ಬಿಗ್ಬಾಸ್ ಮನೆಯ ಸ್ಪರ್ಧಿಗಳನ್ನು ಕೊಲ್ಲಲು ಇಬ್ಬರು ಕೊಲೆಗಾರರು ಬಿಗ್ಬಾಸ್ ಮನೆಗೆ ಬಂದಿದ್ದರು, ಆದರೆ ಯಾವುದೇ ಸ್ಪರ್ದಿಗೆ ಯಾವ ರೀತಿಯ ಹಾನಿಯು ಆಗಿಲ್ಲ, ಬಿಗ್-ಬಾಸ್ ಮನೆಗೆ ಕೊಲೆಗಾರರು ಬರಲು ಹೇಗೆ ಸಾಧ್ಯ, ಸೆಕ್ಯೂರಿಟಿ ಇರ್ಲಿಲ್ವ ಅಂತ ನೀವು ಕೇಳಬಹುದು, ನಿಮ್ಮೆಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ಮುಂದೆ ಓದಿ.
ಬಿಗ್ಬಾಸ್ ಮನೆ ಪ್ರವೇಶಿಸಿದ್ದು ಹೊರಗಿನಿಂದ ಬಂದ ಕೊಲೆಗಾರರಲ್ಲ ಬದಲಿಗೆ ಅವರು ಸ್ವತಃ ಸ್ಪರ್ದಿಗಳೇ, ಪ್ರತಿ ವಾರದಂತೆ ಈ ವಾರವೂ ಕೂಡ ಸ್ಪರ್ಧಿಗಳಿಗೆ ಬಿಗ್ಬಾಸ್ ಟಾಸ್ಕ್ವೊಂದನ್ನು ನೀಡಿದ್ದರು. ಆ ಟಾಸ್ಕ್ ಪ್ರಕಾರ ಜೈಲಿನಿಂದ ತಪ್ಪಿಸಿಕೊಂಡ ಇಬ್ಬರು ಕೊಲೆಗಾರರು ಸ್ಪರ್ಧಿಗಳನ್ನು ಕೊಲ್ಲಬೇಕು ಮತ್ತು ಸ್ಪರ್ಧಿಗಳು ತಮಗೆ ಯಾವುದೇ ಅಪಾಯವಾಗದಂತೆ ಈ ಇಬ್ಬರು ಕೊಲೆಗಾರರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು, ತುಂಬ ಕುತೂಹಲಕರ ಟಾಸ್ಕ್ ಅಲ್ಲವೇ.
ಈ ಟಾಸ್ಕ್ ಕುರಿತು ಬಿಗ್ಬಾಸ್ ಸ್ಪರ್ಧಿಗಳನ್ನು ಕನ್ಫೆಶನ್ ರೂಮ್ಗೆ ಕರೆದು ಕೆಲವು ಮಾಹಿತಿಗಳನ್ನು ನೀಡಿದರು. ಟಾಸ್ಕ್ ಪ್ರಕಾರ ಅನುಪಮಾ ಹಾಗೂ ರಿಯಾಜ್ ರಹಸ್ಯವಾಗಿ ಈ ಕೊಲೆಗಳನ್ನು ಮಾಡಬೇಕಿತ್ತು ಇದ್ದಕ್ಕಾಗಿ ರಿಯಾಜ್ ಹಾಗೂ ಅನುಪಮಾಗೆ ಅರ್ಧ ಹರಿದ ನೋಟು ಕೊಟ್ಟು ಒಬ್ಬರಿಗೊಬ್ಬರು ಮತ್ತೊಬ್ಬ ಕೊಲೆಗಾರ ಯಾರು ಎಂಬುದನ್ನು ಕಂಡುಹಿಡಿಯಲು ಬಿಗ್ಬಾಸ್ ಹೇಳಿದರು.
ರಿಯಾಜ್ಗೆ ರಹಸ್ಯವಾಗಿ ಬಿಗ್ಬಾಸ್ ಮೊಬೈಲ್ ಅನ್ನು ನೀಡಿ, ರಹಸ್ಯವಾಗಿ ಯಾರನ್ನು ಹೇಗೆ ಕೊಲೆ ಮಾಡಬೇಕುಎಂದು ಹೇಳಿದರು. ಟಾಸ್ಕ್ ಪ್ರಕಾರ ರಿಯಾಜ್ ಮೊದಲು ಲಾಸ್ಯ ಅವರನ್ನು, ಅವರ ನಾಲ್ಕು ಜೊತೆ ಬಟ್ಟೆಗಳನ್ನು ಮಡಚಿಸುವ ಮೂಲಕ ಕೊಲೆ ಮಾಡಬೇಕಿತ್ತು. ರಿಯಾಜ್ ಲಾಸ್ಯ ಅವರನ್ನು ಇನ್ವೆಸ್ಟಿಗೇಶನ್ ಮಾಡುವ ನೆಪದಲ್ಲಿ ತಮ್ಮ ಬೆಡ್ ಬಳಿ ಕರೆದು ಬಟ್ಟೆಗಳನ್ನು ಮಡಚುವಂತೆ ಹೇಳಿದರು, ಲಾಸ್ಯ ಟಾಸ್ಕ್ ಎಂದು ತಿಳಿಯದೆ ರಿಯಾಜ್ ಅವರ ಬಟ್ಟೆಗಳನ್ನು ಮಡಚಿದರು.
ಇನ್ನು ಎರಡನೇ ಟಾಸ್ಕ್-ನಲ್ಲಿ ಜೈ ಶ್ರೀನಿವಾಸನ್ ಅವರಿಂದ ರಜನೀಕಾಂತ್ ಡೈಲಾಗ್ಗಳನ್ನು ಹೇಳಿಸುವ ಮೂಲಕ ಕೊಲೆ ಮಾಡಬೇಕಿತ್ತು. ಅದರಂತೆ ಜೈಶ್ರೀನಿವಾಸನ್ ಗಾರ್ಡನ್ ಏರಿಯಾದಲ್ಲಿ ಅನುಪಮಾ, ಕೃಷಿ ಬಳಿ ಮಾತನಾಡುವಾಗ ಅಲ್ಲಿಗೆ ಬಂದ ರಿಯಾಜ್, ಲಾಸ್ಯ , ಸಂಯುಕ್ತಾರನ್ನು ಕುರಿತು ಜೈ ಶ್ರೀನಿವಾಸನ್ ಒಬ್ಬರು ಒಳ್ಳೆಯ ಮಿಮಿಕ್ರಿ ಆರ್ಟಿಸ್ಟ್ ಮತ್ತು ರಜನೀಕಾಂತ್ ಅವರ ಡೈಲಾಗ್ಗಳನ್ನು ಬಹಳ ಚೆನ್ನಾಗಿ ಮಿಮಿಕ್ರಿ ಮಾಡುತ್ತಾರೆ ಎಂದರು, ಇದು ಟಾಸ್ಕ್-ನ ಭಾಗ ಎಂದು ಅರಿಯದ ಜೈಶ್ರೀನಿವಾಸನ್ ರಜನೀಕಾಂತ್ ಅವರ ಡೈಲಾಗ್ಗಳನ್ನು ಹೇಳಿದರು.
ಜೈಶ್ರೀನಿವಾಸನ್ ರಜನೀಕಾಂತ್ ಅವರ ಡೈಲಾಗ್ಗಳನ್ನು ಹೇಳುತ್ತಿದಂತೆಯೇ ಬಿಗ್ಬಾಸ್, ಕೊಲೆಗಾರರು ತಮ್ಮ ಕೆಲಸ ಮುಗಿಸಿದ್ದಾರೆ, ಅವರ ಎರಡು ಭೇಟೆಗಳನ್ನು ಮುಗಿಸಿದ್ದನ್ನೇ ಎಂದು ಲಾಸ್ಯ ಹಾಗು ಜೈಶ್ರೀನಿವಾಸನ್ ಅವರ ಹೆಸರು ಹೇಳಿದಾಗ ಮನೆಯ ಸದಸ್ಯರಿಗೆ ಕೊಲೆಗಾರ ಯಾರು ಎಂಬ ಕುತೂಹಲ ಹಾಗು ಗೊಂದಲ ಮೂಡಿತು.