ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರತ್ಯೇಕ ಬಸ್ ಪಥ; ನೀವೀನಾದರು ಕಾರ್ ಅಥವಾ ದ್ವಿಚಕ್ರ ವಾಹನದಲ್ಲಿ ಈ ಪಥದಲ್ಲಿ ಹೋದ್ರೆ ಬೀಳುತ್ತೆ ಭಾರಿ ದಂಡ!!!

0
280

ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾರಿಗೆ ಇಲಾಖೆ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದರು ಜನರು ಸರಿಯಾಗಿ ಸ್ಪಂದನೆ ನೀಡದಿರುವುದು ಯೋಜನೆಗಳ ವೈಪಲ್ಯಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿಯಾಗುವಂತೆ ಸಂಚಾರ ದಟ್ಟಣೆ ತಗ್ಗಿಸಲು ಕೆ.ಆರ್.ಪುರ ಬಳಿಯ ಟಿನ್‌ ಫ್ಯಾಕ್ಟರಿ ಬಳಿಯಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಪಥ ನಿರ್ಮಿಸಿದರೂ ಸವಾರರು ಮಾತ್ರ ಪಥ ಬದಲಾವಣೆಯನ್ನು ಮಾಡದೆ ಬಿಎಂಟಿಸಿ ಪ್ರತ್ಯೇಕ ಪಥದಲ್ಲಿ ಚಲಿಸುತ್ತಿದ್ದು ಬಸ್ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Also read: ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್; ಡಿ.1ರಿಂದಲೇ ಭಾರಿ ದುಬಾರಿಯಾಗಲಿದೆ ಕರೆ, ಡೇಟಾ ದರಗಳು.!

ಹೌದು ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ 12 ಮಾರ್ಗಗಳನ್ನು ಗುರುತಿಸಲಾಗಿದೆ. ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಪ್ರತ್ಯೇಕ ಪಥ ನಿರ್ಮಾಣವಾಗಲಿದೆ. ಪ್ರಾಯೋಗಿಕವಾಗಿ ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವಿನ 18.5 ಕಿ. ಮೀ. ಉದ್ದದ ರಸ್ತೆಯಲ್ಲಿ ಪ್ರತ್ಯೇಕ ಪಥ ನಿರ್ಮಾಣವಾಗಿದ್ದು ಮೂರು ದಿನಗಳಿಂದ ಸಂಚಾರ ಶುರುವಾಗಿದೆ. ಇದರ ಪರೀಕ್ಷೆಗಾಗಿ ಟಿಎನ್‌ಎಂ ಬಸ್ ಹತ್ತಿದ್ದಾಗ ರಸ್ತೆ ಉದ್ದಕ್ಕೂ ನಿಯಮ ಉಲಂಘನೆ ಕಂಡು ಬಂದಿದ್ದು ಜನರು ಸ್ವಂತ ವಾಹನಗಳನ್ನು ಬಿಎಂಟಿಸಿ ಬಸ್ ಪಥದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

ಸಾರ್ವಜನಿಕರಿಂದ ಆಕ್ರೋಶ?

ಪ್ರತ್ಯೇಕ ಪಥಕ್ಕೆ ಬಣ್ಣ ಬಳಿಯಲಾಗಿದ್ದು, ಪಥದ ನಡುವೆ ಬಸ್‌ಗಳಿಗೆ ಮಾತ್ರ ಅವಕಾಶ ಎಂದು ರಸ್ತೆಯ ಮೇಲೆ ಬರೆಯಲಾಗಿದೆ. ಆದರೆ, ವೇಗವಾಗಿ ಬರುವ ವಾಹನಗಳ ಚಾಲಕರು ಇದನ್ನು ಗಮನಿಸದೆಯೇ ಅದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ನಿಯಮವನ್ನು ಪಾಲಿಸಬೇಕಾದ ಬಸ್‌ಗಳೇ ಪಥ ಬದಲಿಸುತ್ತಿರುವದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಪೂರ್ವತಯಾರಿ ಇಲ್ಲದ ಅವೈಜ್ಞಾನಿಕ ಯೋಜನೆ ಇದಾಗಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ. ಬಸ್‌ ಪಥಗಳ ಮೇಲೆ ಸಾಗುವ ವಾಹನಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಈವರೆಗೂ ಅಳವಡಿಸಿಲ್ಲ. ಇದರಿಂದಾಗಿ ನಿಯಮ ಉಲ್ಲಂಘನೆಗೆ ಮುಕ್ತ ಅವಕಾಶ ನೀಡಿದಂತಾಗಿದೆ. ಪೊಲೀಸ್ ಸಿಬ್ಬಂದಿಯನ್ನೂ ನೇಮಿಸಲಿಲ್ಲ.

Also read: ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ; ಮೊದಲ ಸಿನಿಮಾಕ್ಕೆ ಅಣ್ಣಾಮಲೈ ಸಂಭಾವನೆ ಎಷ್ಟು??

ಈ ನಿಯಮ ಉಲಂಘನೆ ಮಾಡಿದವರಿಗೆ ಮೊದಲ 500 ರೂ. ದಂಡ ಮತ್ತು ಎರಡನೇ ಬಾರಿಗೆ ಹೆಚ್ಚಿನ ದಂಡವನ್ನು ವಿಧಿಸುವ ನಿಯಮ ಕೂಡ ಇದೆ ಆದರೆ ಇದ್ಯಾವುದನ್ನು ಲೆಕ್ಕಿಸದೆ ಖಾಸಗಿ ವಾಹನಗಳು ಸಂಚಾರ ಮಾಡುತ್ತಿದ್ದರೆ ಕೆಲವು ಖಾಸಗಿ ಟ್ಯಾಕ್ಸಿಗಳು ಮತ್ತು ಸರಕು ವಾಹನಗಳು ಇತರ ವಾಹನಗಳನ್ನು ಹಿಂದಿಕ್ಕಲು ಆ ಜಾಗವನ್ನು ಬಳಸಿಕೊಳ್ಳುತ್ತಿವೆ. ಲೇನ್ ಅನ್ನು ಕೆಂಪು ಮತ್ತು ಬಿಳಿ ಬಣ್ಣದಲ್ಲಿ “ಕೇವಲ ಬಸ್” ಎಂದು ಸ್ಪಷ್ಟವಾಗಿ ಗುರುತಿಸಲಾಗಿದ್ದರೂ, ರಸ್ತೆಯ ಉಳಿದ ಭಾಗಗಳಿಂದ ಹಳದಿ ರೇಖೆಯೊಂದಿಗೆ ಲೇನ್ ಅನ್ನು ಗುರುತಿಸಲಾಗಿದ್ದರೂ, ಜಾಗವನ್ನು ಪಾರ್ಕಿಂಗ್ ಪ್ರದೇಶವಾಗಿ ಬಳಸುವ ವಾಹನಗಳಿವೆ ಎಂದು ಟಿಎನ್‌ಎಂ ತಿಳಿಸಿದೆ.

ಅಪಘಾತದ ಅರಿವು ಇರಲೇಬೇಕು;

ಪಥದಲ್ಲಿ ಸಾಗುವ ಬಸ್‌ಗಳು ನಿಲ್ದಾಣದಲ್ಲಿ ನಿಂತ ಸಂದರ್ಭದಲ್ಲಿ ಹಿಂದಿರುವ ಬಸ್‌ಗಳು ಪಥ ಬದಲಿಸಿ, ಸಾಗುತ್ತಿವೆ. ಇದರಿಂದಾಗಿ ಅಪಘಾತದ ಭೀತಿ ಎದುರಾಗಿದೆ. ಜಂಕ್ಷನ್‌ಗಳಲ್ಲಿ ಪಥ ಅಂತ್ಯವಾಗುವುದರಿಂದ ಖಾಸಗಿ ವಾಹನ ಸವಾರರು ಗೊಂದಲಕ್ಕೆ ಒಳಗುತ್ತಿದ್ದಾರೆ. ಹೊರವರ್ತುಲ ರಸ್ತೆಯ ಪಥದಲ್ಲಿ ಬಸ್‌ಗಳ ಸಂಚಾರ ಇಲ್ಲದಿರುವಾಗ ಆಟೊ ರಿಕ್ಷಾ ಹಾಗೂ ಬೈಕ್‌ಗಳ ಸವಾರರು ವೇಗವಾಗಿ ಸಾಗುತ್ತಿದ್ದಾರೆ. ‘ಪ್ರತ್ಯೇಕ ಪಥ ನಿರ್ಮಾಣ ಮಾಡಿರುವುದರಿಂದ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಳವಾಗಲು ಅವಕಾಶ ಮಾಡಿಕೊಟ್ಟಂತಾಗಿದೆ. ಪ್ರತ್ಯೇಕ ಪಥವನ್ನು ನಿರ್ಮಿಸಿದರೂ ಬಸ್‌ಗಳ ಚಾಲಕರು ನಿಯಮ ಪಾಲಿಸುತ್ತಿಲ್ಲ. ಮೊದಲು ಅವರಿಗೆ ಅರಿವು ಮೂಡಿಸಬೇಕು. ಎಂದು ತಿಳಿಸಿದೆ.

Also read: ಇದೇ ಡಿಸೆಂಬರ್.1ರಿಂದಲೇ ಎಲ್ಲಾ ವಾಹನಗಳಿಗೆ ಫಾಸ್ಟ್‌ ಟ್ಯಾಗ್ ಕಡ್ಡಾಯ; ಇದನ್ನು ಎಲ್ಲಿ ಹೇಗೆ, ಪಡೆಯಬೇಕು ದಾಖಲಾತಿಗಳೇನು ಬೇಕು??

ಈ ರಸ್ತೆಯಲ್ಲಿ ಕಡ್ಡಾಯವಾಗಿ ಬಿಎಂಟಿಸಿ ಬಸ್ಸುಗಳು, ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಎಂಜಿನ್‌ಗಳನ್ನು ಮಾತ್ರ ಆದ್ಯತೆಯ ಲೇನ್ ಎಂದು ಗುರುತಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಬೆಂಬಲಿಸಿ ನಿಯಮವನ್ನು ಪಾಲಿಸಿದರೆ ಬೆಂಗಳೂರಿನ ಟ್ರಾಪಿಕ್ ಸಮಸ್ಯೆಯಿಂದ ಮುಕ್ತವಾಗಬಹುದು. ಒಟ್ಟಾರೆಯಾಗಿ ಈ ಪ್ರತ್ಯೇಕ ಪಥ ನಿಯಮದಂತೆ ನಡೆಯಲು ಸಾರ್ವಜನಿಕರಿಗೆ ಅರಿವು ಮುಖ್ಯವಾಗಿದ್ದು, ದಂಡ ವಸೂಲಿಗೆ ಟ್ರಾಫಿಕ್ ಪೊಲೀಸ್ ಕ್ರಮ ಕೈಗೊಳ್ಳುತ್ತಿದ್ದಾರೆ.