ಬಿಗ್ ಬ್ರೇಕಿಂಗ್; ಮೈತ್ರಿ ಸರ್ಕಾರದ ಶಾಸಕ ಆನಂದ್ ಸಿಂಗ್ ರಾಜಿನಾಮೆ, ಇನ್ನೂ ಹಲವು ಶಾಸಕರು ಕಾಂಗ್ರೆಸ್ ತೊರೆಯುವ ಸುಳಿವು..

0
274

ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ಮೊದಲಿನಿಂದ ರಾಜೀನಾಮೆ ಅಲೆ ಎಬ್ಬಿಸಿದರು, ಅದರಂತೆ ಈಗ ಹೊಸಪೇಟೆ ಕಾಂಗ್ರೆಸ್ ಶಾಸಕ ಆನಂದ್​ ಸಿಂಗ್​ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮತ್ತೆ ರಾಜ್ಯ ರಾಜಕೀಯ ದಿಢೀರ್ ಬೆಳವಣಿಗೆಗೆ ಕಾರಣರಾಗಿದ್ದಾರೆ. ಈ ಕುರಿತು ಶಾಸಕ ಸ್ಥಾನಕ್ಕೆ ತಾವು ರಾಜಿನಾಮೆ ನೀಡಿರುವ ವಿಷಯವನ್ನು ಖುದ್ದು ಆನಂದ್ ಸಿಂಗ್ ಅವರೇ ಖಚಿತಪಡಿಸಿದ್ದು. ಜಿಂದಾಲ್ ಕಂಪೆನಿಗೆ ಭೂಮಿ ಪರಬಾರೆ ಮಾಡಿದ ಪ್ರಕರಣವನ್ನು ಮುಂದಿಟ್ಟುಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆನಂದ್‍ಸಿಂಗ್ ಬ್ಲಾಕ್‍ಮೇಲ್ ತಂತ್ರವನ್ನು ಅನುಸರಿಸಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.

Also read: ವಾಹನ ಸವಾರರಿಗೆ ಎಚ್ಚರ ಇನ್ಮುಂದೆ ಚಿಕ್ಕ ತಪ್ಪಿಗೂ ಬೀಳುತ್ತೆ ಸಾವಿರಾರು ರೂ. ದಂಡ; ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ದಂಡ??

ಹೌದು ಮೊದಲಿಂದ ಬಿಜೆಪಿ ತೆಕ್ಕೆಗೆ ಸುಲಭವಾಗಿ ಸೇರುವ ಸುಳಿವು ನೀಡಿದ್ದ ಆನಂದ ಸಿಂಗ್, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಬಿಜೆಪಿ ತೆಕ್ಕೆಗೆ ಹಾರುವುದು ಬಹುತೇಕ ಖಚಿತವಾಗಿತ್ತು. ಆದರೆ, ಇದನ್ನು ತಪ್ಪಿಸಿದ್ದ ಕಾಂಗ್ರೆಸ್​ ನಾಯಕರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಒಂದು ವರ್ಷದ ಮೈತ್ರಿ ಆಳ್ವಿಕೆಯೂ ನಡೆಸಿದ್ದರು. ಆದರೆ, ಇದೀಗ ಆನಂದ್ ಸಿಂಗ್ ಕೈಕೊಟ್ಟಿದ್ದು ಮತ್ತೆ ಕಾಂಗ್ರೆಸ್​ಗೆ ಶಾಕ್ ನೀಡಿದ್ದಾರೆ. ಈ ಮೂಲಕ ಆಪರೇಷನ್​ ಕಮಲಕ್ಕಾಗಿ ಕಾದು ಕುಳಿತಿದ್ದ ಬಿಜೆಪಿ ನಾಯಕರು ಸರಿಯಾದ ಸಮಯವನ್ನು ಹುಡುಕಿ ಸದ್ದಿಲ್ಲದಂತೆ ಕಾಂಗ್ರೆಸ್​ ನಾಯಕರಿಗೆ ಗಾಳ ಹಾಕಿದ್ದಾರೆ ಎಂಬ ಮಾತುಗಳು ಸಹ ಈ ಸಂದರ್ಭದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸುದ್ದಿಗೋಷ್ಠಿ ಕರೆದಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ರಾಜಭವನದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಸ್ಪೀಕರ್ ಅವರಿಗೆ ರಾಜೀನಾಮೆಯನ್ನು ನೀಡಿದ್ದು, ಬೇಕಾದರೆ ಮತ್ತೊಮ್ಮೆ ರಾಜೀನಾಮೆ ನೀಡುತ್ತೇನೆ ಎಂದರು. ಈ ವೇಳೆ ತಮ್ಮ ನಿರ್ಧಾರದ ಕಾರಣವನ್ನು ತಿಳಿಸಲು ಇಚ್ಛಿಸದ ಅವರು, ನಾನು ಸದ್ಯ ರಾಜ್ಯಪಾಲರ ಭೇಟಿಗೆ ಆಗಮಿಸಿದ್ದೇನೆ. ಅವರ ಭೇಟಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ. ಅದೇರೀತಿ ಇನ್ನೂ ಹಲವು ಅಸಮಾಧಾನ ನಾಯಕರು ಕಾಂಗ್ರೆಸ್ ತೊರೆಯಿವುದು ಖಚಿತ ಎನ್ನಲಾಗಿದೆ.

ರಾಜೀನಾಮೆಗೆ ಕಾರಣ?

Also read: ಇನ್ಮುಂದೆ ನಿಮ್ಮ ವಾಹನಕ್ಕೆ PRESS, POLICE, ARMY, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಝ್ ಪಕ್ಕಾ; ಯಾಕೆ ಅಂತ ಈ ಮಾಹಿತಿ ನೋಡಿ..

ಜಿಂದಾಲ್​ ಭೂ ಪರಭಾರೆ ಮಾಡುತ್ತಿರುವ ವಿರುದ್ಧ ಮೈತ್ರಿ ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಆನಂದ್​ ಸಿಂಗ್​ ಕೂಡ ಒಂದು ತಿಂಗಳಿನಿಂದ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೇ ಕಾರಣಕ್ಕಾಗಿ ಅವರು ಇಂದು ತಮ್ಮ ಶಾಸಕ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ, ಇದರ ನಡುವೆ ಆನಂದ್​ ಸಿಂಗ್​ ರಾಜೀನಾಮೆಗೆ ಆಸಲಿ ಸತ್ಯವೇ ಬೇರೆ ಎನ್ನಲಾಗುತ್ತಿದೆ. ಆದರೆ ಈಗಲ್ಟರ್ನ್​​ ರೆಸಾರ್ಟ್​ನಲ್ಲಿ ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್​ ಅವರನ್ನು ಪಕ್ಷ ಅಮಾನತು ಮಾಡಿತ್ತು. ಆದರೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗಣೇಶ್​ ಬೆಂಬಲಿಗರಿಂದ ಬಂದ ಒತ್ತಡದಿಂದಾಗಿ ಈ ಅಮಾನತನ್ನು ವಾಪಸ್ಸು ಪಡೆದಿದ್ದ ಕಾಂಗ್ರೆಸ್​ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಇದು ಸಾಮಾನ್ಯವಾಗಿ ಶಾಸಕ ಆನಂದ್​ ಸಿಂಗ್​ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.