ಈ ಆದಿವಾದಿಗಳು ಬೆಳೆದ ಸಸ್ಯಗಳಲ್ಲಿ ಸಿಕ್ಕಿತಾ ಕರೊನಾಗೆ ಮಹಾ ಔಷಧಿ??

0
379

ನೊವೆಲ್ ಕೊರೋನಾ ವೈರಸ್ ಜಗತ್ತನ್ನೇ ಆವರಿಸಿದೆ ಇನ್ನು ಸೋಂಕಿಗೆ ವ್ಯಾಕ್ಸಿನ್ ಕಂಡು ಹಿಡಿಯುವುದೇ ಸವಾಲಾಗಿದೆ. ವ್ಯಾಕ್ಸಿನ್ ಕಂಡು ಹಿಡಿಯಲು ಹಗಲು ರಾತ್ರಿ ಎನ್ನದೇ ವೈದ್ಯರು, ವಿಜ್ಞಾನಿಗಳು ವಿಶ್ವಾದ್ಯಂತ ಶ್ರಮಿಸುತ್ತಿದ್ದಾರೆ. ಆದರೆ ವಾಯುವ್ಯ ಬ್ರೆಜಿಲ್ ಆದಿವಾಸಿಗಳು ಮಾತ್ರ ಈ ವೈರಸ್’ಗೆ ಔಷಧಿ ಕಂಡುಕೊಳ್ಳಲು ತಮ್ಮದೇ ಆದ ದಾರಿಯನ್ನು ಹಿಡಿದಿದ್ದಾರೆ.

ಹೌದು.. ಪ್ರಪಂಚದ ಜನರೆಲ್ಲಾ ಕೊರೋನಾ ವೈರಸ್ ಭೀತಿಯಲ್ಲಿ ಮಾಸ್ಕ್ ಧರಿಸಿಕೊಂಡು, ಪ್ರತಿನಿತ್ಯ ಸ್ಯಾನಿಟೈಸರ್ ಬಳಸುತ್ತಾ, ಸೋಂಕು ತಗುಲಿರುವವರು ಕ್ವಾರೆಂಟೈನ್’ನಲ್ಲಿದ್ದುಕೊಂಡು ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕಾಡಿನಲ್ಲಿ ನೆಮ್ಮದಿಯಿಂದ ವಾಸ ಮಾಡುತ್ತಿರುವವರಲ್ಲೂ ಕೊರೋನಾ ಕಾಣಿಸಿಕೊಂಡಿದೆ.

ಬ್ರೆಜಿಲ್’ನ ಮನೌಸ್ ನಗರದ ಸಮೀಪದಲ್ಲಿ ವಾಸವಿರುವ ಆದಿವಾಸಿ ಜನಾಂಗದ ಐವರಲ್ಲಿ ವೈರಸ್ ಕಾಣಿಸಿಕೊಂಡಿದೆ. ಇದಕ್ಕೆ ಔಷಧಿಯನ್ನು ಹುಡುಕುತ್ತಾ ಪುಟ್ಟ ದೋಣಿಯಲ್ಲಿ ಅಮೆಜಾನ್ ನದಿ ಆಚೆಗೆ ಬೆಳೆದ ಸಸ್ಯ ಸಂಕುಲದತ್ತಾ ಸಾಗಿದ್ದಾರೆ. ಕೊವಿಡ್-19ಗೆ ಆದಿವಾಸಿ ಪದ್ಧತಿಯಂತೆ ಚಿಕಿತ್ಸೆ ಕೊರೋನಾ ವೈರಸ್ ಸೋಂಕು ವಿಶ್ವದಾದ್ಯಂತ ಭೀತಿ ಹುಟ್ಟಿಸಿದೆ ನಿಜ. ಅದೇನೇ ಇದ್ದರೂ ನಮ್ಮ ಜನರಲ್ಲಿ ಕಾಣಿಸಿಕೊಂಡ ಸೋಂಕಿನ ಲಕ್ಷಣಗಳ ಪರಿಹಾರಕ್ಕೆ ನಾವೇ ಔಷಧಿ ಕಂಡು ಹಿಡಿದುಕೊಳ್ಳುತ್ತೇವೆ. ಆದಿವಾಸಿ ಸಂಪ್ರದಾಯದಂತೆ ಚಿಕಿತ್ಸೆ ಪಡೆದುಕೊಳ್ಳುತ್ತೇವೆ. ನಮ್ಮಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸೋಂಕಿತ ಲಕ್ಷಣಗಳು ಗೋಚರಿಸಿದ್ದು, ಅದನ್ನು ಹೇಗೆ ನಿಭಾಯಿಸಬೇಕು ಹಾಗೂ ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ನಮಗೆ ತಿಳಿದಿದೆ ಅಂತಾ ಸತೇರಿ ಮಾವೆ ಆದಿವಾಸಿ ಜನಾಂಗದ ಮುಖಂಡ ಆಂಡ್ರೆ ಸತೇರಿ ಮಾವೆ ತಿಳಿಸಿದ್ದಾರೆ.

ಅಮೆಜಾನ್ ನದಿ ಆಚೆಗಿನ ಆದಿವಾಸಿಗಳ 20 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದ್ದು, 1,400 ಜನ ಮಹಾಮಾರಿಗೆ ಬಲಿಯಾಗಿದ್ದರು. ಈ ವೇಳೆ ಮೃತರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲು ದೊಡ್ಡ ಪ್ರಮಾಣದ ಗುಂಡಿ ತೋಡಲಾಗಿತ್ತು. ಸರ್ಕಾರದ ಈ ಕ್ರಮವು ಆದಿವಾಸಿಗಳಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿತು.

ಸತೇರೆ ಮಾವೆ ಆದಿವಾಸಿ ಜನಾಂಗದ ಜನರು ತಾವು ಬೆಳೆದ ಗಿಡಗಳಲ್ಲಿ ಔಷಧೀಯ ಗುಣಗಳನ್ನು ಕಂಡುಕೊಂಡಿದ್ದಾರೆ. ಅನಾರೋಗ್ಯದಿಂದ ಮುಕ್ತಿ ಹೊಂದಲು ಈ ಗಿಡಗಳನ್ನೇ ಬಳಸಿಕೊಂಡು ಔಷಧಿ ಸಿದ್ಧಪಡಿಸುತ್ತಾರೆ. ಕರಪನೌಬಾ ಗಿಡದಿಂದ ಊರಿಯೂತ ಸಮಸ್ಯೆಗೆ ಔಷಧಿ, ಸರಕ್ಯೂರಮಿರ ಗಿಡದಿಂದ ಮಲೇರಿಯಾ ರೋಗಕ್ಕೆ ಔಷಧಿಗಳನ್ನು ಸಿದ್ಧಪಡಿಸಲಾಗಿದೆ. ಅದೇ ರೀತಿ ಕೊರೋನಾ ವೈರಸ್ ಸೋಂಕು ನಿವಾರಣೆಗೂ ಕೂಡಾ ಸಸ್ಯಗಳನ್ನೇ ಬಳಸಿಕೊಂಡು ಔಷಧಿ ಪತ್ತೆ ಮಾಡಲು ಆದಿವಾಸಿ ಜನರು ಮುಂದಾಗಿದ್ದಾರೆ. ಪೂರ್ವಜರ ಕಾಲದಿಂದಲೂ ಆಂಡ್ರೆ ಸತೇರಿ ಮಾವೆ ಔಷಧಿ ತಯಾರಿಕೆ ಮಾಡುತ್ತಿದ್ದಾರೆ. 93 ವರ್ಷದ ತಮ್ಮ ಅಜ್ಜನಿಂದ ಈ ವಿದ್ಯೆಯನ್ನು ಆಂಡ್ರೆ ಸತೇರಿ ಮಾವೆ ಕರಗತ ಮಾಡಿಕೊಂಡಿದ್ದಾರೆ.

Also read: ವಲಸಿಗರನ್ನು ಕರೆತರಲು ಬಸ್ ನೀಡಿದ್ದ ಕಾಂಗ್ರೆಸ್ ವಿರುದ್ಧ ಕೇಸ್ ಹಾಕಿ ರಾಜಕೀಯ ಆಟ ಆಡುತ್ತಿರುವ ಯೋಗಿ ಸರ್ಕಾರ!! ಇದು ಸರೀನಾ??