ಹಕ್ಕಿ ಜ್ವರ ಎಲ್ಲ ಕಡೆ ಹರುಡುತ್ತಿದೆ; ಕೋಳಿ ಮಾಂಸ ಮತ್ತು ಮೊಟ್ಟೆ ತಿನ್ನುವವರೇ ಈ ಕ್ರಮಗಳನ್ನು ಪಾಲಿಸದಿದ್ದರೆ ನಿಮ್ಮ ಆರೋಗ್ಯ ಹಾನಿಯಾಗುತ್ತದೆ..

0
2632

ಸಿಲಿಕಾನ್ ಸಿಟಿಯಲ್ಲಿ ಹಕ್ಕಿಜ್ವರ ತಲೆ ದೂರಿದೆ. ಇದು ಉದ್ಯಾನನಗರಿಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊರಭಾಗದ ಕೋಳಿ ಫಾರಂ ಹಾಗೂ ಅಂಗಡಿಗಳನ್ನು ಬಂದ್ ಮಾಡಲಾಗಿದೆ.

ಹಕ್ಕಿ ಜ್ವರದ ಭೀತಿ ಕೋಳಿ ಮತ್ತು ಮೊಟ್ಟೆ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಸದ್ಯಕ್ಕೆ ಜನ ಕೋಳಿ ಮತ್ತು ಮೊಟ್ಟೆಯನ್ನು ಖರೀದಿಸಲು ಕೊಂಚ ಯೋಚಿಸ್ತಿದಾರೆ. ಹಕ್ಕಿಜ್ವರ ಕಾಣಿಸಿಕೊಂಡ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಜನರು ಯಾವುದೇ ಭಯವಿಲ್ಲದೆ ಕೋಳಿ ಮತ್ತು ಮೊಟ್ಟೆಗಳನ್ನು ತಿನ್ನಬಹುದು ಎಂದು ಕರ್ನಾಟಕ ಕುಕ್ಕುಟ ಮಹಾಮಂಡಳಿ ತಿಳಿಸಿದೆ.

ಅಲ್ಲದೇ ಕೋಳಿ ಮತ್ತು ಮೊಟ್ಟೆಯನ್ನು ಶೇ.70 ರಷ್ಟು ಸೆಲ್ಸಿಯಸ್‌ನ ಉಷ್ಣಾಂಶದಲ್ಲಿ ಬೇಯಸಿ ತಿನ್ನಬಹುದು. ದೇಶದಲ್ಲಿ ಇದುವರೆಗೂ ಹಕ್ಕಿ ಜ್ವರದಿಂದ ಮನುಷ್ಯರು ಸತ್ತ ಉದಾಹರಣೆಗಳಿಲ್ಲ ಎಂದು ಹೇಳಿದೆ.  ಇನ್ನು ಹಕ್ಕಿಜ್ವರ ಲಕ್ಷಣ ಕಂಡು ಬಂದ ಕಡೆ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಮತ್ತು ಮೊಟ್ಟೆ ಮಾರಾಟಕ್ಕೆ ನಿರ್ಬಂಧಿಸಲಾಗಿದೆ. ಕೋಳಿ ಸಾಗಣೆದಾರರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷ ಕೋಳಿಗಳು ಹಾಗೂ ಸುಮಾರು 80 ಲಕ್ಷದಷ್ಟು ಮೊಟ್ಟೆಗಳು ಮಾರಾಟವಾಗುತ್ತಿದ್ದು, ಅದರಲ್ಲಿ ಬೆಂಗಳೂರಲ್ಲೇ 3 ಲಕ್ಷ ಕೋಳಿ ಮತ್ತು 30 ಲಕ್ಷದಷ್ಟು ಮೊಟ್ಟೆ ಮಾರಾಟವಾಗುತ್ತಿವೆ. ಹೀಗಾಗಿ ನಗರದ ಜನ ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನು ತಮಿಳುನಾಡಿನಿಂದ ಸರಬರಾಜಾದ ನಾಟಿ ಕೋಳಿಗಳಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಳಿ ಫಾರಂಗಳು ಹೆಚ್ಚಾಗಿರುವ ಹೆಸರಘಟ್ಟ, ದಾಸರಹಳ್ಳಿ, ತಾವರೆಕೆರೆ ಸೇರಿದಂತೆ ವಿವಿಧ ಕಡೆ ಬಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೆ ದಾಸರಹಳ್ಳಿ, ಬಾಣಸವಾಡಿ, ಯಲಹಂಕ ಸೇರಿದಂತೆ ಹಲವು ಭಾಗಗಳಲ್ಲಿ 50 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಕೋಳಿ ಮತ್ತು ಮೊಟ್ಟೆ ಮಾರಾಟ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ರೋಗ ಪತ್ತೆಗಾಗಿ ಕೋಳಿ ಮಾದರಿಯನ್ನು ಭೋಪಾಲ್‌ಗೆ ಕಳುಹಿಸಲಾಗಿದ್ದ ವರದಿಯಲ್ಲಿ ಪಾಸಿಟಿವ್ ಅಂಶಗಳು ಕಂಡು ಬಂದಿವೆ. ಈ ಹಿನ್ನೆಲೆ ಕೇಂದ್ರೀಯ ಪಶು ಸಂಗೋಪನೆ ಇಲಾಖೆ ರಾಜ್ಯಕ್ಕೆ ಇಬ್ಬರು ತಜ್ಞರನ್ನು ಕಳುಹಿಸಿ ಕೊಟ್ಟಿದೆ.