ಕಾರ್ಪೊರೇಟ್‌ ಕಂಪನಿಗಳಿಂದ ಚುನಾವಣಾ ನಿಧಿ ಹೆಸರಿನಲ್ಲಿ ಹರಿದು ಬರುತ್ತಿರುವ ಹಣ ; ಹೆಚ್ಚು ದೇಣಿಗೆ ಪಡೆದ ಪಕ್ಷವಾಗಿ ಬಿಜೆಪಿ…

0
520

2017-18ನೇ ಹಣಕಾಸು ವರ್ಷದಲ್ಲಿ ಚುನಾವಣಾ ನಿಧಿಗಳಿಂದ ಹರಿದು ಬಂದ ದೇಣಿಯ ವಿವರಗಳ ವರದಿಯನ್ನು ಚುನಾ ವಣಾ ಕಣ್ಗಾವಲು ಸಂಸ್ಥೆ ‘ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌’ (ಎಡಿಆರ್‌) ನೀಡಿದೆ. ಕಳೆದ ಹಣಕಾಸು ವರ್ಷದಲ್ಲಿ ಚುನಾವಣಾ ಟ್ರಸ್ಟ್‌ಗಳಿಂದ ಹರಿದು ಬಂದ ಒಟ್ಟು ಹಣ 193 ಕೋಟಿ ದೇಣಿಗೆಯಲ್ಲಿ ಶೇ 87ರಷ್ಟು ಅಂದರೆ 167.80 ಕೋಟಿ ದೇಣಿಗೆ ಬಿಜೆಪಿ ಪಾಲಾಗಿದೆ. ಇದರಿಂದ ಕಾರ್ಪೊರೇಟ್‌ ಸಂಸ್ಥೆಗಳ ‘ಚುನಾವಣಾ ಟ್ರಸ್ಟ್‌’ಗಳಿಂದ ಅತಿ ಹೆಚ್ಚು ದೇಣಿಗೆ ಪಡೆದ ರಾಜಕೀಯ ಪಕ್ಷಗಳಲ್ಲಿ ಆಡಳಿತಾರೂಢ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಅದೇರೀತಿ ಒಡಿಶಾದ ನವೀನ್‌ ಪಟ್ನಾಯಿಕ್‌ ನೇತೃತ್ವದ ಬಿಜೆಡಿ ಎರಡನೇ ಸ್ಥಾನದಲ್ಲಿದ್ದು ಕಾಂಗ್ರೆಸ್‌ ಪಕ್ಷವನ್ನು ಹಿಂದಿಕ್ಕಿದೆ.

Also read: ನರೇಂದ್ರ ಮೋದಿಯವರ ಕಲರ್ ಕಲರ್ ಹೊಸ ನೋಟುಗಳ ಬಾಳಿಕೆ ಬರಿ ಎರಡು ವರ್ಷವಂತೆ; ಹೊಸ ನೋಟುಗಳ ಬಗ್ಗೆ ದೇಶದೆಲ್ಲೆಡೆ ಅನುಮಾನ…

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಮತ್ತು ಗುಜರಾತ್‌ ಕಾಂಗ್ರೆಸ್‌ ಘಟಕ ಗಳು ಪಕ್ಷಕ್ಕೆ 1ಕೋಟಿ ದೇಣಿಗೆ ನೀಡಿವೆ. ಕಳೆದ ಬಾರಿವು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಹರಿದು ಬಂದ ದೇಣಿಗೆಯಲ್ಲಿ ಶೇ.92ರಷ್ಟು ಹಣವನ್ನು ಖಾಸಗಿ ಸಂಸ್ಥೆಗಳೇ ನೀಡಿವೆ ಎಂದು ಮೂಲಗಳು ತಿಳಿಸಿದವು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಾರತಿ ಗ್ರೂಪ್ಸ್‌ನ ಸತ್ಯ ಎಲೆಕ್ಟೋರಲ್ ಟ್ರಸ್ಟ್, ಸ್ಟೆರ್ಲೈಟ್ ಇಂಡಸ್ಟ್ರೀಸ್ ಮತ್ತು ಕೈರ್ನ್ ಇಂಡಿಯಾ ಸೇರಿದಂತೆ ಅನೇಕ ಖಾಸಗಿ ಕಂಪನಿಗಳು ಹೆಚ್ಚಿನ ಮಟ್ಟದಲ್ಲಿ ಬಿಜೆಪಿಗೆ ದೇಣಿಗೆ ನೀಡಿದವು ಪ್ರಜಾಪ್ರಭುತ್ವ ಸುಧಾರಣೆ ಸಂಘ ನಡೆಸಿದ ಸಮೀಕ್ಷೆ ಪ್ರಕಾರ, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಖಾಸಗಿ ಕಂಪನಿಗಳಿಂದ ಬಿಜೆಪಿಗೆ ಸುಮಾರು ರು.157.84 ಕೋಟಿ ದೇಣಿಗೆ ಹರಿದು ಬಂದಿದೆ. 2013-2014ರಲ್ಲಿ ಬಿಜೆಪಿ ಚುನಾವಣೆ ಆಯೋಗ ನೀಡಿದ ಮಾಹಿತಿ ಪ್ರಕಾರ ಈ ಸಮೀಕ್ಷೆ ನಡೆಸಿ ಸುಮಾರು 772 ವೈಯಕ್ತಿಕ ದೇಣಿಗೆದಾರರು ಪ್ರತ್ಯೇಕವಾಗಿ ರು, 20,000 ಸಾವಿರಕ್ಕೂ ಹೆಚ್ಚು ಹಣವನ್ನು ನೀಡಿದ್ದು, ಒಟ್ಟು ರು.12.99 ಕೋಟಿ ಸಂಗ್ರಹವಾಗಿದೆ ಎಂದು ವರದಿಯಲ್ಲಿ ಹೇಳಿತ್ತು. 2014ರಲ್ಲಿ ಬಿಜೆಪಿಗೆ ಹರಿದು ಬಂದ ದೇಣಿಗೆಯಲ್ಲಿ ಶೇ.105ರಷ್ಟು ಏರಿಕೆ ಕಂಡಿದ್ದು, 2012-13ರಲ್ಲಿ 83.19 ಕೋಟಿ ಸಂಗ್ರಹವಾಗಿದ್ದು, 170.86 ಕೋಟಿ ದೇಣಿಗೆ ಹರಿದು ಬಂದಿತ್ತು ಅದೇ ರೀತಿಯಾಗಿ 2017-18 ರಲ್ಲಿ

ಏನಿದು ಚುನಾವಣಾ ನಿಧಿ?

Also read: ಖದೀಮರು ಈಗ ಕೇವಲ ಒಂದೇ ಒಂದು ಎಸ್.ಎಂ.ಎಸ್. ಮೂಲಕ ಬ್ಯಾಂಕ್-ನಿಂದ ಹಣ ದೋಚುತ್ತಿದ್ದಾರೆ, ತಪ್ಪದೇ ಓದಿ!!

ಚುನಾವಣಾ ನಿಧಿಗಳಿಗಾಗಿ ಕೇಂದ್ರ ಸರ್ಕಾರ 2013ರ ಜನವರಿಯಲ್ಲಿ ಪಾರ ದರ್ಶಕ ನಿಯಮಾವಳಿ ರೂಪಿಸಿದ್ದು, 2013ರ ನಂತರ ಅಸ್ತಿತ್ವಕ್ಕೆ ಬಂದ ಟ್ರಸ್ಟ್‌ಗಳಿಗೆ ಮಾತ್ರ ಈ ನಿಯಮಾವಳಿ ಅನ್ವಯಿಸಲಿದ್ದು. ಕಾರ್ಪೊರೇಟ್‌ ಸಂಸ್ಥೆಗಳು ನೇರವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವಂತಿಲ್ಲ. ಚುನಾವಣಾ ನಿಧಿ ಮೂಲಕ ದೇಣಿಗೆ ನೀಡಬಹುದು. ಇಂತಹ ಸಂಸ್ಥೆಗಳ ಚುನಾವಣಾ ನಿಧಿಗೆ ನೀಡಲಾಗುವ ದೇಣಿಗೆಗೆ ಸರ್ಕಾರ ತೆರಿಗೆ ವಿನಾಯ್ತಿ ಘೋಷಿಸಿದೆ.

22 ಚುನಾವಣಾ ನಿಧಿಗಳ ಪೈಕಿ ಕೇವಲ ಐದು ಮಾತ್ರ ಪಾರದರ್ಶಕತೆ ನಿಯಮಾವಳಿ ವ್ಯಾಪ್ತಿಗೆ ಒಳಪಡುತ್ತವೆ. 2013ಕ್ಕೂ ಮುನ್ನ ಸ್ಥಾಪಿಸಲಾದ ಆರು ಟ್ರಸ್ಟ್‌ಗಳು ಈ ನಿಯಮಾವಳಿ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ಈ ಟ್ರಸ್ಟ್‌ಗಳು ರಾಜಕೀಯ ಪಕ್ಷಗಳಿಗೆ ದೊಡ್ಡ ಮೊತ್ತದ ದೇಣಿಗೆ ನೀಡಿದರೂ ಅದರ ಮಾಹಿತಿಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಏಳು ರಾಜಕೀಯ ಪಕ್ಷಗಳಿಗೆ ಈ ಆರು ಟ್ರಸ್ಟ್‌ಗಳು 105 ಕೋಟಿ ಮತ್ತು ಮತ್ತೊಂದು ಟ್ರಸ್ಟ್‌ 131.65 ಕೋಟಿ ದೇಣಿಗೆ ನೀಡಿವೆ. ಈ ಟ್ರಸ್ಟ್‌ಗಳಿಗೆ ದೇಣಿಗೆ ನೀಡಿದ ದಾನಿಗಳ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ.

ಈ ಸಂಸ್ಥೆಗಳು ದೇಣಿಗೆ ನಿಡುವ ಉದೇಶ?

Also read: ನೀವು airtel, vodafone ಸಿಮ್ ಗ್ರಾಹಕರ? ಹಾಗಾದ್ರೆ ಕೆಲವೇ ದಿನಗಳಲ್ಲಿ ನಿಮ್ಮ ಸಿಮ್ ಬ್ಲಾಕ್ ಆಗುತ್ತೆ! ನಿಮ್ಮ ಸಿಮ್ ಬ್ಲಾಕ್ ಆಗಬಾರದು ಅಂದರೆ ಈ ಮಾಹಿತಿ ನೋಡಿ..

ತೆರಿಗೆ ವಿನಾಯ್ತಿ ಪಡೆಯಲು ಮತ್ತು ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣವನ್ನು ಸಕ್ರಮಗೊಳಿಸಲು ಟ್ರಸ್ಟ್‌ ನೆರವು ಪಡೆಯುವ ಗುಮಾನಿಯನ್ನು ಎಡಿಆರ್‌ ವ್ಯಕ್ತಪಡಿಸಿದೆ. ಚುನಾವಣಾ ನಿಧಿ ಸ್ಥಾಪಿಸುವ ಬಹುತೇಕ ಕಾರ್ಪೊರೇಟ್‌ ಸಂಸ್ಥೆಗಳು ನಿಧಿಗಳ ಹಿಂದೆ ಮೂಲ ಸಂಸ್ಥೆಯ ಹೆಸರು ನಮೂದಿಸಬೇಕು ಎಂದು ಎಡಿಆರ್‌ ಸಲಹೆ ಮಾಡಿದೆ.

ಹೆಚ್ಚು ದೇಣಿಗೆ ನೀಡಿದ ಕಂಪನಿಗಳು:

Also read: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಭಾರ್ತಿ ಏರ್‌ಟೆಲ್‌, ಡಿಎಲ್‌ಎಫ್‌ನಂತಹ ಹಲವು ಪ್ರತಿಷ್ಠಿತ ಕಾರ್ಪೊರೇಟ್‌ ಕಂಪನಿಗಳು ರಾಜಕೀಯ ಪಕ್ಷಗಳ ಬಹು ಮುಖ್ಯ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಕೇಂದ್ರಗಳು ಎನ್ನುವುದು ಬಹಿರಂಗವಾಗಿದೆ. ಹಲವು ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳು, ರಿಯಲ್‌ ಎಸ್ಟೇಟ್‌ ಮತ್ತು ಟೆಲಿಕಾಂ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ಅಪಾರ ಪ್ರಮಾಣದ ದೇಣಿಗೆ ನೀಡಿವೆ. ಮೂರು ಕಂಪನಿಗಳಿಂದ ಬಿಜೆಪಿಯು 167.80 ಕೋಟಿ ಹಣ ಸಂಗ್ರಹಿಸಿದೆ. ಎಂದು ತಿಳಿದು ಬಂದಿದೆ.