ಎಳೆ ಕಂದಮ್ಮಗಳಿಗೆ ಹಚ್ಚುವ ಜಾನ್ಸನ್ ಬೇಬಿ ಪೌಡರ್-ನಿಂದ ಮಕ್ಕಳಿಗೆ ಭೇಕರ ಕ್ಯಾನ್ಸರ್ ಬರಬಹುದು ಎಂದು ಶ್ರೀಲಂಕಾದಲ್ಲಿ ಬ್ಯಾನ್ ಮಾಡಲಾಗಿದೆ.. ನಮ್ಮ ದೇಶದಲ್ಲೂ ಹೀಗೆ ಮಾಡಬೇಕಾ?

0
1279

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಉತ್ಪನಗಳಲ್ಲಿ ಕ್ಯಾನ್ಸರ್ ಅಂಶ ಕಂಡು ಬಂದು ದೇಶ ವಿದೇಶದಲ್ಲಿ ಭಯ ಮೂಡಿಸಿತ್ತು. ಈ ತಪ್ಪಿಗೆ ಕಂಪನಿ ಪರಿಹಾರವನ್ನು ಕೂಡ ನೀಡಿತ್ತು. ಬಹಳ ಹಳೆಯ ಕಂಪೆನಿಯಾದ ಜಾನ್ಸನ್ ಚಿಕ್ಕ ಮಕ್ಕಳ ವಸ್ತುಗಳಾದ ಸೋಪ್. ಶಾಂಪು, ಪೌಡರ್, ಕ್ರೀಮ್ ಸೇರಿದಂತೆ ನೂರಾರು ತರಹದ ಮಕ್ಕಳ ವಸ್ತುಗಳನ್ನು ತಯಾರಿಸುತ್ತಿರುವ ಈ ಕಂಪನಿಯ ಎಲ್ಲ ಉತ್ಪನಗಳನ್ನು ಶ್ರೀಲಂಕಾ ದೇಶವು ಬ್ಯಾನ್ ಮಾಡಿದೆ. ಒಂದು ವೇಳೆ ಜಾನ್ಸನ್ ಕಂಪನಿ ಮತ್ತೆ ಈ ವಸ್ತುಗಳನ್ನು ನೀಡಲು ಇಚ್ಚಿಸಿದರೆ ಸಂಪೂರ್ಣವಾಗಿ ಎಲ್ಲ ವಸ್ತುಗಳನ್ನು ಮರು ಪರಿಶೀಲನೆ ಮಾಡಿ ಸುರಕ್ಷಿತ ಎಂದು ಸಾಬೀತಾದಲ್ಲಿ ಮಾತ್ರ ಆಮದು ಮಾಡಿಕೊಳ್ಳುವುದಾಗಿ ಶ್ರೀಲಂಕಾದ ನ್ಯಾಶನಲ್ ಮೆಡಿಸಿನ್ ರೆಗ್ಯುಲೇಟರಿ ಅಥಾರಿಟಿ ಹೇಳಿದೆ.

ಬೇಬಿ ಪೌಡರ್-ನಿಂದ ಕ್ಯಾನ್ಸರ್?

ಹೌದು ಜಾನ್ಸನ್‌ ಕಂಪನಿ ಹಲವು ವರ್ಷಗಳಿಂದ ಟಾಲ್ಕ್‌ ಎಂಬ ವಸ್ತುವನ್ನು ಈ ಪೌಡರ್‌ನಲ್ಲಿ ಬಳಸಲಾಗುತ್ತಿದೆ. ಈ ಪೌಂಡರ್‌ನ್ನು ದೀರ್ಘ ಕಾಲ ಬಳಸಿದ ಮಹಿಳೆಯರು ಅಂಡಾಶಯದ ಕ್ಯಾನ್ಸರ್‌ಗೆ ಗುರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಜುಲೈನಲ್ಲಿ ಜಾನ್ಸನ್‌ ಆಂಡ್‌ ಜಾನ್ಸನ್‌ ಸಂಸ್ಥೆ 4.69 ಬಿಲಿಯನ್‌ ಡಾಲರ್‌ ಪರಿಹಾರವನ್ನೂ ನೀಡಿದೆ.

ಈ ಸಂಬಂಧ ವರದಿ ಮಾಡಿದ್ದ ರಾಯ್ಟರ್ಸ್‌, ‘1970ರಿಂದಲೇ ತನ್ನ ಪೌಡರ್‌ನಲ್ಲಿ ಸಣ್ಣ ಪ್ರಮಾಣದ ಅಸ್ಬೆಸ್ಟೋಸ್ (ಕಲ್ನಾರು) ಎಂಬ ಕ್ಯಾನ್ಸರ್‌ ಕಾರಕ ಇದೆ ಎಂಬುದು ಜಾನ್ಸನ್‌ ಆಂಡ್‌ ಜಾನ್ಸನ್‌ ಕಂಪನಿಗೆ ಗೊತ್ತಿತ್ತು’ ಎಂಬುದಾಗಿ ಹೇಳಿತ್ತು. ಆದರೆ ಟಾಲ್ಕ್‌, ಕಲ್ನಾರು ಮತ್ತು ಕ್ಯಾನ್ಸರ್‌ ಒಂದಕ್ಕೊಂದು ಸಂಬಂಧ ಹೊಂದಿದೆ ಎಂಬುದನ್ನು ಕೋರ್ಟ್‌ನಲ್ಲಿ ಸಾಬೀತು ಪಡಿಸಬಹುದು. ಈ ಮೂಲಕ ಜಾನ್ಸನ್‌ ಆಂಡ್‌ ಜಾನ್ಸನ್‌ ಕ್ಯಾನ್ಸರ್‌ ಕಾರಕ ಎಂದು ಹೇಳಬಹುದು. ಆದರೆ ತಜ್ಞರು ಇದಕ್ಕೆ ಇದರದ್ದೇ ಹಲವು ಕಾರಣಗಳಿವೆ ಆದರಿಂದ. ಪ್ರಯೋಗಾಲಯದಲ್ಲಿ ಹೇಳಿವುದು ಕಷ್ಟ ಎನ್ನುತ್ತಿದ್ದಾರೆ.

ಈ ವಿಷಯವಾಗಿ ರಾಯ್ಟರ್ಸ್‌ ಗೆ ಮಾತನಾಡಿದ ಶ್ರೀಲಂಕಾದ ನ್ಯಾಶನಲ್ ಮೆಡಿಸಿನ್ ರೆಗ್ಯುಲೇಟರಿ ಅಥಾರಿಟಿ (NMRA) ಮುಖ್ಯ ಕಾರ್ಯನಿರ್ವಾಹಕ ಕಮಲ್ ಜಯಸಿಂಗ ಅವರು ಆಮದುಗಳನ್ನು ಮುಂದುವರೆಸಲು ಹೊಸ ಪರೀಕ್ಷಾ ಫಲಿತಾಂಶದ ಅಗತ್ಯವಿರುವುದಾಗಿ (A.Baur & Co.) ವಿತರಕರಿಗೆ ತಿಳಿಸಿದ್ದಾರೆ. ಅದರಿಂದ J & J ಇಂಡಿಯಾ ವಕ್ತಾರರು ಶ್ರೀಲಂಕಾಕ್ಕೆ ಸೇವೆಗಳನ್ನು ಸ್ಥಗಿತಗೊಳಿಸುವುದರ ಕುರಿತು ಪ್ರತಿಕ್ರಿಯಿಸುವುದಿಲ್ಲವೆಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ ಕಂಪನಿಯು “ನಮ್ಮ ತಾಳ್ಮೆಯ ಉತ್ಪಾದನೆ ಮತ್ತು ಪರೀಕ್ಷೆಗಾಗಿ ಪ್ರಸ್ತುತ ಭಾರತೀಯ ನಿಯಂತ್ರಕ ಅಗತ್ಯಗಳಿಗೆ ಪೂರ್ಣ ಅನುವರ್ತನೆಯಾಗಿದೆ” ಎಂದು ಹೇಳಿದ್ದಾರೆ.

ಬೇಬಿ ಪೌಡರ್‌ನಲ್ಲಿದೆಯೇ ಕಲ್ನಾರು?

ನೈರ್ಮಲ್ಯದ ದೃಷ್ಟಿಯಿಂದ ದೀರ್ಘ ಕಾಲ ಜಾನ್ಸನ್‌ ಆಂಡ್‌ ಜಾನ್ಸನ್‌ ಬೇಬಿ ಪೌಡರ್‌ನ್ನು ಬಳಸಿದ ಮಹಿಳೆಯರು ಇದರಲ್ಲಿ ಕಲ್ನಾರು ಇರುವುದರಿಂದ ಅಂಡಾಶಯದ ಕಾನ್ಸರ್‌ಗೆ ತುತ್ತಾಗಿದ್ದೇವೆ ಎಂದು ದೂರಿ ಅಮೆರಿಕಾದಲ್ಲಿ ನ್ಯಾಯಾಲಯ ಮೆಟ್ಟಿಲೇರಿದ್ದರು. ಜುಲೈನಲ್ಲಿ ನ್ಯಾಯಾಧೀಶರು ಇದಕ್ಕೆ ಸಮ್ಮತಿ ಸೂಚಿಸಿ ಕಂಪನಿ 4 ಬಿಲಿಯನ್‌ ಡಾಲರ್‌ಗೂ ಹೆಚ್ಚು ಪರಿಹಾರ ನೀಡುವಂತೆ ಸೂಚಿಸಿದ್ದರು. ಆದರೆ ವಿಜ್ಞಾನಿಗಳ ವರದಿ ಭಿನ್ನವಾಗಿತ್ತು. ಇಡೀ ಪ್ರಕರಣದ ಪ್ರಮುಖ ಅಂಶವೆಂದರೆ ಪೌಡರ್‌ನಲ್ಲಿ ಕಲ್ನಾರು ಇದೆಯಾ ಇಲ್ವಾ ಎನ್ನುವುದು. ಒಂದೊಮ್ಮೆ ಇದ್ದರೆ ಅದು ಕ್ಯಾನ್ಸರ್‌ ತರುವಷ್ಟರ ಪ್ರಮಾಣದಲ್ಲಿದೆಯೇ ಎಂಬುದನ್ನು ಇನ್ನೊಂದು ಪ್ರಶ್ನೆ. ಆದರೆ ಇದಕ್ಕೆ ಸ್ಪಷ್ಟವಾದ ಉತ್ತರವನ್ನು ಯಾರೂ ನೀಡಿಲ್ಲ.

ಟಾಲ್ಕ್‌ ಕಲ್ನಾರಿನ ಜತೆಗೆ ಇರುವುದು ಹೌದಾದರೆ, ಕಲ್ನಾರು ಕ್ಯಾನ್ಸರ್‌ ಕಾರಕವಾಗಿರುವುದರಿಂದ ಜಾನ್ಸನ್‌ ಆಂಡ್‌ ಜಾನ್ಸನ್‌ ತನ್ನ ಆಂತರಿಕ ಪರೀಕ್ಷೆಗಳ ಮಾಹಿತಿಗಳನ್ನು ಎಫ್‌ಡಿಎ ಮತ್ತು ಜನರ ಮುಂದಿಡಬೇಕಿತ್ತು ಎಂದು ಒಮ್ಮೆ ರಾಯ್ಟರ್ಸ್‌ ವಾದಿಸಿತ್ತು. ಆದರೆ ತನ್ನ ಪೌಡರ್‌ಗಳಲ್ಲಿರುವ ಕಲ್ನಾರಿನ ಪ್ರಮಾಣ ಎಷ್ಟು ಎಂಬುದನ್ನು ಬಹಿರಂಗಗೊಳಿಸುವ ಕೆಲಸಕ್ಕೆ ಕಂಪನಿ ಎಂದೂ ಮುಂದಾಗಿಲ್ಲ. ಸದ್ಯಕ್ಕೆ ಈ ಎಲ್ಲಾ ಗೊಂದಲಗಳ ಮಧ್ಯದಲ್ಲಿ ಮಕ್ಕಳಿಗೆ ಅಮೆರಿಕಾದ ಪೀಡಿಯಾಟ್ರಿಕ್‌ ಅಕಾಡೆಮಿ ಎಣ್ಣೆಯ ಲೇಪನವನ್ನು ಬಳಸುವಂತೆ ಸೂಚಿಸಿದೆ. ವಯಸ್ಕರಿಗೆ ಚರ್ಮದ ಕಿರಿಕಿರಿಗೆ ಜೋಳವನ್ನಾಧರಿಸಿ ಪೌಡರ್‌ ಬಳಸುವಂತೆ ಸಲಹೆ ನೀಡಿದೆ. ಸರಿಯಾದ ಉತ್ತರ ಸಿಕ್ಕ ಬಳಿಕ ಜಾನ್ಸನ್‌ ಆಂಡ್‌ ಜಾನ್ಸನ್‌ ಬಳಕೆ ಬಗ್ಗೆ ಯೋಚನೆ ಮಾಡಬಹುದು ಎಂಬುದು ಇವರ ಪರೋಕ್ಷ ಸೂಚನೆಯಾಗಿದೆ.

Also read: ಮಹಿಳೆಯರೇ ಸ್ತನ ಕ್ಯಾನ್ಸರ್-ನ ಈ ಲಕ್ಷಣಗಳು ಕಂಡರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ, ದಯವಿಟ್ಟು ನಿರ್ಲಕ್ಷಿಸಬೇಡಿ!!