ರಾಜಕಾರಣಿಗಳು ಬರೀ ದುಡ್ಡು ಮಾಡ್ಕೊಂಡು ಸಮಾಜಕ್ಕಾಗಿ ಎನೂ ಮಾಡೋಲ್ಲ ಅನ್ನೋದಕ್ಕೆ ತದ್ವಿರುದ್ಧ ಬಸವನಗುಡಿಯ ಕಟ್ಟೆ ಸತ್ಯನಾರಾಯಣ..!!

0
650

ಬಸವನಗುಡಿ ಒಂದು ಐತಿಹಾಸಿಕ ಪರಂಪರೆಯೊಂದಿಗೆ ವಿಶಿಷ್ಟವಾದ ವಾರ್ಡ್, ವಾಣಿಜ್ಯ ಆಸಕ್ತಿಗಳು ಮತ್ತು ಪರಂಪರೆ ಹಿತ ದೃಷ್ಟಿಯಿಂದ ವಸತಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ 25 ವರ್ಷಗಳಲ್ಲಿ, ಈ ವಾರ್ಡ್ ನ ಬೆನ್ನೆಲುಬು ಕಟ್ಟೆ ಸತ್ಯ. ಯಾವಾಗಲೂ ತಮ್ಮ ವಿನೂತನ ಉಪಾಯಗಳಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಬಿಎಸ್ ಸತ್ಯನಾರಾಯಣ ಅವರು ಕಟ್ಟೆ ಸತ್ಯ ಎಂದೇ ಜನಪ್ರಿಯವಾಗಿದ್ದಾರೆ. ಬಸವನಗುಡಿ ಕ್ಷೇತ್ರದಿಂದ ಸತತ 5 ಬಾರಿ ಆಯ್ಕೆಯಾದರು, ಮತ್ತು 2013 ರಲ್ಲಿ ಬೆಂಗಳೂರು ನಗರದ ಮೇಯರ್ ಆಗಿದ್ದವರು. ಈ ಸ್ಥಾನಗಳು ಪದವಿಗಳು ಅವರ 25 ವರ್ಷಗಳ ಜನ ಸೇವೆಗೆ ಸಂದ ಗೌರವವಾಗಿದೆ.

ಇವರು ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ. ಬಸವನಗುಡಿ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಶಕ್ತಿಗೂ ಮೀರಿ ಪ್ರಯತ್ನಗಳನ್ನು ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಸತತವಾಗಿ 4 ಬಾರಿ ಕಾರ್ಪೊರೇಟರ್ ಆಗಿ ಆಯ್ಕೆ ಆಗಿದ್ದರು. ಈ ಹಿಂದೆ ಅವರು, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕಾಗಿ ಬಸವನಗುಡಿ ಪಾಲಿಕೆ ಸದಸ್ಯ ಸತ್ಯನಾರಾಯಣ ಅವರು ಮೇಯರ್ ಆಗಿ ಆಯ್ಕೆ ಆಗಿದ್ದರು.

ಇವರು ಮಾಡಿರೋ ಕೆಲಸಗಳನ್ನ ಒಂದು ಸುಂದರ ವಿಡಿಯೋ ಮೂಲಕ ಪರಿಚಯಿಸಲಾಗಿದೆ.