ಕೆಲವು ಸಂಪ್ರದಾಯಿಕ ವಿಧಾನಗಳಾದ ವನಿಯುವುದು, ಹುರಿಯುವುದು , ಮೊಳಕೆ ಕಟ್ಟುವುದು, ನೆನಸುವುದು ಮತ್ತು ಮಾಲ್ಟ ಮಾಡುವುದು ಅಥವಾ ಪುಡಿ ಮಾಡುವುದು ಮೊದಲಾದ ಕ್ರಿಯೆಗಳಿಂದ ಹಲವು ಲಾಭಗಳನ್ನು ನಾವು ಪಡೆಯಬಹುದು. ಹೀಗೆ ನಾವಿಂದು ಆರೋಗ್ಯಕರವಾದ ಒಂದು ಪುಡಿಯನ್ನು (ಹೆಲ್ದಿ ಪೌಡರ್) ಮಾಡುವ ವಿಧಾನವನ್ನು ತಿಳಿಸಲಿದ್ದೇವೆ. ಸಂಪೂರ್ಣ ಆರೋಗ್ಯಕ್ಕೆ ಈ ಪುಡಿಯ ಸೇವನೆ ತುಂಬ ಸಹಕಾರಿ.
Also read: ಗ್ಯಾಸ್ ಟ್ರಬಲ್ ನಿವಾರಿಸುವ ಕರಿಬೇವು ಪುಡಿ..!!
ಬೇಕಾಗುವ ಸಾಮಗ್ರಿಗಳು-
ಅಗಸೆ ಬೀಜ
ಕರಿ ಜೀರಿಗೆ
ಓಂ ಕಾಳು
ಮೆಂತ್ಯ
ಇದೆಲ್ಲವನ್ನೂ ಸಮ ಪ್ರಮಾಣದಲ್ಲಿ ತೆಗೆದುಕೂಂಡು ಬೆಚ್ಚಗಾಗುವಂತೆ ಬಾಣಲಿಯಲ್ಲಿ ಬಿಸಿ ಮಾಡಿ,ಕೈ ನಲ್ಲಿ ಮುಟ್ಟಿದರೆ ಬಿಸಿಯಾಗುವಷ್ಟು ಸಾಕು ಕೆಂಪಗೆ ಎಲ್ಲಾ ಹುರಿಯುವ ಅವಶ್ಯಕತೆ ಇಲ್ಲ,ಬೆಚ್ಚಗಾದರೆ ಸಾಕು, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿಕೂಳ್ಳಿ,ಇದನ್ನ ಒಂದು ಡಬ್ಬಿಯಲ್ಲಿ ಹಾಕಿಡಿ,ದಿನಾಗಲೂ ರಾತ್ರಿ ಊಟ ಆದ ಮೇಲೆ ಒಂದು ಚಿಕ್ಕ ಸ್ಪೂನಿನಷ್ಟು ಪುಡಿಯನ್ನು ಬಾಯಿಗೆ ಹಾಕಿಕೂಂಡು ನೀರನ್ನು ಕುಡಿಯಿರಿ ,ಸ್ವಲ್ಪ ಕಹಿ ಇದ್ದರೂ ಉಪಯೋಗ ಬಹಳವಿದೆ ಆರೋಗ್ಯಕ್ಕೆ, ದಿನಾಗಲೂ ಹೀಗೆ ಸೇವಿಸುತ್ತಾ ಬಂದರೆ ಅಗಸೆಬೀಜದಿಂದ ಕೂದಲಿಗೆ,ಚರ್ಮಕ್ಕೆ ಹಾಗೂ ನಾರಿನಂಶ ದಿಂದ ಬಹಳ ಉಪಯೋಗವಿದ್ದು ಕೂಬ್ಬನ್ನು ಕರಗಿಸುತ್ತದೆ.
Also read: ಹಾಗಲ ಕಾಯಿ ಚಟ್ನಿ ಪುಡಿ ಮಾಡುವ ವಿಧಾನ
ಓಂಕಾಳು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತೆ, ಕರಿ ಜೀರಿಗೆ ಕೂದಲಿಗೆ ಬಹಳಾನೆ ಉಪಯೋಗವಾಗುವುದು, ಮೆಂತ್ಯ, ತಂಪು ಮತ್ತು ಈ ಎಲ್ಲದರ ಮಿಶ್ರಣದ ಪುಡಿಯ ಸೇವನೆಯಿಂದ, ಹೃದಯದ ತೊಂದರೆ, ಶ್ವಾಸಕೋಶದ ತೊಂದರೆ, ಅಸ್ತಮಾ, ಅಲರ್ಜಿ, ಮೂತ್ರಕೋಶದ ತೊಂದರೆ, ಕ್ಯಾನ್ಸರ್ ನ ತಡೆಗಟ್ಟುವಿಕೆ, ಹಾಗೂ ಕೆಟ್ಟ ಕೊಲೆಸ್ಟ್ರಾಲ್ ನ್ ಅಂಶ ಕಡಿಮೆ ಮಾಡುತ್ತದೆ. ದೇಹದ ತೂಕ ಇಳಿಸುವಿಕೆಯಲ್ಲೂ ಉಪಯೋಗವಾಗುತ್ತದೆ ಇಷ್ಟೆಲ್ಲಾ ಉಪಯೋಗವಿರುವ ಈ ಪುಡಿಯನ್ನು ದಿನಾಗಲೂ ಸೇವಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ಇದು ಆರೋಗ್ಯಕ್ಕೆ ಹೇಳಿ ಮಾಡಿಸಿದ ಪುಡಿಯಾಗಿದ್ದು ನಿರಂತರ ಸೇವನೆಯಿಂದ ಬಹಳಷ್ಟು ಲಾಭವಿದೆ.