ನೋಟು ನಿಷೇಧ ಎಫೆಕ್ಟ್: ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು

0
830

೫೦೦ ಮತ್ತು ೧೦೦೦ ನೋಟುಗಳನ್ನು ನಿಷೇಧಿಸಿದ ನಿರ್ಧಾರಕ್ಕೆ ಜನರ ಬೆಂಬಲ ಇದೆ ಎಂದು ಬೆನ್ನು ತಟ್ಟಿಕೊಳ್ಳುತದತಿದ್ದ ಬಿಜೆಪಿಗೆ ಎಪಿಎಂಸಿ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಿದ್ದಾರೆ.

ಮಹಾರಾಷ್ಟ್ರದ ಎಪಿಎಂಸಿ ಚುನಾವಣೆಯೆ ಎಲ್ಲಾ ೧೭ ಸ್ಥಾನಗಳನ್ನೂ ಬಿಜೆಪಿ ಕಳೆದುಕೊಂಡಿದೆ. ಇದು ಮುಂಬರುವ ಕರ್ನಾಟಕದ ಎಪಿಎಂಸಿ ಚುನಾವಣೆಯಲ್ಲೂ ಪ್ರತಿಧ್ವನಿಸುವುದೇ ಎಂಬ ಕುತೂಹಲ ಮೂಡಿದೆ.

ನೋಟು ನಿಷೇಧಿಸಿದ ಮೋದಿ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ ಮಿತ್ರಪಕ್ಷ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಪಕ್ಷವಾದ ಪಿಡಬ್ಲ್ಯೂಪಿ ಈ ಚುನಾವಣೆಯಲ್ಲಿ ಒಟ್ಟು ೧೫ ಸ್ಥಾನ ಗೆದ್ದಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್ ೨೫ ವರ್ಷಗಳ ನಂತರ ೧ ಸ್ಥಾನ ಗೆಲ್ಲುವ ಮೂಲಕ ಆಶಾಕಿರ ಮೂಡಿಸಿದೆ.

೫೦೦ ಮತ್ತು೧೦೦೦ ನೋಟುಗಳ ನಿಷೇಧದಿಂದ ಸಣ್ಣ ವ್ಯಾಪರಸ್ಥರು, ಬೀಡಿ ಕಾರ್ಮಿಕರು, ಬೀದಿಬದಿ ಅಥವಾ ಗೂಡಂಗಡಿ, ಪಿಂಚಣಿದಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೃಷಿಕರ ಸ್ಥಿತಿಯೂ ಶೋಚನೀಯವಾಗಿದ್ದು, ಇದು ಚುನಾವಣೆಯಲ್ಲಿ ಪ್ರಭಾವ ಬೀರಿದೆ ಎಂದು ಸ್ಥಳೀಯರು ಹೇಳಿದ್ದಾರೆ.