ಬೇಕಾಗುವ ಸಾಮಗ್ರಿಗಳು:
- 4 ಆಲೂಗಡ್ಡೆ,
- 1 ಕಪ್ ಹಸಿಬಟಾಣಿ ಕಾಳು,
- 2 ಈರುಳ್ಳಿ,
- 2 ಟೊಮೆಟೊ,
- 2 ಹಸಿಮೆಣಸಿನ ಕಾಯಿ,
- ಅರ್ಧ ಚಮಚ ಗರಂ ಮಸಾಲಾ
- 1 ಚಮಚ ಅರಿಶಿನ
- 1 ಚಮಚ ಕಡಲೆಹಿಟ್ಟು
- ಸ್ವಲ್ಪ ಕರಿಬೇವು,
- ಸ್ವಲ್ಪ ಕೊತ್ತಂಬರಿ ಸೊಪ್ಪು,
- ರುಚಿಗೆ ತಕ್ಕಶ್ಟು ಉಪ್ಪು,
- ಒಗ್ಗರಣೆಗೆ ಎಣ್ಣೆ ಮತ್ತು ಸಾಸಿವೆ.
Also read: ಆರೋಗ್ಯಕೆ ಹಿತಕರವಾದ ಪಾಲಕ್ ಸೊಪ್ಪಿನ “ಪನ್ನೀರ್ ಗ್ರೇವಿ” ಮಾಡಿ ಸವಿದು ನೋಡಿ..!!
ಮಾಡುವ ವಿಧಾನ:
- ಮೊದಲಿಗೆ ಆಲೂಗಡ್ಡೆ ಮತ್ತು ಹಸಿ ಬಟಾಣಿ ಕಾಳನ್ನು ಹಾಕಿ ಬೇಯಿಸಿಕೊಳ್ಳಿ.
- ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಜೀರಿಗೆ ಎಣ್ಣೆ ಹಾಕಿ ಕೊಳ್ಳಿ.
- ನಂತರ ಸ್ವಲ್ಪ ಕರಿಬೇವು ಉದ್ದನೆಯದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ. ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.
- ಈಗ ಇದಕ್ಕೆ ಅರ್ಧ ಚಮಚ ಗರಂ ಮಸಾಲಾ, ಅರಿಶಿನ ಮತ್ತು ಉಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ನಂತರ ಹೆಚ್ಚಿಟ್ಟುಕೊಂಡ ಟೊಮೇಟೊ ಅನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
- ಈಗ ಮೊದಲು ಬೇಯಿಸಿಕೊಂಡ ಆಲೂಗಡ್ಡೆ ಮತ್ತು ಹಸಿ ಬಟಾಣಿ ಕಾಳನ್ನು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ.
- ಈಗ ಒಂದು ಬಟ್ಟಲಿಗೆ ಸ್ವಲ್ಪ ಹಸಿ ಕಡಲೆಹಿಟ್ಟನ್ನು ಹಾಕಿ ನೀರಿನಲ್ಲಿ ಮಿಕ್ಸ್ ಮಾಡಿ ಆ ನೀರನ್ನು ಹಾಕಿ. ಇದರಿಂದ ಸಾಗು ಗಟ್ಟಿಯಾಗಲು ಸಹಾಯ ಮಾಡುತ್ತದೆ.
- ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.
- ಈಗ ಬಹಳ ಬೇಗ ಮತ್ತು ಸ್ವಲ್ಪವೂ ಶ್ರಮವಿಲ್ಲದೆ ರುಚಿಯಾಗಿ ಮಾಡಬಹುದಾದ ದಿಢೀರ್ ಬಾಂಬೆ ಸಾಗು ಸವಿಯಲು ಸಿದ್ದ.