ಮೈತ್ರಿ ಸರ್ಕಾರ ಕೇಂದ್ರದಲ್ಲಿ ಬಂದರೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ :ಎಚ್.ಡಿ.ಕೆ!! ಈ ವಿಚಾರದಲ್ಲೂ ರಾಜಕೀಯ ಅವಶ್ಯಕತೆ ಇದ್ಯಾ?

0
515

ತ್ರಿವಿದ ದಾಸೋಹಿ ಸಿದ್ದಗಂಗಾ ಶ್ರೀಗಳ 11 ನೇ ದಿನದ ಪುಣ್ಯ ಸ್ಮರಣೆಯ ನುಡಿನಮನ ಕಾರ್ಯಕ್ರಮದಲ್ಲಿ ಭಾರತರತ್ನ ನೀಡುವ ಬಗ್ಗೆ ಚರ್ಚೆಗಳು ನಡೆದವು. ಈ ವಿಷಯವನ್ನು ಮೇಲೆಯತ್ತಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಶ್ರೀಗಳಿಗೆ ಭಾರತ ರತ್ನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬರುವ ಚುನಾವಣೆಯಲ್ಲಿ ನಮಗೆ ಕೇಂದ್ರದಲ್ಲಿ ಅಧಿಕಾರ ಸಿಕ್ಕರೇ ಶ್ರೀಗಳಿಗೆ ಭಾರತರತ್ನ ನೀಡುತ್ತೇವೆ. ಶ್ರೀಗಳ ಜನ್ಮ ಸ್ಥಳವನ್ನು ಮಾದರಿ ಗ್ರಾಮ ಮಾಡುತ್ತೇವೆ ಮುಂದಿನ ಆರೇಳು ತಿಂಗಳಲ್ಲಿ ನಾವು ಈ ತೀರ್ಮಾನ ಮಾಡುತ್ತೇವೆ. ಇದನ್ನು ಸೂಕ್ಮವಾಗಿ ಜನರು ಅರ್ಥ ಮಾಡಿಕೊಳ್ಳಬೇಕು. ನಮಗೆ ಶಕ್ತಿ ತುಂಬಬೇಕು ಎಂದರು.

Also read: ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ಪಾಲಿಸಿಕೊಂಡು ಬರುತ್ತಿರುವ 9 ತತ್ವಗಳ ಬಗ್ಗೆ ತಿಳಿದುಕೊಂಡರೆ ಅವರ ಮೇಲಿನ ಗೌರವ ಇನ್ನು ಹೆಚ್ಚಾಗುತ್ತೆ

ಅಷ್ಟೇ ಅಲ್ಲದೆ ಸ್ವಾಮಿಜಿಯವರ ವ್ಯಕ್ತಿತ್ವದ ಬಗ್ಗೆ ಮಾತನಾಡಿ, ಶ್ರೀಗಳು ಎಂದೂ ನೆರವು ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿಲ್ಲ. ಆದರೆ ಕಾಣದ ಕೈಗಳಿಂದ ದೊಡ್ಡಮಟ್ಟದ ಸಹಾಯ ಹರಿದು ಬಂತು. ಶ್ರೀ ಗಳಿಗೆ ರೈತರ ಬಗ್ಗೆ ವಿಶೇಷವಾದ ಅಪಾರ ಕಾಳಜಿ ಇತ್ತು. ಮಠಕ್ಕೆ ತೆರಳಿ ಅವರನ್ನ ಭೇಟಿ ಮಾಡುತ್ತಿದ್ದ ವೇಳೆ ರೈತರ ಬಗ್ಗೆ ಇರುವ ಕಾಳಜಿ ತಿಳಿಯುತ್ತಿತ್ತು. ಇಷ್ಟೊಂದು ಶಕ್ತಿ ತುಂಬಿರುವ ದೇವರು ನಮ್ಮ ಹೃದಯದಲ್ಲಿ ಎಂದಿಗೂ ಇರುತ್ತಾರೆ. ಶ್ರೀಗಳ ಭಾವಚಿತ್ರವನ್ನ ಕಚೇರಿಯಲ್ಲಿ ಇಡಲಾಗಿದೆ. ದಿನನಿತ್ಯ ಶ್ರೀಗಳಿಗೆ ನಮಿಸಿ ಕೆಲಸ ಪ್ರಾರಂಭಿಸುತ್ತೇವೆ ಅವರ ಆಶೀರ್ವಾದ ನಮ್ಮ ರಾಜ್ಯದ ಮೇಲೆ ಇದೆ. ಶ್ರೀಗಳಿಗೆ ಭಾರತ ರತ್ನ ನೀಡಿದರೆ ಆ ಪ್ರಶಸ್ತಿಗೆ ಗೌರವ ಹೆಚ್ಚುತ್ತಿತ್ತು.

2006ರಲ್ಲಿ ಕರ್ನಾಟಕ ರತ್ನ ನೀಡಿದ್ದೇವೆ. ಅಂದೇ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಹೇಳಿದ್ದೆ. ಆಗಲೇ ಕೊಟ್ಟು ಗೌರವಿಸಬೇಕಿತ್ತು. ಮುಂದಿನ ಚುನಾವಣೆಯಲ್ಲಿ ನಮಗೆ ಕೇಂದ್ರದಲ್ಲಿ ಅಧಿಕಾರ ಸಿಕ್ಕರೆ ಶ್ರೀಗಳಿಗೆ ಖಂಡಿತವಾಗಿಯೂ ಭಾರತ ರತ್ನ ಪ್ರಶಸ್ತಿ ಘೋಷಿಸುತ್ತೇವೆ ಎಂದು ಭರವಸೆ ನೀಡಿದರು.

ಶ್ರೀ ಗಳ ಪುಣ್ಯ ಸ್ಮರಣೆಯಲ್ಲಿ 5 ಲಕ್ಷ ಜನ:

11 ನೇ ದಿನದ ಪುಣ್ಯಸ್ಮರಣೆ ವಿಜ್ರಂಭಣೆಯಿಂದ ನೆರೆವೇರಿತು ಮುಂಜಾನೆ 5 ಗಂಟೆಯಿಂದ 6.30 ರವರೆಗೆ ಸಿದ್ದಗಂಗಾ ಮಠದಲ್ಲಿ ಉದ್ಧಾನ ಶಿವಯೋಗಿಗಳ ಗದ್ದುಗೆಗೆ ಪೂಜೆ ಮಾಡಲಾಯಿತು. ಹಳೇ ಮಠದಲ್ಲಿ ಇಷ್ಟಲಿಂಗ ಪೂಜೆ ಬಳಿಕ ಗದ್ದುಗೆಗೆ ಪೂಜೆ ನೆರವೇರಿಸಲಾಯಿತು. ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು ಪೂಜೆ ಸಲ್ಲಿಸಿದರು. ಪುಣ್ಯ ಸ್ಮರಣೆ ನಡೆಯುವ ಗೋಸಲ ಸಿದ್ದೇಶ್ವರ ವೇದಿಕೆ ಮುಂಭಾಗ ಸಾರ್ವಜನಿಕರು ಕೂರಲು ಆಸನ ವ್ಯವಸ್ಥೆ ಮಾಡಲಾಗಿತ್ತು ಕಾರ್ಯಕ್ರಮ ವೀಕ್ಷಿಸಲು 4 ಬೃಹತ್ ಎಲ್​ಇಡಿ ಪರದೆ ವ್ಯವಸ್ಥೆ ಇತ್ತು. ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಸುಮಾರು 5 ಲಕ್ಷ ಜನ ಸೇರಿದ್ದರು. ಭದ್ರತೆಗೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸ್​ ನಿಯೋಜನೆ ಮಾಡಲಾಗಿತ್ತು.

ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ:

ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪೂಜೆಯ ಬಳಿಕ ಮಠದ ರಾಜಬೀದಿಯಲ್ಲಿ ಬೆಳ್ಳಿರಥ ವೀರಗಾಸೆ, ಧ್ವಜಕುಣಿತದ ಮೂಲಕ ರಥ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಮಠದ ಸಾವಿರಾರು ಮಕ್ಕಳು, ಭಕ್ತರು ಭಾಗವಹಿಸಿದರು. ಸುಮಾರು 1 ಸಾವಿರ ಅಡುಗೆ ಭಟ್ಟರು ಅಡುಗೆ ತಯಾರಿಸಿದ್ದರು ಎಲ್ಲಾ ಭಕ್ತರಿಗೂ ಟೇಬಲ್​ ವ್ಯವಸ್ಥೆಯ ಮೂಲಕ ಅನ್ನಸಂತರ್ಪಣೆ ಮಾಡಲಾಯಿತು. ಬೆಂಗಳೂರಿನಿಂದ ತುಮಕೂರಿಗೆ 3 ವಿಶೇಷ ಡೆಮು ರೈಲು ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರು ರೈಲು ಸಂಚಾರ ಮಾಡಿ. ಯಶವಂತಪುರದಿಂದ ಬೆಳಗ್ಗೆ 7.30ಕ್ಕೆ, ಮಧ್ಯಾಹ್ನ 12ಕ್ಕೆ, ಸಂಜೆ 5 ಗಂಟೆಗೆ ಮೂರು ರೈಲುಗಳ ಸಂಚಾರ ನಡೆಸಿದವು. ಸಂಪರ್ಕ ಕ್ರಾಂತಿ, ಜನಶತಾಬ್ದಿ ರೈಲು ಬಿಟ್ಟು ಉಳಿದೆಲ್ಲಾ ರೈಲುಗಳು ಕ್ಯಾತಸಂದ್ರ ನಿಲ್ದಾಣದಲ್ಲಿ ಸ್ಟಾಪ್ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿದವು.

Also read: ಶಿವಕುಮಾರ್ ಸ್ವಾಮೀಜಿ ಅವರ ಸಾಧನೆಗಳ ಮೂಲಕ ಇನ್ನೂ ನೂರಾರು ಕಾಲ ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಅನ್ನೋದಕ್ಕೆ ಸಾಕ್ಷಿ ಈ ಆರ್ಟಿಕಲ್!!