ಶ್ರೀಲಂಕಾದ ಬಾಂಬ್ ಸ್ಫೋಟದಲ್ಲಿ ಮೃತರ ಸಂಖ್ಯೆಯಲ್ಲಿ ಬಾರಿ ಏರಿಕೆ; ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲ..

0
413

ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆ ಯಾಗುತ್ತಿದ್ದು ಇಡಿ ಪ್ರಪಂಚವನ್ನೇ ಬೆರಗಾಗುವಂತೆ ಮಾಡಿದೆ. ಈ ದುರ್ಘಟನೆಯಲ್ಲಿ ಸುಮಾರು 175 ಮಂದಿ ಮೃತಪಟ್ಟಿದ್ದು 450ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ. ಇನ್ನೂ ನೂರಾರು ಜನರ ಸ್ಥಿತಿ ಚಿಂತಾಜನಕವಾಗಿದ್ದು. ಬಾಂಬ್ ದಾಳಿ ನಡೆಯುವ 10 ದಿನದ ಮೊದಲೇ ಅಲ್ಲಿನ ಪೊಲೀಸ್ ಇಲಾಖೆಗೆ ಸುಳಿವು ಸಿಕ್ಕಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

Also read: ಶ್ರೀಲಂಕಾದಲ್ಲಿ ಚರ್ಚ್​, ಹೋಟೆಲ್​ಗಳಲ್ಲಿ ಸರಣಿ ಬಾಂಬ್​ ಸ್ಫೋಟ; 65 ಸಾವು 300 ಕ್ಕೂ ಹೆಚ್ಚು ಮಂದಿಗೆ ಗಾಯ, ಭಾರತೀಯರನ್ನು ಗುರಿಯಾಗಿಸಿಕೊಂಡು ದಾಳಿಯ ಶಂಕೆ..

ಹತ್ತು ದಿನದ ಮೊದಲೇ ಸುಳಿವು?

ಹೌದು ಶ್ರೀಲಂಕಾ ಪೊಲೀಸ್ ಮುಖ್ಯಸ್ಥರು ದೇಶದ ವಿವಿಧೆಡೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದರು. ವಿದೇಶಿ ಗುಪ್ತಚರ ಇಲಾಖೆಯೊಂದು ಶ್ರೀಲಂಕಾದಲ್ಲಿ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಸಂಘಟನೆ ಸ್ಫೋಟ ನಡೆಸಲು ಸಿದ್ಧತೆ ನಡೆಸಿದೆ. ಅಲ್ಲದೇ ಚರ್ಚ್‍ಗಳು ಹಾಗೂ ಭಾರತದ ಧೂತವಾಸ ಕಚೇರಿಯೇ ಉಗ್ರರ ಗುರಿ” ಎನ್ನುವ ಮಾಹಿತಿಯನ್ನು ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಪುನೀತ್ ಜಯಸುಂದರ ಅವರು ಏ.11 ರಂದು ಎಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಹಂಚಿಕೊಂಡು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು ಎಂಬುದಾಗಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ. ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲವಾಗಿದೆ.

Also read: ಲಿಬಿಯಾದಲ್ಲಿರುವ ಭಾರತೀಯರಿಗೆ ಸುಷ್ಮಾ ಸ್ಮರಾಜ್ ಕರೆ; ಅಲ್ಲಿಂದ ಕೂಡಲೇ ಹೊರಟು ಬನ್ನಿ, ಅವರ ಕುಟುಂಬದವರು ಅವರನ್ನು ಕರೆಸಿಕೊಳ್ಳಿ..

ಒಟ್ಟು ಆರು ಕಡೆ ಬಾಂಬ್ ದಾಳಿ ನಡೆದಿದ್ದು ದಶಕಗಳಲ್ಲಿ ಶ್ರೀಲಂಕಾ ಕಂಡ ಅತಿ ಭಯಾನಕ ಉಗ್ರ ದಾಳಿ ಇದಾಗಿದೆ.

ಬಟ್ಟಿಕೊಲಾ ಚರ್ಚ್​​ ಸೇರಿ ಮೂರು ಚರ್ಚ್​ಗಳಲ್ಲಿ ಬಾಂಬ್​ ಸ್ಫೋಟ ಸಂಭವಿಸಿದೆ. ಎರಡು ಪಂಚತಾರಾ ಹೋಟೆಲ್​ಗಳಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ಈಗಾಗಲೇ ವರದಿಯಾಗಿದೆ. ಇನ್ನು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೇ ಈ ಸರಣಿ ಸ್ಫೋಟದ ಹಿಂದೆ ಯಾವ ಉಗ್ರ ಸಂಘಟನೆ ಕೈವಾಡವಿದೆ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ. ಆತ್ಮಾಹುತಿ ದಾಳಿ ಕೋರರು ಈ ದಾಳಿ ನಡೆಸಿದ್ದಾರೆ. ಎನ್ನುವ ಅನುಮಾನ ಮೂಡಿದೆ.

ಭಾರತೀಯರ ನೆರವಿಗೆ ಸಹಾಯವಾಣಿ: ಭಾರತೀಯ ಪ್ರಜೆಗಳಿಗೆ ಸಹಾಯವಾಣಿ ಕೇಂದ್ರ

ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನರ್​ ಸಹಾಯವಾಣಿ ನಂಬರ್​ ಅನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ. ದುರಂತದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಪ್ರಜೆಗಳು, ಘಟನೆ ಸಂಬಂಧ ಮಾಹಿತಿ ಬೇಕಿದ್ದರೆ ಈ ಸಂಖ್ಯೆಗೆ ಕರೆ ಮಾಡಿ, ಸಹಾಯ ಪಡೆಯಬಹುದಾಗಿದೆ. ಸಹಾಯವಾಣಿ ಸಂಖ್ಯೆ; +94777903082 +94112422788 +94112422789 ಇದರ ಜೊತೆಗೆ ಹೆಚ್ಚುವರಿ ನಂಬರ್​ಗಳನ್ನು ನೀಡಲಾಗಿದ್ದು, ಈ ಸಂಖ್ಯೆಗೂ ಭಾರತೀಯ ಪ್ರಜೆಗಳು ಕರೆ ಮಾಡಬಹುದಾಗಿದೆ. +94777902082 +94772234176
ಬಾಂಬ್​ ಸ್ಫೋಟದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದ ಸುಷ್ಮಾ ಸ್ವರಾಜ್​; ಭಾರತೀಯ ಪ್ರಜೆಗಳ ನೆರವಿಗೆ ಸಹಾಯವಾಣಿ ತೆರೆಯಲಾಗಿದೆ.

ದುರಂತದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಪ್ರಜೆಗಳು, ಘಟನೆ ಸಂಬಂಧ ಮಾಹಿತಿ ಬೇಕಿದ್ದರೆ ಕರೆ ಮಾಡಿ, ತಿಳಿಸಲಾಗಿದೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ. ನಾನು ಕೊಲಂಬೋದಲ್ಲಿರುವ ಭಾರತದ ಹೈ ಕಮಿಷನರ್ ಅವರನ್ನು ಸಂಪರ್ಕಿಸಿದ್ದೇನೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಎಂದು ತಿಳಿಸಿದ್ದಾರೆ. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ವಿಕ್ರಮಸಿಂಘೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. “ಈ ದಿನ ಹೇಯ ದಾಳಿಗೆ ಬಲಿಯಾದ ಜನರಿಗೆ ಸಂತಾಪ ಸೂಚಿಸುತ್ತೇನೆ. ಶ್ರೀಲಂಕಾದ ದುರಂತ ಸಮಯದಲ್ಲಿ ನಾವೆಲ್ಲರು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಇಂತಹ ಸಮಯದಲ್ಲಿ ಗಾಳಿ ಸುದ್ದಿ ಹಾಗೂ ಅನಧಿಕೃತ ಸುದ್ದಿಗಳನ್ನು ದಯವಿಟ್ಟು ಹಬ್ಬಿಸಬೇಡಿ. ಪರಿಸ್ಥಿತಿ ಸಂಬಂಧ ಸರ್ಕಾರ ತುರ್ತು ಕ್ರಮ ತೆಗೆದುಕೊಂಡಿದೆ,” ಎಂದು ಟ್ವೀಟ್ ಮಾಡಿದ್ದಾರೆ.