Kannada News | Health tips in kannada
ಕತ್ತಿನ ಹಿಂದೆ ಕಪ್ಪು ಕಲೆಗಳು ಅಂದ್ರೆ ಕತ್ತಿನ ಸೌಂದರ್ಯವನ್ನು ಹಾಳು ಮಾಡುತ್ತವೆ. ಕತ್ತಿನ ಹಿಂದೆ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇನ್ಸುಲಿನ್ ರೆಸಿಸ್ಟೆನ್ಸ್, ಚರ್ಮದ ಬಗ್ಗೆ ಸೂಕ್ತ ಕಾಳಜಿ ವಹಿಸದೇ ಇರುವುದು, ಸಕ್ಕರೆ ಖಾಯಿಲೆ, ತೂಕದಲ್ಲಿನ ಏರಿಳಿತ ಹಾಗು ಅನಿಯಮಿತ ಆಹಾರ ಪದ್ಧತಿ , ವ್ಯಾಯಾಮ ಮಾಡದೆ ಇರುವುದು ಹೀಗೆ ಹಲವಾರು ಕಾರಣಗಳಿಂದ ಕತ್ತಿನ ಹಿಂದೆ ಕಪ್ಪಾದ ಕಲೆಗಳು ಆವರಿಸಿಕೊಳ್ಳುತ್ತವೆ, ಇದು ನಿಮ್ಮ ತ್ವಚೆಯ ಸೌಂದರ್ಯ ಮತ್ತು ನಿಮ್ಮ ವಿಶ್ವಾಸವನ್ನು ಕುಂಠಿತಗೊಳಿಸಬಹುದು ಕೂಡ.
ಇಂತಹ ಕಲೆಗಳಿಗೆ ಮಾರುಕಟ್ಟೆಗಳಲ್ಲಿ, ಮೆಡಿಕಲ್ಗಳಲ್ಲಿ ಇಂತಹ ಸಮಸ್ಯೆಗಳಿಗೆ ಹಲವಾರು ಔಷಧಗಳು ಲಭ್ಯ ಇವೆಯಾದರೂ ಅವುಗಳು ದುಬಾರಿ ಹಾಗೂ ರಾಸಾಯನಿಕಯುಕ್ತವಾಗಿರುತ್ತವೆ. ಇದನ್ನು ಅವಾಯ್ಡ್ ಮಾಡಲು, ನೀವು ಮನೆಯಲ್ಲಿಯೇ ಪರಿಹರಿಸಿಕೊಳ್ಳಬಹುದು. ಕಾಫಿ ಪುಡಿ ನಿಮ್ಮ ಸಮಸ್ಯೆಗೆ ಮದ್ದಾಗಬಲ್ಲದು.
Also read: ಬೆವರಿನ ದುರ್ಗಂಧ ಕಡಿಮೆ ಮಾಡಲು ಇಲ್ಲಿವೆ ನೋಡಿ ಮನೆಮದ್ದುಗಳು
ಕಾಫಿ ಪುಡಿ 2 ಚಮಚ
ನಿಂಬೆರಸದಲ್ಲಿ 1 ಚಮಚ
ರೋಜ್ ವಾಟರ್ 1 ಚಮಚ
ಮೊದಲಿಗೆ ಒಂದು ಬಟ್ಟಲಿನಲ್ಲಿ ಕಾಫಿ ಪುಡಿ, ಸ್ವಲ್ಪ ನಿಂಬೆರಸ ಮತ್ತು ರೋಜ್ ವಾಟರ್ ಅನ್ನು ಹಾಕಿ ಚೆನ್ನಾಗಿ ಬೆರಸಿ ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ನಿಂಬೆಹಣ್ಣಿನ ಸಿಪ್ಪೆಯಿಂದ ಮಿಶ್ರಣವನ್ನು ತೆಗೆದುಕೊಂಡು ಕತ್ತು, ಮೊಣಕೈ, ಮೊಣಕಾಲು ಹೀಗೆ ಎಲ್ಲೆಲ್ಲಿ ಟಾನ್ ಇರುತ್ತದೆಯೋ ಆ ಭಾಗಗಳಲ್ಲಿ ಸವರುತ್ತಿರಬೇಕು. ಹೀಗೆ 5-10 ನಿಮಿಷಗಳ ಕಾಲ ಮಸಾಜ್ ಮಾಡಿ 10 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ತೊಳೆಯಬೇಕು.
ಮುಖ ಹಾಗೂ ಕತ್ತಿನ ಭಾಗದಲ್ಲಿ ಆಗುವ ಕಪ್ಪು ಕಲೆಗಳಾದ ಜಾಗದಲ್ಲಿ ಹಸಿ ಪಪ್ಪಾಯಿ ಹಣ್ಣಿನ ತಿರುಳನ್ನು ಲೇಪಿಸಿಕೊಂಡು ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆಯುವುದರಿಂದ…ಸ್ವೇಧ ರಂಧ್ರಗಳನ್ನು ಸ್ವಚ್ಚಗೊಳಿಸಿ, ಆ ಭಾಗದಲ್ಲಿ ಏರ್ಪಟ್ಟಿರುವ ಕಪ್ಪು ಕಲೆಗಳು ಮಾಯವಾಗುತ್ತವೆ ಎಂದು ಅರೋಗ್ಯ ತಜ್ಞರು ತಿಳಿಸಿದ್ದಾರೆ. ಅಷ್ಟೇ ಅಲ್ಲ ನಿಂಬೆ ರಸ, ಮುಲ್ತಾನಿ ಮಿಟ್ಟಿ, ಅಲೋ ವೆರಾ ಜೆಲ್, ಟೊಮೇಟೊ ರಸ ಈ ರೀತಿಯಾದಂತಹ ಮನೆಮದ್ದುಗಳನ್ನ ಉಪಯೋಗಿಸಿ ಕಲೆಯಿಂದ ಮುಕ್ತಿ ಹೊಂದಿ.
Also read: ತುಕ ಕಳೆದುಕೊಳ್ಳಲು ಸಹಕಾರಿ ಹೀರೆಕಾಯಿ