ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳು 20, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 20, ಸಹಾಯಕ ಇಂಜಿನಿಯರ್ 20 ಒಟ್ಟು 60 ಹುದ್ದೆಗಳಿಗೆ ಬಿಎಂಆರ್ಸಿಎಲ್ ಅರ್ಜಿ ಆಹ್ವಾನಿಸಿದೆ. ಮೇ 02ರೊಳಗೆ ಅರ್ಜಿ
ಬೆಂಗಳೂರು, ಏಪ್ರಿಲ್ 18 : ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (ಬಿಎಂಆರ್ ಸಿಎಲ್) ವಿವಿಧ ಒಟ್ಟು 60 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳು 20, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ 20, ಸಹಾಯಕ ಇಂಜಿನಿಯರ್ 20 ಒಟ್ಟು 60 ಹುದ್ದೆಗಳಿಗೆ ಅರ್ಜಿ ಆಹ್ವಾನಸಲಾಗಿದೆ. ಆಸಕ್ತ ಮತ್ತು ಅರ್ಹರು ನಿಗದಿತ ದಿನಾಂಕ ಮೇ 02ರೊಳಗೆ ಅರ್ಜಿ ಸಲ್ಲಿಸಬಹುದು.[ಕರ್ನಾಟಕದಾದ್ಯಂತ ಅಂಚೆ ಕಚೇರಿಯಲ್ಲಿ 1048 ಹುದ್ದೆಗಳಿವೆ, ಅರ್ಜಿ ಹಾಕಿ]
* ಹುದ್ದೆ ಎಲ್ಲಿ? : ಕರ್ನಾಟಕ (ಬಿಎಂಆರ್ ಸಿಎಲ್)
- ಕಾರ್ಯನಿರ್ವಾಹಕ ಇಂಜಿನಿಯರ್
* ವೇತನ: 73860 ರು. (ತಿಂಗಳಿಗೆ)
* ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ ಅಥವಾ ಬಿಟೆಕ್ ಉತ್ತೀರ್ಣರಾಗಿರಬೇಕು.
* ವಯೋಮಿತಿ : 50
- ಸಹಾಯಕ ಇಂಜಿನಿಯರ್
* ವೇತನ: 51530 ರು (ತಿಂಗಳಿಗೆ)
* ವಯೋಮಿತಿ: 35 ವರ್ಷ.
* ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ ಅಥವಾ ಬಿಟೆಕ್ ಉತ್ತೀರ್ಣರಾಗಿರಬೇಕು. ಇಲ್ಲವಾದಲ್ಲಿ ಡಿಪ್ಲಮೋನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ಆಯ್ಕೆ ವಿಧಾನ: ಮೇಲೆ ತಿಳಿಸಲಾದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.