ಕೊರೊನಾ ನಿಯಂತ್ರಣಕ್ಕೆ ದೇಶವನ್ನೇ ಬಂದ್ ಮಾಡಿದ ಮೋದಿ ಸರ್ಕಾರ; ನಿಯಮವನ್ನು ಗಾಳಿಯಲ್ಲಿ ತೂರಿ ಮಜಾ ಮಸ್ತಿ ಮಾಡುತ್ತಿರುವ ಬಿಜೆಪಿ ನಾಯಕರು.!

0
225

ಕೊರೊನಾ ನಿಯಂತ್ರಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಿಡುವಿಲ್ಲದೆ ದೇಶಕ್ಕಾಗಿ ಹಲವು ಕ್ರಮಗಳನ್ನ ತಂದು ಜನರನ್ನು ಕಾಪಾಡುತ್ತಿದೆ. ಆದರೆ ಕೆಲವು ಬಿಜೆಪಿ ಸರ್ಕಾರದ ಕೆಲವು ಶಾಸಕರು ಮತ್ತು ನಾಯಕರುಗಳು ನಿಯಮವನ್ನು ಗಾಳಿಗೆ ತೂರಿ ಕೊರೊನಾ ಹರಡುವಂತೆ ಮಾಡುತ್ತಿರುವುದು ಭಾರಿ ವಿರೋದ್ಧಕ್ಕೆ ಕಾರಣವಾಗುತ್ತಿವೆ . ಇದಕ್ಕೆ ಸಾಕ್ಷಿಯಾಗಿ ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ತಮ್ಮ ಹುಟ್ಟುಹಬ್ಬಕ್ಕೆ ನೂರಾರು ಜನರನ್ನು ಸೇರಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು,ಕೇಸ್ ದಾಖಲಾಗಿದೆ. ಅದರಂತೆ ಬಿಜೆಪಿ ಮಹಿಳಾ ವಿಭಾಗದ ಅಧ್ಯಕ್ಷೆ ನಿನ್ನೆ ರಾತ್ರಿ ದೀಪ ಹಚ್ಚುವ ಬದಲು ಗಾಳಿಯಲ್ಲಿ ಗುಂಡು ಹಾರಿಸಿರುವುದು ಕೂಡ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಹೌದು ಮಹಾರಾಷ್ಟ್ರದ ವಾರ್ದಾ ಕ್ಷೇತ್ರದ ಬಿಜೆಪಿ ಶಾಸಕ ದಾದಾರಾವ್ ಕೆಚೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಿನ್ನೆ ಅಂದರೆ ಭಾನುವಾರ ಸುಮಾರು ನೂರಕ್ಕೂ ಹೆಚ್ಚು ಮಂದಿ ಆರ್ವಿಯಲ್ಲಿರುವ ದಾದರಾವ್ ಅವರ ನಿವಾಸದಲ್ಲಿ ನೆರೆದಿದ್ದರು. ಅಲ್ಲದೆ, ಹುಟ್ಟುಹಬ್ಬದ ಪ್ರಯುಕ್ತ ಜನರಿಗೆ ದವಸ ಧಾನ್ಯ ನೀಡುತ್ತಾರೆ ಎಂದು ತಿಳಿದ ಜನರು ಭಾರಿ ಸಂಖ್ಯೆಯಲ್ಲಿ ಇವರ ನಿವಾಸದ ಕಡೆ ಧಾವಿಸಿದ್ದರು. ಆದರೆ, ಅಲ್ಲಿ ಯಾವುದೇ ದವಸ ಧಾನ್ಯ ನೀಡುತ್ತಿರಲಿಲ್ಲ ಎನ್ನಲಾಗಿದೆ. ಈ ಸಂಬಂಧ ವಿಷಯ ತಿಳಿದ ಪೊಲೀಸರು ನಿವಾಸಕ್ಕೆ ಆಗಮಿಸಿ ನೆರೆದಿದ್ದ ಜನರನ್ನು ಚದುರಿಸಿದ್ದಾರೆ. ಈ ವೇಳೆ ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಹುಟ್ಟುಹಬ್ಬ ಕಾರ್ಯಕ್ರಮ ಮುಂದುವರೆಸಿದ್ದರು. ಹೀಗಾಗಿ ಶಾಸಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ವಿಚಾರ ರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ಪ್ರಚಾರವಾಗಿ ಬಿಜೆಪಿ ಶಾಸಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ‘ಚೀನಾ ವೈರಸ್ ಗೋ ಬ್ಯಾಕ್’ ಎಂದು ಕೂಗುತ್ತಾ, ಬೆಂಬಲಿಗರ ಜೊತೆ ಸೇರಿ ದೊಂದಿ ಹಚ್ಚಿಸಿಕೊಂಡು ರಸ್ತೆಯಲ್ಲಿ ಸಾಗಿದ್ದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅದರ ಬೆನ್ನಲ್ಲೇ ಉತ್ತರ ಪ್ರದೇಶದ ಬಿಜೆಪಿ ಮಹಿಳಾ ವಿಭಾಗದ ಅಧ್ಯಕ್ಷೆ ಮಂಜು ತಿವಾರಿ ನಿನ್ನೆ ಆತ್ರಿ ದೀಪದ ಬದಲು ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಈಗ ವೈರಲ್ ಆಗಿದೆ. ರಿವಾಲ್ವರ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದರೆ ಕೊರೋನಾ ವೈರಸ್ ಓಡಿಹೋಗುತ್ತದೆ ಎಂದು ಬಿಜೆಪಿ ನಾಯಕಿ ಗುಂಡು ಹಾರಿಸಿರುವ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ. ನಿನ್ನೆ ರಾತ್ರಿ ದೇಶಾದ್ಯಂತ ಜನರು 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ಲೈಟ್ ಆಫ್ ಮಾಡಿ, ದೀಪ ಅಥವಾ ಟಾರ್ಚ್ ಬೆಳಕನ್ನು ಹತ್ತಿಸಬೇಕೆಂದು ಪ್ರಧಾನಿ ಮೋದಿ ಮನವಿ ಮಾಡಿದ್ದರು. ಅದರಂತೆ ನಿನ್ನೆ ರಾತ್ರಿ ದೀಪಾಂದೋಲನ ಮಾಡಲಾಗಿತ್ತು.

ಆದರೆ, ಉತ್ತರ ಪ್ರದೇಶದ ಬಿಜೆಪಿ ನಾಯಕಿ ಮಂಜು ತಿವಾರಿ ದೀಪದ ಬದಲು ರಿವಾಲ್ವರ್ನಿಂದ ಗುಂಡು ಹಾರಿಸಿರುವ ವಿಡಿಯೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ರೀತಿ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಸಂಭ್ರಮಾಚರಣೆ ಮಾಡುವುದು ಕಾನೂನುಬಾಹಿರ. ಹೀಗಾಗಿ, ಬಿಜೆಪಿ ನಾಯಕಿಯ ಈ ವರ್ತನೆಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ.

Also read: KAS ಕೊರೊನಾ ರೋಗಿಗಳಿಗಾಗಿ ಮೈಸೂರಿನಲ್ಲಿ ಸಿದ್ದವಾಗಿದೆ, ರೈಲ್ವೆ ಬೋಗಿಗಳ ಐಸೋಲೇಷನ್ ವಾರ್ಡ್; ವಿಶೇಷತೆ ಏನು.?