OLXನಲ್ಲಿ ಈ ಮುಸ್ಲಿಂ ಮಾಡಿದ ವಂಚನೆ ಮಾಡಿದ ವಿಧಾನ ಕಂಡ್ರೆ, ಇನ್ಮುಂದೆ ಇಂಥ ಆನ್ಲೈನ್ ವಹಿವಾಟುಗಳನ್ನೇ ನಿಲ್ಲಿಸುತ್ತೀರ!!

0
568

ಬೆಂಗಳೂರು: ಒಎಲ್ಎಕ್ಸ್ ಮೂಲಕ ಮೋಸ ಹೋಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕುರಿತು ಹಲವಾರು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂತೆಯೇ, ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.

OLX ನಲ್ಲಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸೆಕೆಂಡ್ ಹ್ಯಾಂಡ್ ವಸ್ತುಗಳ ಖರೀದಿ ಮತ್ತು ಮಾರಾಟದ ಪ್ರಮುಖ ವೆಬ್ಸೈಟ್ ಓಎಲ್ಎಕ್ಸ್ ಮೂಲಕ 20ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ ನಾಲ್ವರು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಓಎಲ್ಎಕ್ಸ್ ಮೂಲಕ ವಂಚನೆ ಮಾಡುತ್ತಿದ್ದ ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಉಮರ್ ಖಾನ್, ಸೈದ್, ವಜೀಬ್, ಸಾಹಿಲ್ ಬಂಧಿತ ಆರೋಪಿಗಳು.

ರಾಜಸ್ಥಾನದ ಈ ನಾಲ್ವರು ಆರೋಪಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು. ನಕಲಿ ಐಡಿ ಕಾರ್ಡ್, ದಾಖಲೆಗಳ ಮೂಲಕ ಆರೋಪಿಗಳು OLX ನಲ್ಲಿ ಕಡಿಮೆ ಬೆಲೆಗೆ ವಾಹನ ಮಾರಾಟಕ್ಕಿರುವ ಭಾವಚಿತ್ರವನ್ನು ಹರಿಬಿಡುತ್ತಿದ್ದರು. ನಂತರ ಗ್ರಾಹಕರು ವಾಹನ ಖರೀದಿಗಾಗಿ ಕರೆ ಮಾಡಿದಾಗ, ತಾವು ಸೇನೆಯಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿ ನಂಬಿಸುತ್ತಿದ್ದರು. ಸೇನೆಯಲ್ಲಿ ವರ್ಗಾವಣೆಗೊಂಡಿರುವುದರಿಂದ ಬೇರೆಡೆ ಹೋಗುತ್ತಿದ್ದು, ಅದಕ್ಕಾಗಿ ಕಾರು ಮಾರಾಟ ಮಾಡುತ್ತಿರುವುದಾಗಿ ಹೇಳುತ್ತಿದ್ದರು. ಬಳಿಕ ತಮ್ಮ ಖಾತೆಗೆ ಹಣ ವರ್ಗಾವಣೆ ಗೊಳ್ಳುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಜನರಿಗೆ ಮೋಸ ಮಾಡುತ್ತಿದ್ದರು.

ಬೇರೆ ಕೇಸ್​ನಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧಿತರಾಗಿ ಜೈಲಿನಲ್ಲಿದ್ದ ಆರೋಪಿಗಳನ್ನು ವಿಚಾರಣೆ ಸಲುವಾಗಿ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ರೀತಿ ಸುಮಾರು 20 ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದ ಸೈಬರ್ ಕ್ರೈಮ್ ಪೊಲೀಸರು ತನಿಖೆ ವೇಳೆ ಬೇರೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Also read: 15 ತಿಂಗಳಾದರೂ ಸಿಕ್ಕಿ ಬೀಳದ ಕಳ್ಳ ತನ್ನ ತಾಯಿಯ ವಾಟ್ಸಾಪ್ ಸ್ಟೇಟಸ್-ನಿಂದ ಸಿಕ್ಕಿ ಬಿದ್ದ ಬಗ್ಗೆ ಓದಿ!!