ಔಷಧೀಯ ಆಗರ ನೀಲಿಗಿಡ

0
683

ನೀಲಿ ಗಿಡವು ನಮ್ಮ ದೇಶದಲ್ಲಿ ಹೇರಳವಾಗಿ ಬೆಳೆಯುತ್ತದೆ, ಇದರಲ್ಲಿ ಬಣ್ಣ ನೀಲಿ, ವಜ್ರ ನೀಲಿ, ಮಹಾ ನೀಲಿ ಮೂರು ಪ್ರಭೇಧಗಳಿವೆ, ಇದಕ್ಕೆ ಸಂಸ್ಕೃತದಲ್ಲಿ ನೀಲಿ, ನೀಲೀನಿ, ಹಿಂದಿ-ನೀಲೀ ಮರಾಠಿ-ಗುಳಿ, ಗುಳಿ, ಗುಳಿ ನೀಲೀ, ಗುಜರಾತಿ –ಗಲಿ, ತೆಲುಗು ನೀಲೀ ಚೆಟ್ಟು, ಇಂಗ್ಲೀಷ್- ಕಾಮನ ಇಂಡಿಗೊ, ಲ್ಯಾಟಿನ್- ಇಂಡಿಗೊಗೊ ಫೇರಾ ಎಂದಿದೆ.

ಇದರ ಬೇರಿನ ಉಪಯೋಗವು ಔಷಧಿ ಕರ್ಮದಲ್ಲಿ ಆಗುತ್ತದೆ. ಉಷ್ಣ ಗುಣವಾಗಿದ್ದು ರುಚಿಯಲ್ಲಿ ಕಹಿ ಆಗಿದ್ದು ಮೃದು ವಿರೇಚಕವಾಗಿದೆ. ಕಫನಿಸ್ಸಾರಕ, ಜ್ವರ ನಾಶಕ, ಉನ್ಮಾದ ನಾಶಕವಾಗಿದೆ. ಅರ್ಬುದ ಅಥವಾ ಗ್ರಂಥಿ ರೋಗ, ಯಕೃತ ವೃದ್ಧಿ. ಮೂತ್ರ ಮಾರ್ಗದಲ್ಲಿ, ಸರ್ಪದಂಶ, ಹುಚ್ಚು ನಾಯಿ ಕಚ್ಚಿದಕ್ಕೆ ಪ್ರಯೋಜಕವಾಗಿದೆ. ಯಕೃತ ಮತ್ತು ಪ್ಲೀಹಾವೃದ್ಧಿ ಮತ್ತು ಒಳ್ಳೆಯದಾಗಿ ಮೂತ್ರದ ಪ್ರಮಾಣದಲ್ಲಿ ವೃದ್ಧಿ ಆಗಿ(ಶೋಫವು) ಬಾವು ಕಡಿಮೆ ಆಗುತ್ತದೆ.

ಹುಚ್ಚುನಾಯಿ ಕಡಿತಕ್ಕೆ ಈ ವನಸ್ಪತಿ ಭಾರತದಲ್ಲಿ ಪ್ರಸಿದ್ಧವಾಗಿದೆ. ಅದರ ಹೆಸರು (Dog Bit Trees ) ಎಂದು ಇದೆ. ಎಲೆಗಳ ರಸವನ್ನು ಮತ್ತು ಬೇರನ್ನು ತೇದು ಸೇವಿಸಬೇಕು. ಈ ನೀಲಿ ಗಿಡಗಳನ್ನು ಕ್ಷೇತ್ರಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಸುವರು. ಇದರ ಕಾಯಿಯು ಡೊಂಕಾಗಿ ದುಂಡು ದುಂಡಾಗಿರುತ್ತವೆ. ಇದರ ಕಡ್ಡಿ ಮತ್ತು ಎಲೆಗಳನ್ನು ಕಟ್ಟು ಕಟ್ಟಿ ನೀಲಿ ತೊಟ್ಟಿಯ ನೀರಿನಲ್ಲಿ ನೆನೆ ಹಾಕಿ ನೀಲಿಯನ್ನೂ ಮಾಡುವರು. ಅದು ಬಣ್ಣದ ಕೆಲಸದಲ್ಲಿ ಒದಗುತ್ತದೆ. ಇದರ ಭೇದವಾದ ಮಹಾನೀಲಿಯ ಗಿಡವಿದೆ. ಇದಕ್ಕೆ ಸಂಸ್ಕೃತದಲ್ಲಿ – ಮಹಾನಿಲಿ, ಹಿಂದಿ –ಬಡಾ ನೀಲಿ, ಮರಾಠಿ ಥೊರ ನೀಲಿ, ಲ್ಯಾಟಿನ್- ಇಂಡಿಗೋಕೊರಾ ಟಂಕಟೂರಿಯಾ ಎಂದಿದೆ. ಇದರ ಗುಣವು ಗುಣಾಢ್ಯವಾದದ್ದು, ವೀರ್ಯಜನಕವಾದ್ದು, ನೀಲಿ ಗಿಡಕ್ಕಿಂತ ಇದು ಎಲ್ಲಾ ಭಾಗದಲ್ಲಿಯೂ ಗುಣಕಾರಿಯಾದದ್ದು. ವಜ್ರನೀಲೀ ಇದನ್ನು ಕಾಡನೀಲೀ ಎಂದೆನ್ನುವರು ಇದರ ಗುಣವು ನೀಲಿ ಗಿಡದಂತೆಯಿರುತ್ತದೆ.