ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ದೆಹಲಿ ಚುನಾವಣೆಯ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆಯ ಕುರಿತಾಗಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿತ್ತು. ಅದರೊಳಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ರಾಜ್ಯ ನಾಯಕರಲ್ಲಿರುವ ಭಿನ್ನಮತವನ್ನು ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಆದರೆ ಇದೀಗ ದೆಹಲಿ ಚುನಾವಣೆ ಫಲಿತಾಂಶ ಹೊರ ಬಿದಿದ್ದು. ಈ ಹಿನ್ನೆಲೆಯಲ್ಲಿ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡುವುದು ಬಹುತೇಕೆ ಖಚಿತವಾಗಿದೆ.

ಇದೇ ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರ ಅಧಿವೇಶನ ನಡೆಸುವ ಸಾಧ್ಯತೆ ಇದ್ದು, ಫೆ.16ರ ಒಳಗಾಗಿ ಎಲ್ಲವನ್ನೂ ಫೈನಲ್ ಮಾಡಲು ಕಾಂಗ್ರೆಸ್​ ಹೈಕಮಾಂಡ್ ಮುಂದಾಗಿದೆ. ಹೀಗಾಗಿ ಇನ್ನೂ ಕೇವಲ 4 ದಿನಗಳಲ್ಲಿ ಡಿಕೆಶಿ ಕಾಂಗ್ರೆಸ್​ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ. ಒಂದು ಲೆಕ್ಕಾಚಾರದಲ್ಲಿ ನೋಡಿದರೆ ಈಗಾಗಲೇ ಡಿಕೆಶಿ ಅವರು ಅಧಿಕಾರ ಸ್ವೀಕರಿಸಬೇಕಿತ್ತು. ಆದರೆ ಆದರೆ ಇಡಿ ಪ್ರಕರಣ ವಿಚಾರವನ್ನು ಮುಂದಿಟ್ಟುಕೊಂಡು ಡಿಕೆಶಿಗೆ ಅಧ್ಯಕ್ಷ ಸ್ಥಾನ ನೀಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಅದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಒಬ್ಬರಾಗಿದ್ದರು.

ಸಿದ್ದರಾಮಯ್ಯ ವಿರೋಧ ಮಾಡಿದ್ದೇಕೆ?

ಯಡಿಯೂರಪ್ಪ ಅವರನ್ನು ಜೈಲಿಗೆ ಹೋಗಿ ಬಂದವರು ಎಂದು ನಾವು ಆರೋಪ ಮಾಡಿದ್ದೇವೆ. ಹೀಗಾಗಿ ಜೈಲಿಗೆ ಹೋಗಿ ಬಂದಿರುವ ಡಿ.ಕೆ. ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ, ಜನರ ನಡುವೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಲ್ಲದೆ, ಡಿಕೆಶಿ ಅವರನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಳ್ಳುವುದು ಕಷ್ಟ. ಅದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾದರೆ ನಾನು ವಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಲ್ಲಿ ಮುಂದುವರೆಯುತ್ತೇನೆ. ನೀವು ಅಧ್ಯಕ್ಷರಾದರೆ ಅಹಿಂದ ಮತಗಳು ಮತ್ತೆ ಕಾಂಗ್ರೆಸ್ ಪಕ್ಷದ ಕಡೆಗೆ ವಾಲುತ್ತದೆ. ಇದು ಬೇಡವೆಂದರು ಡಿಕೆಶಿಯಿಂದ ತಪ್ಪಿಸಿ ಎಂ.ಬಿ. ಪಾಟೀಲ್ ಅವರಿಗೆ ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಸಾಕಷ್ಟು ಶ್ರಮ ವಹಿಸಿದ್ದರು.

ಅಲ್ಲದೆ, ಸಿಎಲ್​ಪಿ ಸ್ಥಾನವನ್ನೂ ತನಗೆ ನೀಡಬೇಕು ಇಲ್ಲದಿದ್ದರೆ ನನಗೆ ವಿರೋಧ ಪಕ್ಷದ ನಾಯಕ ಸ್ಥಾನವೂ ಬೇಡ ಎಂದೂ ಹಠ ಹಿಡಿದಿದ್ದರು. ಆದರೆ, ಕಾಂಗ್ರೆಸ್​ ಹೈಕಮಾಂಡ್ ಕೊನೆಗೂ ಅವರ ಮಾತಿಗೆ ಒಪ್ಪದೆ. ಡಿಕೆಶಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದು ಬಹುತೇಕ ಖಚಿತವಾಗಿದ್ದರೆ, ಸಿದ್ದರಾಮಯ್ಯನವರ ಬಳಿಯಿದ್ದ ಸಿಎಲ್​ಪಿ ಸ್ಥಾನವನ್ನೂ ಪರಮೇಶ್ವರ್​ ಅವರಿಗೆ ನೀಡಲು ಮುಂದಾಗಿದೆ. ಇದೆಲ್ಲವೂ ಇದೆ 16 ರ ಒಳಗೆ ಫೈನಲ್ ಆಗುತ್ತೆ ಎಂದು ಹೈಕಮಾಂಡ್ ತಿಳಿಸಿದೆ.

Also read: ನಿಮ್ಮದು ಹೈವೋಲ್ಟೇಜ್​ ಸರ್ಕಾರ, ಮೊದಲು ಯುವಕರಿಗೆ ಉದ್ಯೋಗ ಕೊಡಿ; ಪ್ರಧಾನಿ ಮೋದಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್​ ತಿರುಗೇಟು.!