ಪಾನ್ ಮಸಾಲಾಗೆ ರಾಯಭಾರಿ ಆದ ಜೇಮ್ಸ್ ಬಾಂಡ್ ಗೆ ಸಿಕ್ಕ ಪ್ರತಿಕ್ರಿಯೆ ಏನು ಗೊತ್ತಾ?

0
845

ಜೇಮ್ ಬಾಂಡ್ ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಪಿಯರ್ಸ್ ಬ್ರೊಸ್ನನ್ ಭಾರತೀಯ ಮೂಲಕ ತಂಬಾಕು ಉತ್ಪನ್ನವಾದ ಪಾನ್ ಮಸಾಲಾಗೆ ರಾಯ ಭಾರಿಯಾಗಿ ಆಯ್ಕೆಯಾಗಿದ್ದಾರೆ.

pierce-brosnan-pan-masala-ad_650x400_71475818640

ಹ್ಯಾಂಡ್ಲ್ ವಿತ್ ಗನ್ ಅಂಡ್ ಗರ್ಲ್ ಖ್ಯಾತಿಯ ಜೇಮ್ಸ್ ಬಾಂಡ್-೦07 ಸರಣಿಯ ನಾಲ್ಕು ಚಿತ್ರಗಳಲ್ಲಿ ನಟಿಸಿರು ೬೩ ವರ್ಷದ ಬ್ರೊಸ್ನನ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಡಿಡಿಬಿ ಮುದ್ರ ಗ್ರೂಪ್ಸ್ ಒಡೆತನದ ಪಾನ್ ಪರಾಗ್ ಪಾನ್ ಮಸಾಲಾ ಉತ್ಪನ್ನಕ್ಕೆ ರಾಯಭಾರಿ ಆಗಿರುವ ಬ್ರೊಸ್ನನ್, ‘ ಕ್ಲಾಸ್ ನೆವರ್ ಗೋಸ್ ಔಟ್ ಆಫ್ ಸ್ಟೈಲ್’ ಎಂದು ಬಾಂಡ್ ಮಾದರಿಯಲ್ಲಿ ಡೈಲಾಗ್ ಹೊಡೆಯು ತ್ತಾರೆ. ಈ ಜಾಹಿರಾತಿನ ವೀಡಿಯೊ ಬಿಡುಗಡೆ ಆಗಿದೆ.

ಬ್ರೊಸ್ನನ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಜೇಮ್ಸ್ ಬಾಂಡ್ ಪಾನ್ ಮಾಸಾಲಾ ಕೂಡ ಮಾರ್ತಾರೆ ಎಂದು ಕಿಡಿಕಾರಲಾಗಿದೆ.