ಮರುಕಳಿಸಿ ಬರುವ ಪಾರ್ಶ್ವವಾಯು ಕಾಯಿಲೆಗೆ ಹೊಸ ಚಿಕಿತ್ಸೆ ಕಂಡು ಹಿಡಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ.!

0
739

ಪಾರ್ಶ್ವವಾಯು ಕಾಯಿಲೆ ಬಂದರೆ ವ್ಯಕ್ತಿ ಜೀವಂತ ಅಂಗವಿಕಲನಾಗುತ್ತಾನೆ. ಇಂತಹ ಜೀವನ ಯಾರಿಗೂ ಬೇಡವಾಗುತ್ತೆ. ಈ ಕಾಯಿಲೆ ಬರುವ ಮುಂಚಿತವಾಗಿ ಲಕ್ಷಣ ಕೊಡುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ಪರಿಹಾರ ಮಾಡಿದರೆ ಸಮಸ್ಯೆಯನ್ನು ತಡೆಗಟ್ಟಬಹುದು. ಅದರಂತೆ ಜಾಗತಿಕ ಪಾರ್ಶ್ವವಾಯು ಸಂಸ್ಥೆ ಸಮೀಕ್ಷೆ ಪ್ರಕಾರ 6 ಜನರಲ್ಲಿ ಒಬ್ಬರು ಈ ರೋಗಕ್ಕೆ ತುತ್ತಾಗುತ್ತಾರೆ. ಅದರಂತೆ ಪಾರ್ಶ್ವವಾಯು ಮೆದುಳಿನ ನರದ ಕಾಯಿಲೆ. ಮೆದುಳಿನ ರಕ್ತಸಂಚಾರಕ್ಕೆ ಇದ್ದಕ್ಕಿದ್ದ ಹಾಗೆ ಅಡಚಣೆ ಬಂದರೆ ಪಾರ್ಶ್ವವಾಯು ಬರಬಹುದು. ಈ ಅಡಚಣೆ ರಕ್ತ ಹೆಪ್ಪುಗಟ್ಟಿದರೆ/ ರಕ್ತಸ್ರಾವ ಆದರೆ ಬರಬಹುದು ಇದು ಚಿಕಿತ್ಸೆ ನಂತರ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡರು ಕೂಡ ಮತ್ತೆ ಮತ್ತೆ ಬರುತ್ತೆ. ಇದಕ್ಕಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ನೂತನ ಮಾದರಿಯ ಚಿಕಿತ್ಸೆಯನ್ನು ಕಂಡು ಹಿಡಿದಿದ್ದಾರೆ.

Also read: Arthritis ಖಾಯಿಲೆಗೆ ಅನೇಕ ಮಾತ್ರೆಗಳನ್ನು ತೆಗೆದುಕೊಂಡರೂ ನೋವು ಕಡಿಮೆಯಾಗಿಲ್ಲವೆಂದರೆ, ಈ ನೈಸರ್ಗಿಕ ಚಿಕಿತ್ಸೆಗಳ ಮೊರೆಹೋಗಿ!!

ಹೌದು ಪುನಃ ಪುನಃ ಮರುಕಳಿಸುವ ಪಾರ್ಶ್ವವಾಯು (ಸ್ಟ್ರೋಕ್) ತಡೆಯುವ ಸಲುವಾಗಿ ಬೆಂಗಳುರು ಮಣಿಪಾಲ್ ಆಸ್ಪತ್ರೆ ಹೊಸ ಮಾರ್ಗವೊಂದನ್ನು ಶೋಧಿಸಿದೆ. ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. 90 ವರ್ಷದ ರೋಗಿಯೊಬ್ಬರ ಹೃದಯದ ಭಾಗವನ್ನು ಮುಚ್ಚಿ ಆ ಮೂಲಕ ರಕ್ತ ಗಡ್ಡೆಕಟ್ಟುವುದನ್ನು ನಿಲ್ಲಿಸಲು ಮಾರ್ಗಭಂಜಕ ತಂತ್ರವನ್ನು ಆಸ್ಪತ್ರೆಯ ಹೃದಯರೋಗ ವಿಭಾಗದ ಸಂಶೋಧಕ ಪರಿಣತ ಮುಖ್ಯಸ್ಥ ಡಾ. ರಂಜನ್ ಶೆಟ್ಟಿ ಬಳಕೆ ಮಾಡಿದ್ದಾರೆ.

ಈ ಶಸ್ತ್ರಚಿಕಿತೆ ಸಂಬಂಧ ವಿವರಿಸಿದ ರಂಜನ್ ಶೆಟ್ಟಿ “ಮಧ್ಯ ಕರ್ನಾಟಕ ಭಾಗದವರಾದ ರೋಗಿಗೆ ಪದೇ ಪದೇ ಪಾರ್ಶ್ವವಾಯು ಆಘಾತವಾಗುತ್ತಿತ್ತು. ಅವರನ್ನು ಪರಿಶೀಲಿಸಿದ ಬಳಿಕ ರಕ್ತ ತಿಳಿಯಾಗಲು ಆ ಪ್ರಕಾರ ಆಘಾತದ ಪರಿಣಾಮ ತಗ್ಗಿಸಲು ಔಷಧಿ ನೀಡಲಾಗಿತ್ತು. ಆದರೆ ಅದರಿಂದ ಅವರಿಗೆ ಇನ್ನಷ್ಟು ಪ್ರತಿಕೂಲತೆ ಉಂಟಾಗಿತ್ತು. ರೋಗಿಗೆ ಮೂತ್ರ ಹಾಗೂ ತ್ವಚೆಯಲ್ಲಿ ರಕ್ತಸ್ರಾವವಾಗುತ್ತಿತ್ತು.ಹಾಗಾಗಿ ನಾವು ಅವರಿಗೆ ನೀಡಿದ್ದ ಔಷಧಿಗಳನ್ನು ತೆಗೆದುಕೊಳ್ಳದಂತೆ ಕೇಳಿದೆವು.

Also read: ವೈದ್ಯಲೋಕದಲ್ಲಿ ಮತ್ತೊಂದು ಇತಿಹಾಸ; ಏಡ್ಸ್​ ರೋಗಕ್ಕೆ ಯಶಸ್ವಿ ಚಿಕಿತ್ಸೆ ಏಡ್ಸ್ ವೈರಸ್‍ನಿಂದ ಮುಕ್ತನಾದ ವಿಶ್ವದ ಎರಡನೇ ವ್ಯಕ್ತಿ..!

ಏಕೆಂದರೆ ಪಾರ್ಶ್ವವಾಯು ಆಘಾತ ಸಾವು ಮತ್ತು ವೈಕಲ್ಯತೆಗೆ ಕಾರಣವಾಗುತ್ತದೆ. ರಕ್ತ ಗಡ್ಡೆ ಕಟ್ಟುತ್ತದೆ. ಈ ಗಡ್ಡೆಗಳು ದೇಹದ ಯಾವುದೇ ಭಾಗಕ್ಕೆ ತೆರಳಬಹುದಾಗಿರುತ್ತದೆ. ಇದು ಮೆದುಳಿನ ರಕ್ತ ಪೂರೈಕೆಗೆ ಅಡ್ಡಿವುಂಟು ಮಾಡಿದಾಗ ಪಾರ್ಶ್ವವಾಯುವಿಗೆ ದಾರಿಯಾಗುತ್ತದೆ. “ನಾವು ನವೀನ ಹಾಗೂ ಪರಿಣಾಮಕಾರಿ ಉಪಕರಣವೊಂದರ ಸಹಾಯದಿಂದ ಇವರ ಸಮಸ್ಯೆಗೆ ಪರಿಹಾರ ಕಂಡುಕೊಂಡೆವು.ಎಡ ಹೃತ್ಕರ್ಣದ ಅಪೆಂಡೀಜ್ ಅನ್ನು ಕಾರ್ಡಿಯಾಕ್ ಅಕ್ಲೂಡರ್ ಬಳಸಿ ಮುಚ್ಚಲಾಗಿತ್ತು.ಇದರ ನಂತರ ಅವರಿಗೆ ರಕ್ತ ತಿಳಿಯಾಗುವ ಔಷಧ ಸೇವನೆ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಇದೀಗ ಅವರ ಶಸ್ತ್ರಚಿಕಿಯ್ತ್ಸೆ ಅಭೂತಪೂರ್ವವಾದ ಯಶಸ್ಸು ಕಂಡಿದೆ.”

Also read: ವ್ಯೆದ್ಯಕೀಯ ಲೋಕದಲ್ಲಿ ಮತ್ತೊಂದು ಸಾಧನೆ; 6 ತಿಂಗಳ ಮಗುವನ್ನು ಗರ್ಭದಿಂದ ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಿ ಮತ್ತೆ ಗರ್ಭದೊಳಗೆ ಸೇರಿಸಿದರು..

ಆಸ್ಪತ್ರೆಯ ವೃದ್ದ ರೋಗಿಗಳ ವಿಭಾಗದ ಮುಖ್ಯಸ್ಥರಾದ ಅಮರ್ ನಾಥ್ ಮಾತನಾಡಿ “ಎಟ್ರಿಯಲ್ ಫೈಬ್ರಿಲೇಷನ್ ತೊಂದರೆ ಇರುವ ರೋಗಿಗಳಲ್ಲಿ ಸಾವಿಗೆ ಹಾಗೂ ವೈಕಲ್ಯಕ್ಕೆ ಪಾರ್ಶ್ವವಾಯು ಪ್ರಮುಖ ಕಾರಣವಾಗಿದೆ. ಈ ಪ್ರಕರಣದಲ್ಲಿ ರೋಗಿಗೆ ರಕ್ತ ಸೋರಿಕೆಯಾಗುತ್ತಿದ್ದು ಇದರ ಕುರಿತು ಗಮನ ನೀಡುವುದು ಅಗತ್ಯವಿತ್ತು. ಜತೆಗೆ ರೋಗಿಯ ವಯಸ್ಸು ಆತಂಕವನ್ನು ತಂದಿತ್ತು. ಆದರೆ ಉಪಕರಣದ ಅಳವಡಿಕೆಗೆ ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.ಈಗ ಅವರ ಆರೋಗ್ಯ ಗುಣಮಟ್ಟ ಸುಧಾರಿಸಿದೆ. ಅನಿಗದಿತ ಪಾರ್ಶ್ವವಾಯು ಆಘಾತ ತಡೆಯುವುದಕ್ಕಾಗಿ ವೃದ್ದರಿಗೆ ಈ ಉಪಕರಣ ಅಳವಡಿಸಬಹುದು” ಎಂದು ಹೇಳಿದ್ದಾರೆ.