ಈ ವರ್ಷದ ಸಂಕ್ರಾತಿಗೆ ಟೂರ್ ಹೋಗೋಕೆ ಇನ್ನು ಪ್ಲ್ಯಾನ್ ಮಾಡಿಲ್ವ? ಹಾಗಾದ್ರೆ ಈ ಸ್ಥಳಗಳಿಗೆ ಹೋಗಿ ಜೀವನದಲ್ಲಿ ಮರಿಯಲಾರದ ಸ್ಥಳಗಳಿವು..

0
1190

ಹೊಸ ವರ್ಷದಲ್ಲಿ ಬರುವ ಸಂಕ್ರಾತಿಗೆ ಪ್ರವಾಸ ಮಾಡುವುದೇ ಒಂದು ಮಜಾ, ಅದರಂತೆಯೇ ಹಿಂದಿನಿಂದಲೂ ಸಂಕ್ರಾತಿಗೆ ಟೂರ್ ಹೋಗುವ ಪದ್ಧತಿ ಇದೆ. ಹೆಚ್ಚಿನ ಜನರು ಇದೆ ದಿನಗಳಲ್ಲಿ ಕುಟುಂಬದ ಜೊತೆಗೆ ಹೊರ ಹೋಗಿ ನದಿಯಲ್ಲಿ ಇಲ್ಲ ಸಮುದ್ರದಲ್ಲಿ ಮುಳಿಗೆದ್ದರೆ ಹೊಸ ವರ್ಷಕ್ಕೆ ಒಂದು ಕದರ್ ಬರುತ್ತೆ ಅಂತ ಹಲವಾರು ಪ್ರವಾಸಿ ಸ್ಥಳಗಳಿಗೆ ಹೋಗುತ್ತಾರೆ. ಮತ್ತು ಈ ವರ್ಷದ ಸಂಕ್ರಾತಿಗೆ 3 ದಿನಗಳು ರಜೆ ಇರುವುದರಿಂದ ಹೋಗಿರುವ ಸ್ಥಳಗಳನ್ನು ಬಿಟ್ಟು ಸ್ವಲ್ಪ ದೂರದ ಸ್ಥಳಗಳಿಗೆ ಹೋಗುವುದು ಇನ್ನೂ ಮಜಾ. ಹಾಗಾದ್ರೆ ಅಂತಹ ಹೊಸ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಸ್ಥಳಗಳಿಗೆ ಸ್ನೇಹಿತರೊಂದಿಗೆ ಇಲ್ಲ ಫ್ಯಾಮಿಲಿ ಜೊತೆಗೆ ಹೋಗಿ ಎಂಜಾಯ್ ಮಾಡಿ.

Also read: ಆಗುಂಬೆ ಹಾಗೂ ಅಕ್ಕ ಪಕ್ಕದ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ.. ಭೂಮಿಯ ಮೇಲಿನ ಸ್ವರ್ಗವದು.. ಒಮ್ಮೆ ಹೋಗಿ ಬನ್ನಿ..

ಉತ್ತರಖಂಡ;

ಹಿಮಾಲಯದ ಕೆಲವು ಅದ್ಭುತವಾದ ಟ್ರಕ್ಕಿಂಗ್‌ ತಾಣಗಳು ಮತ್ತು ಅತ್ಯುತ್ತಮ ಯೋಗ ಆಶ್ರಮಗಳು, ಹೊಂದಿರುವ ದೇವ ಭೂಮಿ ಎಂದೇ ಕರೆಯಲ್ಪಡುವ ಉತ್ತರಖಂಡವು ಚಾರ್ದಾಮಾ ಯಾತ್ರೆಗೆ ಪ್ರಸಿದ್ಧವಾಗಿದೆ. ಮತ್ತು ಭಾರತದ ಬಹುಮುಖ್ಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ವಿಶೇಷತೆ?

ಉತ್ತರಖಂಡವು ವರ್ಷದುದ್ದಕ್ಕೂ ಮನೋಹರವಾದ ಹವಾಮಾನವನ್ನು ಹೊಂದಿದೆ. ಹಾಗಾಗಿ ವರ್ಷದಾದ್ಯಂತ ಯಾವುದೇ ಸಮಯದಲ್ಲಾದರೂ ನೀವು ಇಲ್ಲಿಗೆ ಭೇಟಿ ನೀಡುಬಹುದು. ಚಳಿಗಾಲದಲ್ಲಿ ಹಿಮದಿಂದ ಕೂಡಿದ ಸೊಂಪಾದ ಬೆಟ್ಟಗಳು, ರೋಲಿಂಗ್ ಕಣಿವೆಗಳು ಮತ್ತು ನದಿಗಳು ಉತ್ತರಾಖಂಡವನ್ನು ವರ್ಷಪೂರ್ತಿ ಭಾರತದಲ್ಲಿ ಅತ್ಯಂತ ಜನಪ್ರಿಯ ಹನಿಮೂನ್ ತಾಣವಾಗಿಸಿದೆ.

1. ಕ್ಯಾಂಪಿಂಗ್

ಪ್ರವಾಸದಲ್ಲಿ ಬರಿ ಸ್ಥಳಗಳನ್ನು ನೋಡಿ ಎಂಜಾಯ್ ಮಾಡೋದಕ್ಕಿಂತ ಕ್ಯಾಂಪಿಂಗ್ ಮಾಡಿ ಈಜುವುದು, ಚಾರಣ, ಮೀನುಗಾರಿಕೆ, ಬೇಟೆಮಾಡುವುದು ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥಿರತೆಯು ಕ್ಯಾಂಪಿಂಗ್‌ಗೆ ಮುಖ್ಯವಾಗಿದೆ ಆದರಿಂದಲೇ ಕ್ಯಾಂಪಿಂಗ್ ಹೆಚ್ಚು ರೋಮಾಂಚನ ಕೊಡುತ್ತದೆ. ಹಾಗಾಗಿಯೇ ಹೆಚ್ಚು ಕ್ಯಾಂಪರ್‌ಗಳು ಈ ಸ್ಥಳಕ್ಕೆ ಹೋಗುತ್ತಾರೆ.

2. ರಿವರ್ ರಾಫ್ಟಿಂಗ್

ಉತ್ತರಖಂಡವು ರಿವರ್ ರಾಫ್ಟಿಂಗ್‌ನ ಸಾಹಸ ಕ್ರೀಡೆಗಳನ್ನು ದೊಡ್ಡ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತದೆ. ನದಿಯಲ್ಲಿ ರಾಫ್ಟಿಂಗ್ ಮಾಡೋದನ್ನು ಪ್ರಪಂಚದಾದ್ಯಂತದ ಸಾವಿರಾರು ಜನರು ಇಷ್ಟಪಡುತ್ತಾರೆ ಏಕೆಂದರೆ ರಿವರ್ ರಾಫ್ಟಿಂಗ್ ಒಂದು ಸಾಹಸಮಯ ಕ್ರೀಡೆಯಾಗಿದೆ. ಅದಕ್ಕಂತಾನೆ ಉತ್ತರಾಖಂಡದಲ್ಲಿರುವ ತಾಣಗಳು ನದಿಗಳಿಂದ ಕೂಡಿದ ಸ್ಥಳವಾಗಿದೆ. ಈ ದೇವಸ್ಥಾನಗಳ ದರ್ಶನ ಮಾಡಿದರೆ ನಿಮ್ಮ ಕಹಿ ಸಮಸ್ಯೆಗಳು ಪರಿಹಾರವಾಗುತ್ತಂತೆ.

3. ಚಾರ್‌ಧಾಮ ಯಾತ್ರೆ

ಇಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ್ ಮತ್ತು ಬದ್ರಿನಾಥ ದೇವಾಲಯಗಳನ್ನು ಒಳಗೊಂಡಿದ್ದು ಕೆಲವು ಪ್ರಮುಖ ಹಿಂದೂ ಯಾತ್ರಾಸ್ಥಳಗಳ ನೆಲೆಯಾಗಿದೆ. ಹರಿದ್ವಾರ ಪವಿತ್ರ ಹಿಂದೂ ಧಾರ್ಮಿಕ ಕ್ಷೇತ್ರವಾಗಿದೆ. ಸಾವಿರಾರು ಭಕ್ತರು ಹರ್ ಕಿ ಪೌರಿಗೆ ಭೇಟಿ ನೀಡಿ ಅಲ್ಲಿನ ನೀರಿನಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ನೀವು ಚಾರ್‌ಧಾಮ ಯಾತ್ರೆಯನ್ನೂ ಕೈಗೊಳ್ಳಬಹುದು.

4. ಬದ್ರಿನಾಥ್

ಹಿಂದೂಗಳ ಪವಿತ್ರ ಪಟ್ಟಣವಾಗಿರುವ ಬದ್ರಿನಾಥ್ ಭಾರತದ ನಾಲ್ಕು/ಛಾರ್‌ ಧಾಮ ತೀರ್ಥಯಾತ್ರೆಯ ನಾಲ್ಕು ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯವುಳ್ಳ ಕ್ಷೇತ್ರವಾಗಿದೆ. ವಿಶೇಷವಾಗಿ ವಿಷ್ಣುವಿನ ಭಕ್ತರು ಮತ್ತು ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ದೇವಾಲಯ ಮತ್ತು ಪಟ್ಟಣವನ್ನು ಚಾರ್ಧಾಮ್ ಯಾತ್ರೆಯಲ್ಲಿ ಪರಿಗಣಿಸಲಾಗುತ್ತದೆ. ಹಿಂದೂ ಸಮುದಾಯದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕ್ನಂದಾ ನದಿಯ ತೀರದಲ್ಲಿ ಸಮುದ್ರ ಮಟ್ಟಕ್ಕಿಂತ 3133 ಮೀ ಎತ್ತರದಲ್ಲಿ ಈ ದೇವಾಲಯ ನೆಲೆಸಿದ್ದು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ.

5. ನೈನಿ ತಾಲ್

ಪ್ರವಾಸಿಗರನ್ನು ಉಲ್ಲಾಸಗೊಳಿಸಲು ಈಲ್ಲಿನ ಆಕರ್ಷಕ ಬೆಟ್ಟಗಳ ಭವ್ಯವಾದ ದೃಶ್ಯಗಳಿಂದ ಸುತ್ತುವರೆದಿದೆ, ನೈನಿ ಸರೋವರದ ಇನ್ನೂ ನೀರಿನಲ್ಲಿ ಭಾರತದ ಪ್ರಣಯ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2,000 ಅಡಿ ಎತ್ತರದಲ್ಲಿದೆ ಮತ್ತು ಒಟ್ಟು 2 ಮೈಲುಗಳಷ್ಟು ಸುತ್ತುವರೆದಿದೆ. ನೈನಿತಾಲ್‌ಗೆ ಭೇಟಿ ನೀಡುವರು ಈ ಸರೋವರದಲ್ಲಿ ಬೋಟಿಂಗ್ ಮಾಡಿಲ್ಲವಾದಲ್ಲಿ ನೈನಿತಾಲ್ ಪ್ರವಾಸಕ್ಕೆ ಅರ್ಥವೇ ಇರೋದಿಲ್ಲ.

6. ರೂಪ್‌ಕುಂಡ್ ಚಾರಣ

ಟ್ರೆಕ್ಕಿಂಗ್ ಪ್ರೀಯರು ಅನುಭವಿಸಲೇ ಬೇಕಾದ ಸ್ಕೇಲೆಟನ್ ಸರೋವರ ಎಂದೇ ಪ್ರಸಿದ್ಧವಾಗಿರುವ ರೂಪ್‌ಕುಂಡ್ ಸರೋವರ ಉತ್ತರಖಂಡದ ಜನಪ್ರಿಯ ಆಕರ್ಷಣೆಯಾಗಿದೆ. ಈ ಅಸ್ಥಿಪಂಜರದ ಸರೋವರದ ಒಂದು ಚಾರಣವನ್ನು ರೂಪ್‌ಕುಂಡ್ ಸರೋವರ ಟ್ರೆಕ್ ಕೂಡ ಧಾರ್ಮಿಕ ಕಾರಣಗಳಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ತೀರ್ಥಯಾತ್ರೆ ಚಾರಣವು ನಿಮ್ಮನ್ನು ನಂದ ದೇವಿಯ ಪೂಜ್ಯ ಸ್ಥಳಕ್ಕೆ ಕರೆದೊಯ್ಯುತ್ತದೆ.

ಪ್ರಯಾಣ ಹೇಗೆ?

ಉತ್ತರಖಂಡದಲ್ಲಿ ನೈಹಿತಾಲ್ ಸಮೀಪದ ಡೆಹ್ರಾಡೂನ್ನ ಜಾಲಿ ಗ್ರಾಂಟ್ ಏರ್ಪೋರ್ಟ್ ಮತ್ತು ಪಾಂಟ್ನಗರ್ ಏರ್ಪೋರ್ಟ್ ಗಳಿವೆ. ರೈಲ್ವೆ ಪ್ರಯಾಣದ ವ್ಯವಸ್ಥೆವೂ ಉತ್ತಮವಾಗಿದ್ದು ಹರಿದ್ವಾರ, ಡೆಹ್ರಾಡೂನ್, ರಿಷಿಕೇಶ, ನೈನಿತಾಲ್, ಕೊಟ್ದ್ವಾರ್, ಕಥ್ಗೊಡಮ್, ಪೌರಿ ಮತ್ತು ಉಧಮ್ ಸಿಂಗ್ ಈ ಎಲ್ಲಾ ನಿಲ್ದಾಣಗಳು ದೆಹಲಿ, ವಾರಣಾಸಿ ಸಂಪರ್ಕ ಹೊಂದಿದೆ. ಇನ್ನೂ ರಸ್ತೆ ಮೂಲಕ ಹೋಗೋದಾದ್ರೆ ದೆಹಲಿ ಮತ್ತು ಪ್ರಮುಖ ರಾಜ್ಯ ಹೆದ್ದಾರಿಗಳೊಂದಿಗೆ ಉತ್ತಮವಾಗಿ ಸಂಪರ್ಕ ಹೊಂದಿವೆ. ಈ ಹೆದ್ದಾರಿಗಳು ಮುಖ್ಯ ಪ್ರವಾಸಿ ತಾಣಗಳು ಮತ್ತು ಪ್ರಮುಖ ಸ್ಥಳಗಳಾದ ಹರಿದ್ವಾರ, ರಿಷಿಕೇಶ ಮತ್ತು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಗಳೊಂದಿಗೆ ಸಂಪರ್ಕ ಹೊಂದಿವೆ. ಹಾಗೆಯೇ ಉತ್ತಮವಾದ ಬಸ್ ಸಂಚಾರಗಳನ್ನು ಹೊಂದಿವೆ.

Also read: ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಕಂಪ್ಲೀಟ್ ಡೀಟೇಲ್ಸ್..