ಪೋಷಕರೇ ಮಕ್ಕಳಿಗೆ ಚಾಕ್ಲೆಟ್ ಕೊಡುವಾಗ ಹುಷಾರ್, ಗಂಟಲಲ್ಲಿ ಚಾಕ್ಲೇಟ್ ಸಿಕ್ಕಿಕೊಂಡು ಈ ಮಗೂಗೆ ಏನಾಯ್ತು ನೋಡಿ!!

0
577

ಪೋಷಕರು ಪುಟ್ಟ ಮಕ್ಕಳ ಬಗ್ಗೆ ಏಷ್ಟೇ ಜಾಗ್ರತೆ ವಹಿಸಿದ್ರೂ ಸಾಲದು. ಪ್ರತಿಕ್ಷಣವೂ ಮಕ್ಕಳ ಬಳಿಯೇ ಪೋಷಕರು ಇರಬೇಕು. ಇಲ್ಲವಾದಲ್ಲಿ ಒಂದು ಕ್ಷಣ ಯಾಮಾರಿದ್ರೂ ಮಕ್ಕಳನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರೋದು ಗ್ಯಾರೆಂಟಿ. ಮಕ್ಕಳು ಸಂಪು, ಬಕೆಟ್ ಒಳಗೆ ಬಿದ್ದು, ಆಡುವಾಗ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಹಾಗಾಗಿ ಮಕ್ಕಳ ಬಗ್ಗೆ ಸದಾ ಜಾಗ್ರತೆ ವಹಿಸಬೇಕಾಗಿದೆ. ಒಮ್ಮೆ ಕಳೆದುಹೋದ ಜೀವ ಮತ್ತೆ ನಮ್ಮ ಕೈ ಸೇರದು.

ಹೌದು.. ಈಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಚಾಕಲೇಟ್ ಗಂಟಲಲ್ಲಿ ಸಿಲುಕಿ ಬಾಲಕ ತನ್ನ ಜೀವ ಕಳೆದುಕೊಂಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಉಳ್ಳಾಲ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡದಲ್ಲಿ ಈ ದುರ್ಘಟನೆ ನಡೆದಿದೆ. ರಹೀಂ ಎಂಬವರ ಮಗ 8 ವರ್ಷದ ಪೈಝಾನ್ ಮೃತ ಬಾಲಕ. ಪೈಝಾನ್ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡ ಸೈಕಲ್ ಇಬ್ರಾಹಿಂ ರವರ ಮೊಮ್ಮಗ ರಹೀಂ ಎಂಬವರ ಮಗನಾಗಿದ್ದಾನೆ.

ಮನೆಯಲ್ಲಿ ಬಾಲಕನು ಚಾಕಲೇಟ್ ತಿನ್ನುತ್ತಿದ್ದ ಸಂದರ್ಭದಲ್ಲಿ ಬಾಯಲ್ಲಿದ್ದ ಚಾಕಲೇಟ್ ಹಠತ್ತಾಗಿ ಜಾರಿ ಗಂಟಲಲ್ಲಿ ಸಿಲುಕಿದೆ. ಬಾಲಕನಿಗೆ ಉಸಿರಾಡಲು ಕಷ್ಟವಾಗಿದ್ದನ್ನು ಗಮನಿಸಿದ ಮನೆಯವರು ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದಾಗ ಬಾಲಕ ಮೃತಪಟ್ಟಿದ್ದಾನೆ.

ಇನ್ನು ಹುಣಸೆ ಬೀಜ, ನಾಣ್ಯ ನುಂಗಿಯೂ ಕೆಲ ಮಕ್ಕಳು ಸಾವನ್ನಪ್ಪಿರುವ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ ಚಾಕಲೇಟ್ ನುಂಗಿಯೂ ಮಕ್ಕಳು ಸಾಯುವುದೆಂದರೆ ನಿಜಕ್ಕೂ ಇದು ಆಘಾತಕಾರಿ ವಿಷಯ.

ಚಾಕಲೇಟ್ ಎನ್ನುವುದು ಚಿಕ್ಕ ತಿನಿಸು ಬಾಲಕನಿಗೆ ಮರಣ ತಂದೊಡ್ಡಿದೆ ಎಂದರೆ ನಂಬಲಸಾಧ್ಯ ಆದರೆ ಇದು ನೈಜ ಘಟನೆ. ಅದೇರೀತಿ ಸದ್ಯಕ್ಕೆ ಶಾಲೆಗಳು ತೆರೆಯದೇ ಇರುವುದರಿಂದ ಮಕ್ಕಳು ಮನೆಯಲ್ಲಿಯೇ ಇರುತ್ತಾರೆ. ಆದುದರಿಂದ ಪೋಷಕರು ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು.

Also read: ಹೊಟ್ಟೆಪಾಡಿಗಾಗಿ ಮಾರ್ಷಿಯಲ್ ಆರ್ಟ್ಸ್ ಅನ್ನು ರಸ್ತೆಯಲ್ಲಿ ಪ್ರದರ್ಶಿಸುತ್ತಿದ್ದ ಅಜ್ಜಿಗೆ ಸೋನು ಸೂದ್ ಮಾಡಿದ ಸಹಾಯವೇನು ಗೊತ್ತಾ..?