ಬರುವ ಹಬ್ಬಕ್ಕೆ ಹೊಸದೊಂದು ಸಿಹಿ ಬೇಕು ಅಲ್ವ..? ಹಾಗಾದ್ರೆ ರಸಗುಲ್ಲಾದಷ್ಟೇ ಸಿಹಿಯಾದ ಸ್ಪೆಷಲ್ ಬರ್ಫಿ ಮಾಡಿ ಸವಿದು ನೋಡಿ.

0
1315

ಭಾರತೀಯರ ಧಾರ್ಮಿಕತೆಯ ಪ್ರಕಾರ ವರ್ಷದಲ್ಲಿ ನೂರಾರು ಹಬ್ಬಗಳ ಆಚರಣೆ ಮಾಡುವುದು ಸಾಮಾನ್ಯವಾಗಿದೆ. ಹಾಗೆಯೇ ಈ ಹಬ್ಬಗಳಿಗೆ ವಿವಿಧ ತರಹದ ಸಿಹಿತಿನಿಸುಗಳನ್ನು ಮಾಡಲೇಬೇಕು ಅದೇ ಕಾರಣಕ್ಕೆ ಪ್ರತಿವರ್ಷವೂ ಒಂದೇತರಹದ ಸಿಹಿ ಮಾಡಿಕೊಂಡು ಬರುತ್ತಿದಿರ ಈ ಸಲದ ಹಬ್ಬಕ್ಕೆ ಹೊಸ ತರಹದ ರಸಗುಲ್ಲಾದಷ್ಟೇ ಸಿಹಿಯಾದ ಸ್ಪೆಷಲ್ ಬರ್ಫಿಯನ್ನು ಸುಲಭವಾಗಿ ಮತ್ತು ಹೆಚ್ಚು ಶ್ರಮವಿಲ್ಲದೇ ತಯಾರಿಸಿ. ನಿಮ್ಮ ಕುಟುಂಬದವರ ಜೊತೆಗೇ ನಿಮ್ಮ ಅತಿಥಿಗಳಿಗೂ ಕೊಟ್ಟು ಮೆಚ್ಚುಗೆ ಪಡೆಯರಿ. ಈ ಬರ್ಫಿಯನ್ನು ತಯಾರಿಸುವ ಸುಲಭವಾದ ವಿಧಾನ ಇಲ್ಲಿದೆ ನೋಡಿ.

Also read: ಬಾಯಲ್ಲಿ ಇಟ್ಟರೆ ಕರಗುವ ಮಿಲ್ಕ್ ಪೌಡರ್ ಬರ್ಫಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳ ಸಿದ್ದತೆಗೆ ಬರಿಹತ್ತು ನಿಮಿಷ ಸಮಯ ಸಾಕು, ಬರ್ಫಿ ತಯಾರಿಸಲು ಹದಿನೈದು ನಿಮಿಷ ಸಮಯ ಬೇಕು.

ಬೇಕಾಗಿರುವ ಸಾಮಾಗ್ರಿಗಳು:

1. ಒಂದು ಕಪ್ ಕಡ್ಲೆಹಿಟ್ಟು

2. ಎರಡು ಕಪ್ ಸಕ್ಕರೆ

3. ಒಂದು ಕಪ್ ಹಾಲು

4. ಒಂದು ಕಪ್ ತುಪ್ಪ

5. ಒಂದು ಕಪ್ ಕಾಯಿತುರಿ

6. ಒಂದು ಕಪ್ ಬಾದಾಮಿ

Also read: ಬಾಯಲ್ಲಿ ನಿರೂರಿಸುವ ಹಾಗೂ ಆರೋಗ್ಯಕರವಾದ ಸ್ಪೆಷಲ್ ರಾಗಿ ಬರ್ಫಿ ತಯಾರಿಸುವ ಸಿಂಪಲ್ ವಿಧಾನ.

ತಯಾರಿಕಾ ವಿಧಾನ:

1) ಒಂದು ದಪ್ಪತಳದ ಪಾತ್ರೆ ಅಥವಾ ಕಾವಲಿಯಲ್ಲಿ ಒಂದು ಚಿಕ್ಕಚಮಚ ತುಪ್ಪ ಹಾಕಿ, ಒಂದು ನಿಮಿಷ ಕರಗಿದ ನಂತರ ತಯಾರಿಸಿದ ಕಡ್ಲೆಹಿಟ್ಟು ಹಾಕಿ ಕಡಿಮೆ ಪ್ರಮಾಣದ ಬೆಂಕಿಯಲ್ಲಿ ಹುರಿಯಿರಿ. ನಯವಾಗಿ ತಿರುವುತ್ತಾ ಕಂದುಬಣ್ಣ ಬರುತ್ತಿದ್ದಂತೆ ಇದಕ್ಕೆ ತಯಾರಿರುವ ಹಾಲುನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

2) ಹಾಲು ಚೆನ್ನಾಗಿ ಮಿಶ್ರಣವಾದ ಬಳಿಕ ಸಕ್ಕರೆ ಹಾಕಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಅಥವಾ ಸಕ್ಕರೆ ಪೂರ್ತಿಯಾಗಿ ಹಾಲಿನಲ್ಲಿ ಮಿಶ್ರಣಗೊಳ್ಳುವವರೆಗೆ ತಿರುವುತ್ತಾ ಇರಿ.

3) ಒಂದು ಪ್ರಮಾಣದಲ್ಲಿ ತುಪ್ಪ ಮತ್ತು ತಯಾರಿರುವ ಕಾಯಿತುರಿ ಹಾಕಿ ಮಿಶ್ರಣ ಮಾಡಿ.

Also read: ನಿಮ್ಮ ಮನೆಯಲ್ಲೇ ಮಾಡಿ ನೋಡಿ ಗೋಡಂಬಿ ಬರ್ಫಿ

4) ನಂತರ ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಸುಮಾರು ಹತ್ತ ರಿಂದ 15 ನಿಮಿಷ ತಿರುವಿ. ಈ ಮಿಶ್ರಣ ಜೇನಿನಷ್ಟು ಗಟ್ಟಿಯಾದ ಬಳಿಕ ಇನ್ನೊಂದು ಪಾತ್ರೆಗೆ ಸುರಿದು ಸ್ವಲ್ಪ ಕೂಲ್ ಆಗಲು ಬಿಡಿ.

5) ಸುಮಾರು ಅರ್ಧ ಗಂಟೆಯ ಬಳಿಕ ಚಾಕು ಉಪಯೋಗಿಸಿ ನಿಮಗೆ ಸೂಕ್ತವೆನಿಸಿದ ಆಕೃತಿಯಲ್ಲಿ ಕತ್ತರಿಸಿ. ಪ್ರತಿ ತುಂಡಿನ ಮೇಲೆ ಒಂದು ಬಾದಾಮಿಯನ್ನು ಹಾಕಿ . ನಂತರ ಆರರಿಂದ ಏಳು ಗಂಟೆ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.

Also read: ಅಂಗಡಿಗಳಿಂದ ಸಿಹಿ ತಿಂಡಿಗಳನ್ನು ತಿನ್ನುವವರು ಶಾಕ್-ಆಗುವ ವಿಚಾರ, ನೀವು ತಿನ್ನುವ ಸಿಹಿ ತಿಂಡಿ ನಿಜವಾಗಿಯೂ ಸುರಕ್ಷಿತವಾಗಿದೆಯೇ? ಮುಂದೆ ಓದಿ…

ಆಮೇಲೆ ನೋಡಿ ನಿಮ್ಮ ನೆಚ್ಚಿನ ಬರ್ಫಿರುಚಿಯನ್ನು ಸವಿದು ಈ ವರ್ಷದ ಹಬ್ಬಕೆ ಹೊಸ ತರಹದ ಸಿಹಿಯನ್ನು ತಯಾರಿಸಿದ ಕೀರ್ತಿ ನಿಮ್ಮಗೆ ಬರುತ್ತದೆ ಹಾಗೆ ಈ ಸಿಹಿಯ ಮಾಡುವ ವಿಧಾನದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಮೆಚ್ಚುಗೆಯನ್ನು ಪಡೆಯರಿ.