ಸೆಪ್ಟೆಂಬರ್ 10ರಂದು ಭಾರತ್ ಬಂದ್, ಸಂಚಾರ ಅಸ್ತವ್ಯಸ್ತವಾಗಲಿದೆ, ಯಾವುದು ಇರುತ್ತೆ ಯಾವುದು ಇರೋದಿಲ್ಲ ಅಂತ ಓದಿ!!

0
713

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲಗಳ ಬೆಲೆಗಳಿಂದಾಗಿ ಜನಸಾಮಾನ್ಯ ಸುಟ್ಟು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಇದರ ಬಿಸಿ ಮುಟ್ಟಿಸಲು ಇದೇ ಸೆಪ್ಟೆಂಬರ್ 10 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ಗೆ ಕರೆನೀಡಿದ್ದು ದೇಶವ್ಯಾಪಿ ಪ್ರತಿಭಟನೆ ನಡೆಸಿ ಭಾರತ್ ಬಂದ್ ನಡೆಸಲಾಗುತ್ತದೆ. ಈ ಬಂದ್ ಬಿಸಿ ಕರ್ನಾಟಕದಲ್ಲಿವೂ ತಟ್ಟುವ ಸಾಧ್ಯತೆಯಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಬಂದ್‍ಗೆ ಕರೆ ನೀಡಿದೆ ಎಂದು ಕಾಂಗ್ರೆಸ್ ವಕ್ತಾರೆ ರಂದೀಪ್ ಸುರ್ಜೆವಾಲಾ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ್ಕಾರವು 11 ಲಕ್ಷ ಕೋಟಿ ರೂಪಾಯಿಯನ್ನು ಕೊಳ್ಳೆಹೊಡೆದಿದೆ. ಶೀಘ್ರವೇ ಕೇಂದ್ರ ತೆರಿಗೆ ಹಾಗೂ ಅಬಕಾರಿ ಸುಂಕವನ್ನು ರಾಜ್ಯಗಳಲ್ಲಿ ಕಡಿತಗೊಳಿಸುವಂತೆ ಆಗ್ರಹಿಸುತ್ತೇವೆ. ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಸಹ ಜಿಎಸ್‍ಟಿ ವ್ಯಾಪ್ತಿಗೆ ಒಳಪಡಿಸಬೇಕು. ಇದರಿಂದಾಗಿ ಜನಸಾಮಾನ್ಯರ ಮೇಲಿನ ಹೊರೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಡಿಸೇಲ್ ಹಾಗೂ ಅಡುಗೆ ಅನಿಲಗಳ ಬೆಲೆಗಳ ಪ್ರಮಾಣ ಏರಿಕೆಯಾಗುತ್ತಾನೆ ಇರುತ್ತೆ. ಹೀಗೆ ಆದರೆ ಜನಸಾಮಾನ್ಯರು ಸುಟ್ಟು ಹೋಗುತ್ತಾರೆ. ಇದೆ ಕಾರಣಕ್ಕೆ ಭಾರತ್ ಬಂದ್‍ಗೆ ಎಲ್ಲಾ ವಿರೋಧ ಪಕ್ಷದ ನಾಯಕರು ಸಹ ಬೆಂಬಲ ನೀಡಬೇಕು. ಅಲ್ಲದೇ ಎಲ್ಲಾ ಎನ್‍ಜಿಓ ಹಾಗೂ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಳ್ಳುತ್ತೇನೆಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ರಾಜ್ಯದ ಓಲಾ,ಉಬರ್,ಟ್ಯಾಕ್ಸಿ, ಆಟೋ, ಮಾಲಿಕರು ಮತ್ತು ಚಾಲಕ ಸಂಘ, ಸಂಘಟನೆಗಳು. ಲಾರಿ ಮಾಲೀಕರ ಸಂಘ, ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕ ಸಂಘ ಬಂದ್ ಗೆ ಬೆಂಬಲ ನೀಡಿವೆ ಹಾಗೆಯೇ AITUC ನೇತೃತ್ವದ ksrtc ಸ್ಟಾಪ್ ಮತ್ತು ವರ್ಕ್ಸ್ ಫೆಡೆರೇಷನ್ ಸಾತ್ ನಿಡುತ್ತಿದು. BMTC, KSRTC , NWKRTC, NEKRTC ಬಸ್ ವ್ಯವಸ್ಥೆಗಳು ವ್ಯತ್ಯಯವಾಗಲಿವೆ. ಯಾಕೆಂದರೆ ಸುರಕ್ಷತೆಯ ದೃಷ್ಟಿಯಿಂದಲೂ ಬಸ್ ಸಂಚಾರ ಸ್ಥಗಿತಗೊಳಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಬಂದ್ ದಿನ ಬೆಳಿಗ್ಗಿನ ಪರಿಸ್ಥಿತಿ ಅವಲೋಕಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ, ಕೆಎಸ್ ಆರ್ ಟಿಸಿ ಆಡಳಿತ ಮಂಡಳಿ ತಿಳಿಸಿದೆ ಇದರಿಂದ ksrtc ರಸ್ತೆಗಿಳಿಯುವುದು ಬಹುತೇಕವಾಗಿ ಅನುಮಾನವಾಗಿದೆ.

ಯಾವ ಸಾರಿಗೆಗಳು ಅಲಭ್ಯವಾಗಲಿವೆ..?
ಕ್ಯಾಬ್, ಓಲಾ, ಊಬರ್, ಆಟೋ. KSRTC, BMTC, ಪ್ರವಾಸಿ ವಾಹನಗಳು, ಲಾರಿ.
ಯಾವ ಸಾರಿಗೆಗಳು ಲಭ್ಯವಾಗಲಿವೆ…?
ನಮ್ಮ ಮೆಟ್ರೋ , ಏರ್ ಪೋರ್ಟ್ ಟ್ಯಾಕ್ಸಿಗಳು ಎಂದಿನಂತೇ ಕಾರ್ಯ ನಿರ್ವಹಿಸಲಿವೆ. ದೂರದೂರುಗಳಿಂದ ವಿಮಾನಕ್ಕೆ ಬೆಂಗಳೂರಿಗೆ ಬಂದವರು ಮನೆ ತಲುಪಲು ತಾಪತ್ರಯ ಪಡಬೇಕಾದ ಅಗತ್ಯವಿಲ್ಲ.
ಶಾಲೆ-ಕಾಲೇಜಿಗೆ ರಜೆ?
ಶಾಲೆ ಕಾಲೇಜುಗಳು ಸೋಮವಾರ ರಜೆ ಘೋಷಿಸುತ್ತವೆಯೇ ಇಲ್ಲವೇ ಎಂಬುದು ಶನಿವಾರ ನಿರ್ಧಾರವಾಗಲಿದ್ದು, ಅಕಸ್ಮಾತ್ ಸೋಮವಾರ ಪರೀಕ್ಷೆಗಳೇನಾದರೂ ನಿಗದಿಯಾಗಿದ್ದರೆ ಅವುಗಳನ್ನು ಮುಂದೂಡುವುದು ಬಹುತೇಕ ಖಚಿತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮೈತ್ರಿಕೂಟದ್ದೇ ಸರ್ಕಾರವಾಗಿರುವುದರಿಂದ ರಾಜ್ಯದಲ್ಲಿ ಬಂದ್ ಬಿಸಿ ತಟ್ಟುವುದು ಗ್ಯಾರಂಟಿ.