ಹಿಂದುಳಿದ ವರ್ಗಗಳ ಮತಗಳನ್ನು ತಮ್ಮತ್ತ ಸೆಳೆಯಲು ಇಂದು ಬಿಜೆಪಿಯ ಬೃಹತ್ ಸಮಾವೇಶ…!!

0
579

Kannada News | Karnataka News

ಮೂರು ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರಿಗೆ ಎಲ್ಲಿಲ್ಲದ ಸಂತೋಷ ಸಂಭ್ರಮ. ಇನ್ನು ಈ ಸಂಭ್ರಮವನ್ನು ಕರ್ನಾಟಕದಲ್ಲಿಯೂ ಅನುಭವಿಸಲು ಕಮಲ ಪಕ್ಷ ಪಣತೊಟ್ಟಂತೆ ಕಾಣುತ್ತಿದೆ. ಹಿಂದುಳಿದ ವರ್ಗಗಳ ಮತಗಳನ್ನು ತಮ್ಮತ್ತ ಸೆಳೆಯಲು ಇಂದು ರಾಜ್ಯ ಬಿಜೆಪಿ ನಾಯಕರುಗಳು ಬೃಹತ್ ಸಮಾವೇಶ ಮಾಡುತ್ತಿದ್ದಾರೆ.

ಹೌದು, ತ್ರಿಪುರ, ನಾಗಾಲ್ಯಾಂಡ್‌ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನ ನಂತರ ಬಿಜೆಪಿಯ ಎಲ್ಲ ನಾಯಕರುಗಳಿಗೆ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಕಣ್ಣು ಬಿದ್ದಿದೆ. ಅದಕ್ಕಾಗಿ ಅತ್ಯಂತ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಲು ಪಕ್ಷದ ಹೈಕಮಾಂಡ್ ಸುಹಿಸಿದೆ ಎನ್ನಲಾಗಿದೆ.

ಹಿಂದುಳಿದ ವರ್ಗಗಳ ಮತಗಳನ್ನು ತಮ್ಮತ್ತ ಸೆಳೆಯಲು ಇಂದು ಕೂಡಲ ಸಂಗಮ ಮತ್ತು ಹಾವೇರಿಯ ಕಾಗಿನೆಲೆಯಲ್ಲಿ
ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್‌ ಸಮಾವೇಶ ಮಾಡುತ್ತಿದ್ದಾರೆ. ಮಾರ್ಚ್ 10 ರಂದು ಕೂಡಲ ಸಂಗಮದಲ್ಲಿ, ಮಾರ್ಚ್ 25 ರಂದು ಕಾಗಿನೆಲೆಯಲ್ಲಿ ಮಾರ್ಚ್ 6 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆಯಂತೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಚಾಲನೆ ನೀಡಲಿರುವ ಈ ಬೃಹತ್ ಸಮಾವೇಶ ಉತ್ತರ ಕರ್ನಾಟಕದ ಬೀದರ್‌, ಕಲಬುರ್ಗಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಹಿಂದುಳಿದ ವರ್ಗದ ಮತದಾರರನ್ನು ಸೆಳೆಯುವ ಉದ್ದೇಶ ಹೊಂದಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಹಿಂದುಳಿದ ವರ್ಗದವರ, ದಲಿತರ ಪರವಾಗಿಲ್ಲ ಎಂಬ ಮಾತನ್ನು ಸುಳ್ಳು ಮಾಡಲು ಹೊರಟಿದ್ದಾರೆ ಕೇಸರಿ ಪಕ್ಷದ ನಾಯಕರುಗಳು, ಇದರಿಂದ ಫಲಿತಾಂಶ ದೊರಕಲಿದ್ಯಾ ಕಾಡು ನೋಡಬೇಕು.

Also Read: ಕರ್ನಾಟಕ ಹಾಗೂ ಕೇರಳದಲ್ಲಿ ಬಲಿಯಾದ ಕಾರ್ಯಕರ್ತರಿಗೆ ಈ ಜಯವನ್ನು ಸಮರ್ಪಿಸುತ್ತಿದ್ದೇವೆ: ಪ್ರಧಾನಿ ಮೋದಿ