ಹಬ್ಬದ ಸಡಗರದಲ್ಲಿ ಕಲಬೆರೆಕೆ ಆಹಾರ ಪದಾರ್ಥಗಳನ್ನು ಖರೀದಿಸುವ ಮುನ್ನ ಎಚ್ಚರ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!!

0
1061

ಜನರು ಬದಲಾವಣೆಯಾದಂತೆ ಆಹಾರ ಪದ್ದತಿಯ ಕ್ರಮಗಳು ಕೂಡ ಬದಲಾಗಿವೆ ಮೊದಲಿನ ಕಾಲದಲ್ಲಿ ಊಟಕ್ಕೆ ಬೇಕಾದ ರೈಸ್, ಗೋಧಿ, ಜೋಳ ,ರಾಗಿ, ಹೀಗೆ ಎಲ್ಲಾ ತರಹದ ಧಾನ್ಯಗಳನ್ನ ವರ್ಷಕ್ಕೆ ಬೇಕಾಗುವಷ್ಟು ಶೇಖರಣೆ ಮಾಡಿಟ್ಟುಕೊಳ್ಳುತ್ತಿದರು ಮತ್ತು ಅವುಗಳ ಬಗ್ಗೆ ಸರಿಯಾದ ಕಾಳಜಿವಹಿಸಿ ಧಾನ್ಯಗಳ ಗುಣಮಟ್ಟವನ್ನು ಕಾಪಾಡಿಕೊಂಡು ತಮ್ಮ ಆರೋಗ್ಯವನ್ನು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳುತ್ತಿದರು ಅದು ಹಿಂದಿನ ಕಾಲವಾದರೆ ಈಗಿನ ಕಾಲದಲ್ಲಿ ಜನ್ರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದೇ ಇಲ್ಲ ರೆಡಿಮೇಡ್ ಗೆ ಮಾರುಹೋಗಿ ಮಾರುಕಟ್ಟೆಯಲ್ಲಿ ಇಲ್ಲ ಆನ್ಲೈನ್’ನಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಖರೀದಿ ಮಾಡುತ್ತಾರೆ ಅಂದು ಸುಲಭದ ಕೆಲಸವಾದ್ರೆ ನೇರವಾಗಿ ಸಿಗುವ ವಸ್ತುಗಳಲ್ಲಿ ಕಲಬೆರಕೆಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ.

ಈ ಹಿಂದೆ ನಡೆದ ಪ್ರಕರಣಗಳು:

ಇದಕ್ಕೆ ಸಾಕ್ಷಿಯಾಗಿ ಮೊದಲು ಉತ್ತರ ಪ್ರದೇಶದ ಹಾಲು ಉತ್ಪಾದಕ ವಂಚಕ ರೈತರು ಸಿಂಥೆಟಿಕ್‌ ಹಾಲನ್ನು ಉತ್ಪಾದಿಸಿದ್ದರು ಇದರಲ್ಲಿ ಯೂರಿಯಾ, ಕಾಸ್ಟಿಕ್‌ ಸೋಡಾ, ಮತ್ತು ಸಸ್ಯಜನ್ಯ ಎಣ್ಣೆಯ ಮಾರಕ ಮಿಶ್ರಣವನ್ನು ಬೆರೆಸಿದ್ದರು. ಆ ಬಳಿಕ ನಮಗೆ ಹಣ್ಣುಗಳ ಕಲಬೆರಕೆಯ ವರದಿ ಬಂತು. ಕ್ಯಾಲ್ಸಿಯಂ ಕಾರ್ಬೈಡ್‌ ಅನ್ನು ಬಳಸಿ ಅಕಾಲಿಕವಾಗಿ ಪಕ್ವಗೊಳಿಸಿದ ಹಣ್ಣುಗಳು ಮಾರುಕಟ್ಟೆಯಲ್ಲಿ ಬಂದವು. ನಂತರ ಫಾರ್ಮಾಲಿನ್‌ ಅನ್ನು ಬಳಸಿ ಮೀನುಗಳನ್ನು ತಾಜಾ ಆಗಿರಿಸಿದ ಸಂಗತಿ ನಡೆಯಿತು. ಸೇಬು ಹಣ್ಣಿನ ರಸ ಎಂದು ಹೇಳಿಕೊಂಡು, ಕೃತಕವಾಗಿ ಸುವಾಸನೆ ಗೊಳಿಸಲಾದ ಸಕ್ಕರೆ ನೀರನ್ನು ಮಾರಾಟ ಮಾಡಿದು ಬೆಳೆಕಿಗೆ ಬಂತು. ಕಾಂಗ್ರಾ ಫ‌ುಡ್ಸ್‌ ಸಂಸ್ಥೆಯ ಒಂದು ಘಟಕವು, ಸಂಗ್ರಹ ಗೊಳಿಸಲಾದ ಧಾನ್ಯಗಳ ತೂಕ ಮತ್ತು ಮೌಲ್ಯವನ್ನು ಹೆಚ್ಚಿಸುವುದಕ್ಕಾಗಿ, ಕಾನೂನುಬಾಹಿರವಾಗಿ ಔಷಧ ಸ್ಪ್ರೆ ಮಾಡಿದಕ್ಕಾಗಿ, ದಂಡನೆಯನ್ನು ಎದುರಿಸಿತ್ತು. ನಂತರ ಚೈನಾದಲ್ಲಿ ಅಲ್ಲಿನ ಬಹುತೇಕ ಹಾಲಿನ ಸರಬರಾಜಿನಲ್ಲಿ ಮೆಲಮೈನ್‌ ಕಲಬೆರಕೆ ಆಗಿರುವುದು ಪತ್ತೆ ಅಗಿತ್ತು. ಮೈಲಮೈನ್‌ ನಿಂದ ಕಲುಷಿತವಾದ ಹಾಲಿನಿಂದ ತಯಾರಿಸಿದ ಆಹಾರವನ್ನು ಶಿಶು ಸೇವಿಸಿದ ಕನಿಷ್ಠ ಆರು ಮಕ್ಕಳು ಸಾವಿಗೀಡಾಗಿದ್ದರು ಮತ್ತು ಸಾವಿರಾರು ಜನರು ಅಸ್ವಸ್ಥರಾಗಿದ್ದರು.

ಕಲಬೆರೆಕೆಮಾಡಿ ಹೇಗೆ ವಂಚನೆ ಮಾಡುತ್ತಾರೆ:

ಹೆಚ್ಚು ಹೆಚ್ಚು ಮಾರಾಟಗಾರರು ಖರೀದಿ ಮಾಡುವವನ ಗಮನಕ್ಕೆ ಬಾರದಂತೆ ಆಹಾರಕ್ಕೆ ಅನಧಿಕೃತ ಅಂಶಗಳನ್ನು ಸೇರಿಸುವುದು ಅಥವಾ ಅಧಿಕೃತ ಅಂಶಗಳನ್ನು ತೆಗೆದು ಹಾಕುವುದು ಅಥವಾ ಸ್ಥಳಾಂತರ ಮಾಡುವುದು. ಸಮಯ ಸರಿದಂತೆಲ್ಲಾ ಕಲಬೆರಕೆಯ ಮತ್ತು ಅದರ ತಂತ್ರಗಳನ್ನು ಪತ್ತೆ ಮಾಡುವುದು ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಿದೆ. ನೀವೂ ತಿನ್ನುವ ಆಹಾರ ವೆಲ್ಲವೂ ಬಹುತೇಕವಾಗಿ ಕಲಬೆರೆಕೆಯಾಗಿದೆ ಇದನ್ನು ತಿನ್ನೋದ್ರಿಂದ ಆರೋಗ್ಯ ಹಾಳಾಗುವ ಜೊತೆಗೆ ಸರಿಯಾದ ರುಚಿಯು ಸಿಗೋದಿಲ್ಲ ಅದಕ್ಕೆ ಆಹಾರ ಪದಾರ್ಥಗಳ ಕಲಬೆರೆಕೆಯನ್ನು ಪರೀಕ್ಷಿಸಿ ತರುವುದು ಉತ್ತಮ ಹಾಗೆಯೇ ಯಾವ ಪದಾರ್ಥದಲ್ಲಿ ಯಾವ ವಸ್ತು ಕಲಬೆರೆಕೆಯಾಗಿದೆ, ಅದನ್ನು ಸಿಂಪಲ್ ಟ್ರಿಕ್ಸ್ ಗಳಿಂದ ಪತ್ತೆಹಚ್ಚಬಹುದು.

ಕಲಬೆರೆಕೆಯ ವಿಧಾನ ಮತ್ತು ಪತ್ತೆ ಹಚ್ಚುವುದು ವಿಧಾನ:
ಅಕ್ಕಿಯಲ್ಲಿ: ಬಿಳಿ ಕಲ್ಲು, ಮಣ್ಣು, ಮರಳು, ಕೆಮಿಕಲ್ಸ್ ಅಕ್ಕಿ ಕೂಡಿದೇ ಅವುಗಳು ನೋಡಲು ಅಕ್ಕಿಯ ಹಾಗೇನೆ ಕಂಡು ಜನರ ಕಣ್ಣಿಗೆ ಮಣ್ಣು ಎರಚುವುದು ಸಾಮಾನ್ಯ ಅಂತಹ ಅಕ್ಕಿಯನ್ನು ನೀರಿನಲ್ಲಿ ಹಾಕಿ ಬೇಯಿಸದೆ ಬಿಟ್ಟು ಪರೀಕ್ಷಿಸಬೇಕು.

ಗೋಧಿಹಿಟ್ಟು: ಈ ಹಿಟ್ಟಿನಲ್ಲಿ ಅಧಿಕ ಪ್ರಮಾಣದಲ್ಲಿ ತೌಡು, ಕಲ್ಲಿನ ಪುಡಿ, ಬಾರ್ಲಿಕ್ ಪುಡಿ, ಸೇರಿಸುವ ಸಾಧ್ಯತೆ ಇರುತ್ತೆ ಅದನ್ನು ಪತ್ತೆ ಹಚ್ಚಲು ಹಿಟ್ಟನ್ನು ಕೈಯಿಂದ ಉಜ್ಜಿನೋಡಿ ಹಿಟ್ಟು ವರಟಾಗಿದ್ದರೆ ಅದರಲ್ಲಿ ಕಲಬೆರೆಕೆ ಯಾಗಿದೆ ಅಂತ.

ಕಾಫಿಪುಡಿ: ಅಗತ್ಯೇಕಿಂತ ಅಧಿಕವಾದ ಚಿಕೋರಿ ಬಳಕೆಯಾಗುತ್ತೆ ಇದನ್ನು ಪತ್ತೆಹಚ್ಚಲು ನೀರಿನಲ್ಲಿ ಸ್ವಲ್ಪ ಕಾಫಿಪುಡಿಯನ್ನು ಹಾಕಿದರೆ ಕಾಫಿ ತೆಳುತ್ತೆ ಚಿಕೋರಿ ಕೆಳೆಗೆ ಬಿಳ್ಳುತ್ತೆ ಅಷ್ಟೇ ಅಲ್ಲ ಅದರ ಕಲರ್ ಕೂಡ ಕಂದು ಬಣ್ಣಕ್ಕೆ ತಿರುಗುತ್ತೆ.

ಚಹಾಪುಡಿ: ಬಳಕೆಮಾಡಿದ ಚಹಾಪುಡಿಗೆ ಬಣ್ಣವನ್ನು ಸೇರಿಸಿ ಹೊಸ ಪುಡಿಯಲ್ಲಿ ಸೇರಿಸಲಾಗುತ್ತೆ ಇದನ್ನು ಪತ್ತೆಹಚ್ಚಲು ತೇವವಾದ ಕಾಗಧದ ಹಾಳೆಯ ಮೇಲೆ ಪುಡಿಯನ್ನು ಉದುರಿಸಿ ಉಜೀನೋಡಿ ಆಗ ಕಾಗಧದ ಮೇಲೆ ಹಳದಿ, ಗುಲಾಬಿ, ಕೆಂಪು ಚುಕ್ಕಿಗಳು ಕಾಣಿಸಿಕೊಂಡರೆ ಬಣ್ಣ ಬೇರೆಕೆಯಾಗಿದೆ ಅಂತ ಅರ್ಥ.

ಜೇನುತುಪ್ಪ: ಈ ತುಪ್ಪಕ್ಕೆ ಕಾಕಂಬಿಯ ಬೆರೆಕೆಮಾಡಲಾಗುತ್ತೆ ಇದನ್ನು ಪತ್ತೆಹಚ್ಚುವುದು ತುಂಬಾನೇ ಸುಲಭ ಜೇನುತುಪ್ಪವನ್ನು ಒಂದು ಹತ್ತಿಯಲ್ಲಿ ನೆನೇಸಿ ಬೆಂಕಿಯಲ್ಲಿ ಹಿಡಿದು ಪರಿಕ್ಷಿಸಿದ್ದಾಗ ಬೆರೆಕೆಯಾಗಿದ್ರೆ ಬೆಂಕಿಹತ್ತಿ ಕೀರುಗುಟ್ಟುವ ಶಬ್ದ ಬರುತ್ತೆ.

ಕಾಳುಮೆಣಸು: ಕಾಳುಮೆಣಸಿನಲ್ಲಿ ಪಪ್ಪಾಯ ಬೀಜವನ್ನು ಸೇರಿಸಲಾಗುತ್ತೆ ಇದನ್ನು ಕಂಡು ಹಿಡಿಯೋದು ತುಂಬಾನೇ ಸರಳ ಹೇಗೆಂದರೆ ಈ ಬೀಜವನ್ನು ನೀರಿನಲ್ಲಿ ಹಾಕಿ ಪಪ್ಪಾಯ ಬೀಜಗಳು ಹಗುರವಾಗಿದ್ರಿಂದ ನೀರಿನಲ್ಲಿ ಸರಳವಾಗಿ ತೆಲುತ್ತೆ.

ಜೀರಿಗೆ: ಜೀರಿಗೆಯಲ್ಲಿ ಬಣ್ಣ ಹಾಕಿದ ಹುಲ್ಲಿನ ಬೀಜಗಳನ್ನು ಬೆರೆಕೆಮಾಡಲಾಗುತ್ತೆ ಕಂಡುಹಿಡಿಯಲು ಜೀರಿಗೆಯನ್ನು ಕೈಯಲ್ಲಿ ಹಾಕಿಕೊಂಡು ಉಜ್ಜಿ ಬೆರೆಕೆಯಾಗಿದ್ರೆ ಅವು ಕಪ್ಪಾಗುತ್ತೆ,

ಅಡಿಕೆಪುಡಿ: ಮರದ ಹೊಟ್ಟನ್ನು ಸೇರಿಸಲಾಗುತ್ತೆ ಈ ಪುಡಿಯನ್ನು ನೀರಿನಲ್ಲಿ ಹಾಕಿದ್ದಾಗ ಅಡಿಕೆ ಮುಳುಗುತ್ತೆ ಮರದಹೊಟ್ಟು ತೆಳುತ್ತೆ ಬಣ್ಣ ಕರಗುತ್ತೆ.
ಇಂಗು: ಇಂಗಿಗೆ ಮೈದಾಹಿಟ್ಟು, ಬಣ್ಣ ವಾಸನೆ ಸೇರಿಸಿದ ರಾಳವನ್ನು ಸೇರಿಸಲಾಗುತ್ತೆ ಪರೀಕ್ಷಿಸಲು ಇಂಗನ್ನು ನೀರಿನಲ್ಲಿ ಕರಗಲು ಬೀಡಿ ಸುದ್ದ ಇಂಗಾಗಿದ್ರೆ ಬಣ್ಣ ಬಿಳಿದ್ರಾವಣ ಬಣ್ಣಕ್ಕೆ ತಿರುಗುತ್ತೆ.

ಹಾಲು: ಹಾಲಿನಲ್ಲಿ ಹೆಚ್ಚಾಗಿ ಕಲಬೆರೆಕೆಯಾಗೋದು ನೀರು, ಸಕ್ಕರೆ, ಯೂರಿಯಾ ಗೊಬ್ಬರ ಕಲಬೆರಕೆಯಾಗುತ್ತೆ ಅದನ್ನು ಪರೀಕ್ಷಿಸುವುದು ಮೇಲುಗಡೆ ಇರುವ ಸ್ವಲ್ಪ ಹಾಲು ಮತ್ತು ಪೂರ್ತಿ ಕೇಳಗಡೆ ಇರುವ ಹಸಿಹಾಲನ್ನು ಸ್ವಲ್ಪ ಸ್ವಲ್ಪ ಕುಡಿದು ನೋಡಿ ಎರಡರ ರುಚಿ ಬೇರೆಬೇರೆಯಾಗಿ ಇರುತ್ತೆ.
ಕೇಸರಿ: ಪ್ಲಾಸ್ಟಿಕ್ ತೆಳುವಿನ ಪುಡಿ ಮತ್ತು ಜೋಳದ ಪುಡಿಗೆ ಬಣ್ಣವನ್ನು ಸೇರಿಸಿ ಜನರಿಗೆ ಮೋಸಮಾಡುತ್ತಾರೆ ಪತ್ತೆಹಚ್ಚುವುದು ಹೇಗೆ ಅಂದ್ರೆ ಅಸಲಿ ಕೇಸರಿ ಹಿಚ್ಚುಕಿದ್ರೆ ಗಟ್ಟಿಯಾಗಿರುತ್ತೆ ಇದನ್ನು ನೀರಿನಲ್ಲಿ ಹಾಕಿದ್ರೆ ಸುದ್ದವಾದ ಸಂಪೂರ್ಣವಾಗಿ ಕರಗಿ ವಾಸನೆ ಮತ್ತು ಬಣ್ಣ ಬರುತ್ತೆ ಕಲಬೆರೆಕೆಯಾದ ವಸ್ತುಗಳು ಹಿಚ್ಚುಕಿದ್ರೆ ಪುಡಿ ಪುಡಿಯಾಗಿ ನೀರಿನಲ್ಲಿ ಕರಗದೆ ಹಾಗೆ ಇರುತ್ತೆ.

ಬೆಲ್ಲ: ಬೆಲ್ಲದಲ್ಲಿ ಮೆಟಾನಿಕಲ್ ಹಳದಿ, ಕಲ್ಲಿನ ಪುಡಿ, ಸುಟ್ಟ ಕಟ್ಟಿಗೆಯ ಪುಡಿ, ಗೊಬ್ಬರ, ಸಕ್ರಿನ್, ಬಳಕೆ ಮಾಡಲಾಗುತ್ತೆ ಇದನ್ನು ಪತ್ತೆಹಚ್ಚುವುದು ಹೈಡ್ರೋಕ್ಲೋರಿಕ್ ಆಮ್ಲವನ್ನು ಹಾಕಿದ್ರೆ ಸತ್ಯೇ ಬಯಲಾಗುತ್ತೆ ಕಲಬೆರೆಕೆಯಾಗಿದ್ರೆ ಅದು ತಿಳಿಗುಲಾಬಿ ಬಣ್ಣಕ್ಕೆ ತಿರುಗುತ್ತೆ.
ತುಪ್ಪ: ತುಪ್ಪದಲ್ಲಿ ವನಸ್ಪತಿ, ಧನದ ಅಥವಾ ಹಂದಿಯ ಕೊಬ್ಬನು ಕರಗಿಸಿ ಸೇರಿಸುವ ಸಾಧ್ಯತೆ ಇರುತ್ತೆ, ಇದನ್ನು ಪತ್ತೆ ಹಚ್ಚಲು ಹತ್ತುಮಿಲಿಮೀಟರ್ ಅಲ್ಲಿ ಹೈಡ್ರೋಕ್ರೋರಿಕ್ ಆಮ್ಲದಲ್ಲಿ ಒಂದು ಚಮಚ ಸಕ್ಕರೆಯನ್ನು ಕರಗಿಸಿ ನಂತರ ಕರಗಿದ ಹತ್ತು ಮಿಲಿಮೀಟರ್ ತುಪ್ಪವನ್ನು ಅದಕ್ಕೆ ಸೇರಿಸಿದ್ದಾಗ ಕಲಬೆರೆಕೆಯಾಗಿದ್ರೆ ಕೆಂಪು ಬಣ್ಣದ ರೂಪವನ್ನು ತಾಳುತ್ತೆ.

ರವಾ: ಕಬ್ಬಿಣದ ದೂಳು, ಬೆಂಚು ಕಲ್ಲಿನ ಪುಡಿ, ರವೆಯಲ್ಲಿ ಸೇರಿರುವ ಸಾದ್ಯತೆ ಇದೆ ಅದಕ್ಕೆ ಆಯಸ್ಕಾಂತವನ್ನು ಅದರಲ್ಲಿ ಆಡಿಸಿದ್ದರೆ ಕಬ್ಬಿಣದ ಅಂಶ ಅಂಟಿಕೊಳುತ್ತೆ ಹಾಗೆಯೇ ನೀರಿನಲ್ಲಿ ಸ್ವಲ್ಪ ರವಾ ಹಾಕಿ ಮೆಲ್ಲಗೆ ಬೆರಳಾಡಿಸಿದರೆ ಕಲ್ಲಿನ ಪುಡಿ ಬೆರಳಿಗೆ ಚುಚ್ಚಿದಂತೆ ಆಗುತ್ತೆ.