ಕಲಶ ಪೂಜೆಯಲ್ಲಿ ವೀಳ್ಯದೆಲೆ ಇಟ್ಟು ಪೂಜೆ ಮಾಡುವ ಹಿಂದಿನ ವೈಜ್ಞಾನಿಕ ಕಾರಣ..!

0
7519

Kannada News | Karnataka Temple History

ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ವೈದಿಕ ಪರಂಪರೆಯಲ್ಲಿ ಎಲ್ಲಾ ತರಹದ ಪೂಜೆಗಳಲ್ಲಿ ಜಲತತ್ತ್ವದ ಪೂಜೆಯು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಪೂಜಾ ವಿಧಿ ವಿಧಾನಗಳಲ್ಲಿ ಮುಖ್ಯವಾಗಿ ಉಪಯೋಗಿಸಲ್ಪಡುವುದೇ ನೀರು. ಶ್ರೀ ಸತ್ಯ ನಾರಾಯಣ ವೃತ್ತ, ನಾಗಪಂಚಮಿ, ವಿನಾಯಕ, ವರಮಹಾಲಕ್ಷ್ಮಿ, ಸೋಮವಾರ ವೃತ್ತ, ಸ್ವರ್ಣ ಗೌರಿ, ಮಂಗಳ ಗೌರಿ, ಅನಂತಪದ್ಮನಾಭ ವೃತ್ತ, ಇತ್ಯಾದಿ ಹಲವು ಎಲ್ಲಾ ಪೂಜೆಯಲ್ಲಿಯೂ ಕಲಶವೇ ಪ್ರಧಾನ ಪಾತ್ರ ವಹಿಸುತ್ತದೆ. ಹಾಗೆ ಕಲಶ ಪೂಜೆ ಮಾಡುವಾಗ ವೀಳ್ಯದೆಲೆ ಇಟ್ಟು ಅದರ ಮೇಲೆ ತೇಗಿನ ಕಾಯಿ ಇಟ್ಟು ಪೂಜೆ ಮಾಡುವುದು ಪೂಜಾ ವಿಧಿ ವಿಧಾನಗಳಲ್ಲಿ ಒಂದು.

ಹಾಗಾದರೆ ಬನ್ನಿ ವೀಳ್ಯದೆಲೆ ಇಟ್ಟು ಪೂಜೆ ಮಾಡುವ ಹಿಂದಿನ ಕಾರಣ ತಿಳಿದುಕೊಳ್ಳೋಣ.

 • ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮಿವಾಸ
 • ವೀಳ್ಯದೆ ಬಲಭಾಗದಲ್ಲಿ ಬ್ರಹ್ಮವಾಸ
 • ವೀಳ್ಯದೆಲೆ ಮದ್ಯದಲ್ಲಿ ಸರಸ್ವತಿ ದೇವಿವಾಸ
 • ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತಿ ದೇವಿವಾಸ
 • ವೀಳ್ಯದೆಲೆ ಸಣ್ಣ ದಂಟಿನಲ್ಲಿ ಮಹಾ ವಿಷ್ಣುವಿನವಾಸ
 • ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರ ದೇವತೆವಾಸ
 • ವೀಳ್ಯದೆಲೆ ಬುಡದಲ್ಲಿ ಮೃತ್ಯು ದೇವತೆಯವಾಸ
  (ಇದೆ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ವೀಳ್ಯದೆಲೆ ಬುಡವನ್ನು ತೆಗೆದು ಹಾಕಲಾಗುತ್ತದೆ)
 • ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಮತ್ತು ದಾರಿದ್ರ ಲಕ್ಷ್ಮಿ ವಾಸ
  (ಇದೆ ಕಾರಣಕ್ಕೆ ವೀಳ್ಯದೆಲೆ ಹಾಕುವಾಗ ವೀಳ್ಯದೆ ತೊಟ್ಟನ್ನು ತೆಗೆಯಲಾಗುತ್ತದೆ)

ಈ ಎಲ್ಲ ದೇವರುಗಳು ಇರುವುದರಿಂದನೇ ವೀಳ್ಯದೆಲೆ ಯನ್ನು ಪೂಜೆಗೆ ಬಳಸಲಾಗುತ್ತದೆ. ಅಷ್ಟೇ ಅಲ್ಲ ವೀಳ್ಯದೆಲೆ ಯನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವತರಹ ಇಟ್ಟು ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಯಾರ ಮನೆಯಲ್ಲಿ ಪೂಜೆ ಮಡಿದ ನಂತರ ತಾಂಬೂಲ ಕೊಡುವರೋ ಮೊದಲು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸಬೇಕು. ಮಂಗಳವಾರ, ಶುಕ್ರವಾರ ಯಾವುದೇ ಕಾರಣಕ್ಕೂ ವೀಳ್ಯದೆಲೆ ಯನ್ನು ಹೊರಗೆ ಹಾಕಬಾರದು.

Also Read: ಒಮ್ಮೆಯಾದರು ನೋಡಲೆಬೇಕಾದ ಪುರಾತನ ಕಾಲದ ಕೊನಾರ್ಕ್ ಸೂರ್ಯ ದೇವಾಲಯ