ತೇಜಸ್ವಿಗೆ ಡಿಕೆಶಿ ಚಾಟಿ; ಬಡವರು ಕಸ ಗುಡಿಸ್ತಾರೆ, ಪಂಕ್ಚರ್​ ಹಾಕ್ತಾರೆ ನೀವು ಶಿಕ್ಷಣ, ಉದ್ಯೋಗ ನೀಡಿದ್ದರೆ ಯಾಕೆ ಅಂತ ಕೆಲಸ ಮಾಡ್ತಾರೆ.!

0
245

ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ ಅನಕ್ಷರಸ್ಥರು, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತಹವರು ಯಾರೂ ಸೇರಿಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಯುವ ಸಂಸದ ತೇಜಸ್ವಿ ಸೂರ್ಯ ಭಾರಿ ಟೀಕೆಗೆ ಗುರಿಯಾಗಿದ್ದರು, ಇಂದು ಇದೇ ವಿಷಯಕ್ಕೆ ಮಾಜಿ ಸಚಿವ ಡಿ.ಕೆ. ಶಿವಮಾರ್ ತಿರುಗೇಟು ನೀಡಿದ್ದು, ತೇಜಸ್ವಿ ಸೂರ್ಯಗೆ ದಲಿತರು, ಬಡವರ ಬಗ್ಗೆ ಕಾಳಜಿ ಇಲ್ಲ ಇವರೇ ಸರಿಯಾಗಿ ಶಿಕ್ಷಣ ನೀಡಿ, ಉದ್ಯೋಗ ನೀಡಿದ್ದರೆ ಅವರು ಯಾಕೆ ಪಂಕ್ಚರ್​ ಹಾಕ್ತಾರೆ? ಬಡವರಾದರಿಂದ ಪಂಚರ್ ಹಾಕ್ತಾನೆ, ಕಸ ಗುಡಿಸ್ತಾನೆ ಎಂದು ಹೇಳಿದ್ದಾರೆ.

ಬಡವ ಪಂಚರ್ ಹಾಕ್ತಾನೆ, ಕಸ ಗುಡಿಸ್ತಾನೆ;

ಹೌದು ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಅವರು, ಇಲ್ಲಿ ಯಾರೂ ಯಾರನ್ನೂ ಕರೆದಿಲ್ಲ. ಎಲ್ಲರೂ ಸ್ವಇಚ್ಛೆಯಿಂದ ಬಂದಿದ್ದಾರೆ. ಪೌರತ್ವಕ್ಕೆ ಬೆಂಬಲ ಇದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕಾಂಗ್ರೆಸ್ ಟೀಕೆ ಮಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ. ಈ ಜಾಗೃತಿ ಸಭೆಗೆ ಸೇರಿದವರೆಲ್ಲರೂ ಐಟಿ ಕಂಪನಿಗಳ ಉದ್ಯೋಗಿಗಳು, ವೈದ್ಯರು, ವಕೀಲರು, ಆಟೋ ಚಾಲಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ದೇಶದ ಆರ್ಥಿಕತೆಗೆ ತಮ್ಮದೇಯಾದ ಕೊಡುಗೆ ನೀಡುತ್ತಿರುವ ವಿದ್ಯಾವಂತರು. ನಮ್ಮ ಪ್ರತಿಭಟನೆಯಲ್ಲಿ ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ ಅನಕ್ಷರಸ್ಥರು, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತಹವರು ಯಾರೂ ಸೇರಿಲ್ಲ ಎಂದು ಹೇಳಿದ್ದರು.

ಹಗುರವಾಗಿ ಮಾತನಾಡಿದ ಸಂಸದ ತೇಜಸ್ವಿ ವಿರುದ್ಧ ಕಾಂಗ್ರೆಸ್ ನಾಯಕ ಡಿಕೆಶಿ ಮಾತನಾಡಿ ತೇಜಸ್ವಿ ಸೂರ್ಯಗೆ ದಲಿತರು, ಬಡವರ ಬಗ್ಗೆ ಕಾಳಜಿ ಇಲ್ಲ, ಬಡವ ಪಂಚರ್ ಹಾಕುತ್ತಿದ್ದಾನೆ, ಕಸ ಗುಡಿಸುತ್ತಿದ್ದಾನೆ, ಕ್ಲೀನಿಂಗ್ ಮಾಡುತ್ತಿದ್ದಾನೆ. ಆದರೆ ಕಳ್ಳತನ ಮಾಡಿಲ್ಲ, ದೇಶದ್ರೋಹ ಮಾಡಿಲ್ಲ. ನೀವು ಅವರಿಗೆ ವಿದ್ಯಾಭ್ಯಾಸ ಕೊಡಿ, ಕೆಲಸ ಕೊಡಿ. ಯಾವುದೇ ಕಾರಣಕ್ಕೂ ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ. ಭಾಷಣ ಮಾಡುವವರು ಬಂದು ಕಸ ಕೂಡಿಸುವುದಿಲ್ಲ. ಪಂಚರ್ ಹಾಕುವವ ಇದ್ದರೇನೆ ಜನ ಸಾಮಾನ್ಯರು ಕೆಲಸ ಮಾಡಲು ಸಾಧ್ಯ. ಕಸ ಗೂಡಿಸುವವ, ಪಂಚರ್ ಹಾಕುವವ ನಿರುದ್ಯೋಗಿಯಾಗದೆ ಕೆಲಸ ಮಾಡುತ್ತಿದ್ದಾರೆ.

ಮಾನವೀಯ ಕೆಲಸ ಮಾಡುವವರು ಇಲ್ಲದಿದ್ದರೆ ಜನರು ಬದುಕಲು ಸಾಧ್ಯವಿಲ್ಲ. ನೀವೂ ಅವರಿಗೆ ಶಿಕ್ಷಣ ನೀಡಲಿಲ್ಲ, ಸರಿಯಾದ ಉದ್ಯೋಗ ನೀಡಿಲ್ಲ ಇವತ್ತು ಸ್ವಚ್ಛ ಭಾರತವಾಗುತ್ತಿರುವುದು ಅವರಿಂದ ಎಂಬುದನ್ನು ಮರೆಯದಿರಿ, ರಾಜ್ಯದಲ್ಲಿ ಕೆಲವೆಡೆ ಲಾಠಿಚಾರ್ಜ್ ಆಗಿದೆ. ನೂರಾರು ಜನರ ಮೇಲೆ ಎಫ್​ಐಆರ್​​ ದಾಖಲಾಗಿದೆ. ಇದು ಪೊಲೀಸರು ತಪ್ಪು ಅಂತಾ ನಾ ಹೇಳಲ್ಲ. ಸರ್ಕಾರ ಹೇಳಿದ ಹಾಗೇ ಪೊಲೀಸರು ಕೇಳುತ್ತಾರೆ. ರಾಜ್ಯದ ಸಿಎಂ ಹಾಗೂ ಗೃಹ ಸಚಿವರ ವಿರುದ್ಧ ದೂರು ದಾಖಲಾಗಬೇಕು. ಜಾರ್ಖಂಡ್​​ನಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾರ್ಖಂಡ್​ನಲ್ಲಿ ಜನ ತೀರ್ಪು ತೋರಿಸಿದ್ದಾರೆ. ದೇಶದಲ್ಲಿ ಬದಲಾವಣೆಯಾಗುತ್ತಿದೆ. ಕೇಂದ್ರದ ಕಾನೂನು ದೇಶಕ್ಕೆ ಹೇಗೆ ಮಾರಕ ಜನರಿಗೆ ಗೊತ್ತಾಗಿದೆ. ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

Also read: ಹೊಸ ವರ್ಷದ ಸಂಭ್ರಮದಲ್ಲಿರುವ ಜನರಿಗೆ ಬಿಗ್ ಶಾಕ್; ದೈನಂದಿನ ಅಗತ್ಯದ ಆಹಾರ ಪದಾರ್ಥಗಳ ಬೆಲೆಯಲ್ಲಿ ಭಾರಿ ಏರಿಕೆ.!