ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಮೋದಿಯಿಂದ ಅಲ್ಲ, ಓರ್ವ ಅನಾಮಿಕ ‘ಚಾಣಕ್ಯ’ !

0
608

ಬಿಜೆಪಿಯ ಈ ಗೆಲುವಿಗೆ ಮೋದಿನೇ ಕಾರಣ. ಅಮಿತ್ ಷಾ ಪ್ಲಾನ್​ಗಳೇ ಕಾರಣ ಅಂತ ಮಾತಾಡಿಕೊಳ್ತಿದ್ದಾರೆ. ಆದರೆ ಇಲ್ಲೇ ಇರೋದು ನೋಡಿ ಕಹಾನಿಮೆ ಟ್ವಿಸ್ಟ್. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು  ಮೋದಿಯಿಂದ ಅಲ್ಲ. ಯುಪಿನಲ್ಲಿ ಮೋದಿ ಅಲೆ ಇದ್ದಿರಬಹುದು. ಆದರೆ ಗೆಲುವಿನ ರುವಾರಿ ಬೇರೇನೇ ಇದ್ದಾರೆ. ಇಡೀ ದೇಶದಲ್ಲಿ ಕಮಲ ಅರಳಿಸಿದ್ದ ಚಾಣಕ್ಯನೇ ಯುಪಿ ಭವಿಷ್ಯ ಬುಡಮೇಲು ಮಾಡಿದ್ರು ಅನ್ನೋದು ನಿಜವಲ್ಲ. ಯಾಕಂದರೆ ಈ ಚುನಾವಣೆಯಲ್ಲಿ ಮೋದಿ ಬರೀ ಫೇಸ್​ ಆಗಿದ್ರು. ಅಮಿತ್ ಶಾ ಸಂಘಟಕರಾಗಿ ಕೆಲಸ ಮಾಡಿದ್ದರು. ಆದರೆ ಯುಪಿಯಲ್ಲಿ ಬಿಜೆಪಿಯನ್ನು ಗೆಲ್ಲಿಸೋದಕ್ಕೆ ಪ್ಲಾನ್ ರೂಪಿಸಿದ್ದು ಓರ್ವ ಅನಾಮಿಕ ವ್ಯಕ್ತಿ.

ಉತ್ತರಾಖಂಡ್‍ನಲ್ಲಿ ಬಿಜೆಪಿಯ ರೋಚಕ ಗೆಲುವಿನ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಭಾಲ್ ಅವರ ಕಾರ್ಯತಂತ್ರ ಕೆಲಸ ಮಾಡಿದೆ, ದೋಭಾಲ್ ಕಾರ್ಯತಂತ್ರದೊಂದಿಗೆ ಅವರ ಪುತ್ರ ಪುತ್ರ ಶೌರ್ಯ ಅವರ ಜಾಣ ನಡೆ, ಸಮಾನ ಶ್ರೇಣಿ- ಸಮಾನ ಪಿಂಚಣಿ ಮತ್ತು ನಿರ್ದಿಷ್ಟ ದಾಳಿ ಮೊದಲಾದ ನಿರ್ಧಾರಗಳು ಬಿಜೆಪಿಗೆ ಗೆಲುವು ತಂದುಕೊಡಲು ಸಹಕರಿಸಿವೆ.

 

ಆ ಅನಾಮಿಕ ವ್ಯಕ್ತಿ ಯಾರು ಗೊತ್ತಾ ?

 

ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಭರ್ಜರಿಯಾಗಿ ಗೆಲ್ಲಿಸಿದ ರಣಧೀರ. ಬಿಜೆಪಿ ಉತ್ತರ ಪ್ರದೇಶದಲ್ಲಿ ಈ ಮಟ್ಟದಲ್ಲಿ ಗೆಲುವು ಸಾಧಿಸಿದ್ದು, ಅಖಿಲೇಶ್​ ಯಾದವ್​ ಮತ್ತು ರಾಹುಲ್ ಗಾಂಧಿ ಒಟ್ಟಾಗಿ ಮಾಡಿದ್ದ ಪ್ಲಾನ್​ಗಳನ್ನು ಉಲ್ಟಾ ಮಾಡಿದ್ದು, ಚುನಾವಣೆಯ ಫಲಿತಾಂಶವನ್ನೇ ಬುಡಮೇಲು ಮಾಡಿದ್ದು ಇದೇ ಮಾಸ್ಟರ್​ ಮೈಂಡ್​. ಅಂದ್ಹಾಗೆ ಈತನ ಹೆಸರು ಏನು ಗೊತ್ತಾ ? ಸುನೀಲ್ ​ ಬನ್ಸಾಲ್ ​.

 

ಉತ್ತರ ಪ್ರದೇಶದಲ್ಲಿ ಕಮಲ ಅರಳಿಸುವ ಬಹುದೊಡ್ಡ  ಜವಾಬ್ದಾರಿಯನ್ನು ಸುನೀಲ್​ ಬನ್ಸಾಲ್​ಗೆ ನೀಡಲಾಗಿತ್ತು. ಅದೂ 2 ವರೆ ವರ್ಷಗಳ ಹಿಂದೆ. ಆಗಿಂದಲೇ ಪ್ಲಾನ್​ ಮಾಡಿದ್ದ ಸುನೀಲ್​ ಬನ್ಸಾಲ್​ ದೀರ್ಘಾವಧಿಯ ಪ್ಲಾನ್​ ರೂಪಿಸ್ತಾರೆ. ಆ ಪ್ಲಾನ್​ ಹೇಗಿತ್ತು ಅಂದ್ರೆ, ಯಾವುದೇ ಕಾರಣಕ್ಕೂ ಮಿಷನ್​ 250 ಮಿಸ್ಸಾಗಬಾರದು ಅಂತ ನಿರ್ಧರಿಸಿದ್ರು. ಆದ್ರೆ ಸುನೀಲ್​ ಬನ್ಸಾಲ್​ ಮಾಡಿದ್ದ ಪ್ಲಾನ್​ಗೆ, ಬರೀ 250 ಸೀಟ್​ ಅಲ್ಲ.. 300ಕ್ಕೂ ಹೆಚ್ಚು ಸೀಟ್​ಗಳನ್ನ ಬಾಚಿಕೊಂಡಿದೆ ಬಿಜೆಪಿ. ಇಷ್ಟೋಂದು ಭರ್ಜರಿ ಗೆಲುವನ್ನು ತಂದುಕೊಟ್ಟು, ಎದುರಾಳಿಗಳನ್ನು ಧೂಳೀಪಟ ಮಾಡಿದ್ದು ಮೋದಿ ಅಲ್ಲ.. ಅಮಿತ್ ಶಾನೂ ಅಲ್ಲ.. ಇದೇ ಸನೀಲ್​ ಬನ್ಸಾಲ್​..

 

ಉತ್ತರ ಪ್ರದೇಶದಲ್ಲಿ ಮುಸ್ಲೀಮರ ಓಟುಗಳೂ ಪ್ರಮುಖ ಪಾತ್ರವಹಿಸುತ್ತವೆ. ಹಿಂದುಳಿದ ವರ್ಗಗಳ ಮತಗಳು, ಚನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡುತ್ತವೆ. ಅದರಲ್ಲೂ ಮೋದಿ ಮಾಡಿದ್ದ ನೋಟ್​ ಬ್ಯಾನ್​ ಎಫೆಕ್ಟ್​ನಿಂದ, ಉತ್ತರ ಪ್ರದೇಶದಲ್ಲಿ ಮೋದಿಗೆ ಹಿನ್ನಡೆ ಅಗಬಹುದು ಅಂತ ಕೆಲವರು ಲೆಕ್ಕಾಚಾರ ಹಾಕಿದ್ರು. ಆದ್ರೆ ಅವರ ಲೆಕ್ಕಾಚಾರವೆಲ್ಲಾ ಬುಡಮೇಲಾಗಿತ್ತು. ಇಡೀ ದೇಶವೇ ಊಹಿಸಲಾಗದ ಗೆಲುವು ಬಿಜೆಪಿಗೆ ದಕ್ಕಿತ್ತು. ಆ ಗೆಲುವಿನ ಹಿಂದಿರೋ ನಿಜವಾದ ವ್ಯಕ್ತಿ ಸುನೀಲ್​ ಬನ್ಸಾಲ್​..

 

ಕಳೆದ ಲೋಕಸಭಾ ಚುನಾವಣೆ ಟೈಮಲ್ಲಿ, ಮೋದಿ ಹಿಂದೆ ಅಮಿತ್ ಷಾ ಅನ್ನೋ ಚಾಣಕ್ಯನಿದ್ದ. ಆ ಚಾಣಕ್ಯನ ಟೀಂ ಲೀಡರ್ ಆಗಿದ್ದು, ಪ್ರಶಾಂತ್​ ಕಿಶೋರ್​ ಅಂತ.. ಆದ್ರೆ ಆ ಪ್ರಶಾಂತ್​ ಕಿಶೋರ್​ ಈಗ ಮೋದಿ ಜೊತೆಗಿಲ್ಲ.. ಹೀಗಿರುವಾಗ ಬಿಜೆಪಿಯನ್ನು ಯುಪಿನಲ್ಲಿ ಹೇಗಪ್ಪಾ ಗೆಲ್ಲಿಸೋದು ಅನ್ನೋ ಆಲೋಚನೆ ಶುರುವಾಗಿತ್ತು. ಆಗ ಕಾಣಿಸಿದ್ದೇ ಸುನೀಲ್​ ಬನ್ಸಾಲ್​..

ಪ್ರಶಾಂತ್ ಕಿಶೋರ್​ ಬಿಹಾರಕ್ಕೆ ಕಾಲಿಟ್ಟಿದ್ದೇ ತಡ, ನಿತೀಶ್’​ ಕುಮಾರ್​ ಮತ್ತು ಲಾಲೂ ಪ್ರಸಾದ್​ ಯಾದವ್​​ಗೆ ಬಲ ಬಂದಂತಾಗಿತ್ತು. ಕಳೆದ ಬಿಹಾರ ಚುನಾವಣೆಯಲ್ಲಿ ಬಿಜೆಪಿಯನ್ನು ನೆಲಕ್ಕುರುಳಿಸಿ, ನಿತೀಶ್​​ಗೆ ಗೆಲುವು ತಂದು ಕೊಟ್ಟಿದ್ರು ಪ್ರಶಾಂತ್​​.

ಸುನೀಲ್​ ಬನ್ಸಾಲ್​ ಒಬ್ಬ ಬರಹಗಾರ. ಅದ್ಭುತ ಸ್ಕ್ರಿಪ್ಟ್​ ರೈಟರ್​. ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ. ರಾಜಸ್ಥಾನ ಮೂಲದ ಸುನೀಲ್​ ಬನ್ಸಾಲ್ ಎಬಿವಿಪಿಯಲ್ಲಿ ಗುರ್ತಿಸಿಕೊಂಡಿದ್ದರು. ಆರ್​ಎಸ್​​ಎಸ್​ನಲ್ಲೂ ಸಕ್ರಿಯರಾಗಿದ್ರು. ನಂಥರ ಬಿಜೆಪಿಗೆ ಬಂದ್ರು. ಇವ್ರ ಬರಹಗಳು, ಮತ್ತು ಎಬಿವಿಪಿನಲ್ಲಿ ಮಾಡಿದ ಹೋರಾಟಗಳನ್ನು ಕಂಡ ಮೋದಿ ಮತ್ತು ಅಮಿತ್ ಶಾ, ​ ಉತ್ತರ ಪ್ರದೇಶದಲ್ಲಿ ಕಮಲ ಅರಳಿಸುವ ಜವಾಬ್ದಾರಿಯನ್ನು ಸುನೀಲ್​ ಬನ್ಸಾಲ್​ಗೆ ನೀಡಿದ್ರು. ಅದೂ 2014 ರಲ್ಲಿ.. ಆಗಿಂದಲೇ ಪ್ಲಾನ್​ ಮಾಡಿದ್ದ ಸುನೀಲ್​ ಬನ್ಸಾಲ್​ ದೀರ್ಘಾವಧಿಯ ಬ್ಲೂಪ್ರಿಂಟ್​​ ರೆಡಿ ಮಾಡಿದ್ರು. ಆ ಬ್ಲೂಪ್ರಿಂಟ್​​​ ಹೇಗಿತ್ತು ಅಂದ್ರೆ, ಉತ್ತರ ಪ್ರದೇಶದಲ್ಲಿ ಮಿಷನ್​250 ಟಾರ್ಗೆಟ್ ಆಗಿತ್ತು. ಆದ್ರೆ ಸುನೀಲ್​ ಬನ್ಸಾಲ್​ ತಂತ್ರಗಾರಿಕೆ ಎಷ್ಟು ಪರಿಣಾಮಕಾರಿಯಾಗಿತ್ತು ಅಂದ್ರೆ, ಬರೀ 250 ಸೀಟ್​ ಅಲ್ಲ.. 300ಕ್ಕೂ ಹೆಚ್ಚು ಸೀಟ್​ಗಳನ್ನ ಬಾಚಿಕೊಂಡಿದೆ ಬಿಜೆಪಿ.