ನಿಮ್ಮ ಹತ್ತಿರ ತುಂಬಾ 500 ಅಥವಾ 1000 ರೂಪಾಯಿ ನೋಟ್ಸ್ ಇದ್ಯಾ, ಹಾಗಾದರೆ ತಪ್ಪದೇ ಇದನ್ನು ನೀವು ಓದಲೇ ಬೇಕು!!!

0
1977

ಐನೂರು, ಸಾವಿರ ರುಪಾಯಿ ನೋಟುಗಳನ್ನು ರದ್ದು ಮಾಡಿರುವ ನಿರ್ಧಾರ ಸೂಪರ್. ಇಂಥ ಸನ್ನಿವೇಶದಲ್ಲಿ ಕಪ್ಪು ಹಣ ಇರುವವರು ಏನು ಮಾಡಬೊಹುದು? ಈ ವಿಚಾರದಲ್ಲಿ ಜನ ಸಾಮಾನ್ಯರು ಸರಕಾರಕ್ಕೆ ಹೇಗೆ ನೆರವಾಗಬಹುದು ಎಂದು ತಿಳಿಸುವ ಪ್ರಯತ್ನವೇ ಇದು.

gold-021

ಚಿನ್ನ ಬೆಳ್ಳಿ ಖರೀದಿಸಬೊಹುದು . 1,99,000 ರುಪಾಯಿ ವರೆಗೆ ಚಿನ್ನ ಅಥವಾ ಬೆಳ್ಳಿ ಖರೀದಿಗೆ PAN ಬೇಕಾಗಿಲ್ಲ.ಅದನ್ನು ಖರೀದಿಸಿ, ಉದಾಹರಣೆಗೆ 1 ಗ್ರಾಂ ಚಿನ್ನಕೆ ಸ್ವಲ್ಪ ಹೆಚ್ಚಿನ ಮೊತ್ತ ನೀಡಿ, ನಿಮ್ಮಿಂದ ಅದನ್ನು ಖರೀದಿಸಬಹುದು. ಇಲ್ಲ ಹಣವನ್ನು ಸಾಲದ ರೂಪದಲ್ಲಿ ಪಡೆದಂತೆ ದಾಖಲೆ ಸೃಷ್ಟಿಸಿ ಚಿನ್ನ ಅದರ ಬದಲಿಗೆ ಪಡೆದಿರುವುದಾಗಿ ಹೇಳಬೋಹುದು.

1464748396

ನೀವು ಗಮನಿಸಿರಬಹುದು. ಕೆಲ ಹೋಟೆಲ್ ಗಳಲ್ಲಿ ಚಿಲ್ಲರೆ ಹಣ ನೀಡಿದರೆ ನಾವು ಶೇ 10ರಷ್ಟು ಕಮಿಷನ್ ಕೊಡ್ತೀವಿ ಅಂತ ಬೋರ್ಡ್ ಹಾಕಿರ್ತಾರೆ. ಅದೇ ರೀತಿ ನಿಮ್ಮ ಬಳಿಯಿರುವ ಹಣಕ್ಕೆ ಹೆಚ್ಚುವರಿ ಹಣ ನೀಡುವ ಆಮಿಷ ತೋರಿಸಿ, ತಮ್ಮ ಕಪ್ಪು ಹಣದ ಬಣ್ಣ ಬದಲಿಸಿಕೊಳ್ಳಲು ಯತ್ನಿಸಬಹುದು.

1464761795

ಇನ್ನು ದೊಡ್ಡ ಮೊತ್ತದ ಇನ್ಷೂರೆನ್ಸ್ ಹಣ, ನಿವೃತ್ತಿಯಾದ ನಂತರ ಬರುವ ದೊಡ್ಡ ಮೊತ್ತ, ಮನೆ ಮಾರಿದ ಹಣ ಬಂದಿದ್ದರೆ ಅಂಥವರನ್ನೇ ಹುಡುಕಿ ಅಥವಾ ಏಜೆಂಟರ ಮೂಲಕ ಗುರುತಿಸಿ, ಹೆಚ್ಚಿನ ಹಣದ ಆಸೆ ತೋರಿಸಿ ಕಪ್ಪು ಹಣದ ಬದಲಾವಣೆ ಮಾಡಿಕೊಳ್ಳುವ ಚಾಣಾಕ್ಷತನ ತೋರಿಸಬಹುದು.

download-10

ನಿಮಗೆ ಬಂದ ಇಂಥ ಹಣಕ್ಕೆ ಅಧಿಕೃತ ದಾಖಲೆ ಇರುತ್ತದೆ. ಅದನ್ನು ಖರೀದಿಸಿ, ಉದಾಹರಣೆಗೆ ಎನ್ ಎಸ್ ಸಿ ಸರ್ಟಿಫಿಕೇಟ್. ಸ್ವಲ್ಪ ಹೆಚ್ಚಿನ ಮೊತ್ತ ನೀಡಿ, ನಿಮ್ಮಿಂದ ಆ ಸರ್ಟಿಫಿಕೇಟ್ ಖರೀದಿಸಬಹುದು. ಇನ್ನು ನಿವೃತ್ತಿ ನಂತರ ಬಂದ ಹಣವನ್ನು ಸಾಲದ ರೂಪದಲ್ಲಿ ಪಡೆದಂತೆ ದಾಖಲೆ ಸೃಷ್ಟಿಸಬಹುದು.

moin-qureshi-story_647_093015014709

ನಿಮ್ಮ ಹತ್ತಿರ ಇರುವ ನೂರು ರುಪಾಯಿಗೆ ನೂರಿಪ್ಪತ್ತು ರುಪಾಯಿ ಕೊಡ್ತೀವಿ ಅಂದರೆ ನೀವೇನು ಮಾಡ್ತೀರಿ. ಈ ಸನ್ನಿವೇಶದಲ್ಲಿ ಅಂಥ ದಂಧೆ ಅರಂಭವಾಗುವ ಎಲ್ಲ ಸೂಚನೆ ಇದೆ. ಎರಡು ಲಕ್ಷ ರುಪಾಯಿ ಮೇಲ್ಪಟ್ಟ ವಹಿವಾಟಿನ ಮೇಲಷ್ಟೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತದೆ. 1,99,000 ರುಪಾಯಿ ವರೆಗೆ ಅಲ್ಲ. ಆದ್ದರಿಂದ ಹೆಚ್ಚಿನ ಹಣ ನೀಡಿ, ತಮ್ಮ ಕಪ್ಪು ಹಣವನ್ನು ಬದಲಿಸಿಕೊಳ್ಳುವ ಅವಕಾಶ ಇದೆ

download-11

ಇನ್ನು ಕೆಲವು ಆದಾಯಗಳಿಗೆ ಭಾರತದಲ್ಲಿ ತೆರಿಗೆ ಇಲ್ಲ. ಮತ್ತು ಒಂದು ರಾಜ್ಯದ ಜನರಿಗೆ ತೆರಿಗೆ ಹಾಕುವುದಿಲ್ಲ. ಆ ರೀತಿ ಅದಾಯಕ್ಕೆ ತೆರಿಗೆ ಇಲ್ಲದ ಮೂಲವನ್ನೇ ಹುಡುಕಿ, ತಮ್ಮ ಹಣವನ್ನು ಬದಲಿಸಿಕೊಳ್ಳುವ ದಾರಿ ಹುಡುಕಿಕೊಳ್ಳಬಹುದು. ಕೇಂದ್ರ ಸರಕಾರ ಈಗ ಚಾಪೆ ಹಾಸಿ, ಕಪ್ಪು ಹಣದವರನ್ನು ಬಲಿ ಹಾಕಲು ಯತ್ನಿಸುತ್ತಿದೆ. ಆದರೆ ಅಂಥವರು ರಂಗೋಲಿ ಕೆಳಗೆ ತೂರಬಹುದು ಅಲ್ಲವೆ?

ಆದ್ದರಿಂದ ಇಂಥ ಘನವಾದ ಉದ್ದೇಶ ಇಟ್ಟುಕೊಂಡು ಮಾಡಿರುವ ಕೆಲಸ ಹುಸಿ ಹೋಗುವುದು ಬೇಡ. ಸಣ್ಣ-ಪುಟ್ಟ ಆಮಿಷಗಳಿಗೆ ಬಲಿಯಾಗಬೇಡಿ. ಅಂಥವರು ಕಂಡುಬಂದರೆ  ದೂರು ನೀಡಿ.