ಹಲವಾರು ಜನರಿಗೆ ರಕ್ತದಾನದ ಬಗ್ಗೆ ತಪ್ಪುಕಲ್ಪನೆಗಳು ಇರುತ್ತವೆ, ಈ ಮಾಹಿತಿ ರಕ್ತದಾನದ ಬಗ್ಗೆ ಸತ್ಯವಾದ ಮಾಹಿತಿ ನೀಡುತ್ತೆ..

0
1361
Blood-Donation-Myths-Busted

ರಕ್ತದ ಬಗೆಗಿರುವ ಕೆಲವು ಮೂಢನಂಬಿಕೆಗಳು

ದೇಹದಿಂದ ರಕ್ತ ಹೊರಬಂದರೆ ಕೆಡುಕು, ಅಪಶುಕನ, ಅಶುಭ. ದೇಹಕ್ಕೆ ಗಾಯ ವಾಸಿಯಾದರೆ ರಕ್ತ ಬರುವುದು ಸಹಜ, ಸ್ವಾಭಾವಿಕ. ಇದು ಎಲ್ಲರಿಗೂ ಆಗುತ್ತದೆ. ಇದು ಯಾವುದೇ ಶಕುನದ ಲಕ್ಷಣವಲ್ಲ. ರಕ್ತದಾನ ಮಾಡಿದರೆ ನಿಶ್ಶಕ್ತಿಯಾಗಿ ಸಾಯುತ್ತಾರೆ.

ಮೂಲ: www.topnutritiontips.com

ನಾವು ರಕ್ತದಾನ ಮಾಡಲಿ, ಬಿಡಲಿ ಪ್ರತಿದಿನವೂ ರಕ್ತಕಣ ನಶಿಸಿ, ಹೊಸ ಕಣ ಹುಟ್ಟುತ್ತಲೇ ಇರುತ್ತದೆ. ಕೊಟ್ಟ ರಕ್ತ 2-3 ದಿನಗಳೊಳಗೆ ಪುನಃ ಉತ್ಪತ್ತಿಯಾಗುವ ಕಾರಣ ರಕ್ತದಾನದಿಂದ ನಿಶ್ಶಕ್ತಿಯಾಗದು. ಇತರರ ರಕ್ತ ಪಡೆದರೆ ಅವರ ಗುಣ ವ್ಯಕ್ತಿತ್ವ ನಮಗೆ ಬಂದುಬಿಡುತ್ತದೆ. ಅವರ ಕಾಯಿಲೆ ನಮಗೆ ಅಂಟುತ್ತದೆ. ಇತರರಿಂದ ರಕ್ತ ಪಡೆದರೆ ಅವರ ಜೀವ ಕಣ ಬರುತ್ತದೆಯೇ ಹೊರತು ಅವರ ಬುದ್ಧಿ, ಗುಣ, ವ್ಯಕ್ತಿತ್ವ ಬರುವುದಿಲ್ಲ. ನಮ್ಮ ಗುಣ ಬದಲಾಗುವುದೂ ಇಲ್ಲ. ದಾನಿಗಳ ಆರೋಗ್ಯ ಪರೀಕ್ಷಿಸಿದ ನಂತರವೇ ರಕ್ತ ಪಡೆಯಲಾಗುತ್ತದೆ. ದಾನಕ್ಕೆ ಅನರ್ಹವಾದರೆ ರಕ್ತ ತಿರಸ್ಕರಿಸಲಾಗುತ್ತದೆ. ಪಶು-ಪಕ್ಷಿ-ಪ್ರಾಣಿಗಳ ರಕ್ತ ಸೇವಿಸಿದರೆ ನಮ್ಮ ರಕ್ತ ಹೆಚ್ಚುತ್ತದೆ. ನಮ್ಮ ರಕ್ತವನ್ನು ನಮ್ಮ ದೇಹವೇ ಉತ್ಪಾದಿಸಬೇಕು. ಇತರ ಪ್ರಾಣಿಗಳದ್ದು ಮಾನವನಿಗೆ ಹೊಂದುವುದಿಲ್ಲ. ಅದರಿಂದ ಯಾವುದೇ ಪ್ರಯೋಜನವಿಲ್ಲ.

ದೇಹದಲ್ಲಿ ಒಳ್ಳೆಯ ರಕ್ತ, ಕೆಟ್ಟ ರಕ್ತ ಎಂದು 2 ವಿಧ ಇರುತ್ತದೆ. ಇದು ಸುಳ್ಳು. ಒಳ್ಳೆಯ ರಕ್ತದಲ್ಲಿ ಆಮ್ಲಜನಕ ಮಿಶ್ರಿತ ಕೆಂಪು ಬಣ್ಣದ್ದಾಗಿದ್ದು, ಹೃದಯದಿಂದ ಅಂಗಾಂಗಗಳಿಗೆ ತಲುಪುತ್ತದೆ. ಮತ್ತೊಂದು ಹೃದಯದಿಂದ ಶ್ವಾಸಕೋಶಕ್ಕೆ ತಲುಪುವ ಕಾರ್ಬನ್ ಡೈ ಆಕ್ಸೈಡ್ ಮಿಶ್ರಿತ ನೀಲಿ ಬಣ್ಣ ಮಿಶ್ರಿತ ರಕ್ತ. ಇದು ಅಂಗಾಂಗದಿಂದ ಹೃದಯ-ನಂತರ ಶ್ವಾಸಕೋಶಕ್ಕೆ ತಲುಪುತ್ತದೆ. ಇದು ಕೆಟ್ಟ ರಕ್ತ ಅಲ್ಲ. ಆದ್ದರಿಂದ ರಕ್ತದ ಕುರಿತು ಮೂಢನಂಬಿಕೆಗಳನ್ನು ದೂರಮಾಡಬೇಕು.