ಪಟಾಕಿ ಏನೋ ಬ್ಯಾನ್ ಆಯ್ತು, ಆದರೆ ಹಸಿರು ಪಟಾಕಿ ಮಾತ್ರ ಹೊಡಿಬಹುದು.. ಹಸಿರು ಪಟಾಕಿಯ ಬಗ್ಗೆ ಎಲ್ಲ ಮಾಹಿತಿ ಇದೆ ಓದಿ!!

0
241

ಕೊರೊನಾ ಮಹಾಮಾರಿ ಕರಿ ನೆರಳು ವಿಶ್ವಾದ್ಯಂತ ಹರಡಿದ್ದು, ಬೆಳಕಿನ ಹಬ್ಬ ದೀಪಾಳಿಗೂ ಆವರಿಸಿದೆ. ಕೊರೊನಾ ಸೋಂಕಿತರಲ್ಲಿ ಉಸಿರಾಟದ ತೊಂದರೆ ಉಂಟಾಗುವುದರಿಂದ ರೋಗಿಗಳ ಹಿತಕ್ಕಾಗಿ ಪಟಾಕಿಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹಸಿರು ಪಟಾಕಿ ಸಿಡಿಸಿ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಿಎಂ ಬಿಎಸ್ ವೈ ಮನವಿ ಮಾಡಿದ್ದಾರೆ. ಆದರೆ, ಜನಸಾಮಾನ್ಯರಲ್ಲಿ ಹಸಿರು ಪಟಾಕಿ ಎಂದರೇನು ಎಂಬ ಗೊಂದಲದಲ್ಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಚಾಲ್ತಿಯಲ್ಲಿರುವ ಈ ಹಸಿರು ಪಟಾಕಿ ಬಗ್ಗೆ ಬಹುತೇಕರಿಗೆ ಅರಿವಿಲ್ಲ.

ಪರಿಸರಕ್ಕೆ ಹೆಚ್ಚು ಮಾಲಿನ್ಯವನ್ನುಂಟು ಮಾಡದ, ವಿಷಕಾರಿ, ಅಪಾಯಕಾರಿ ಅಲ್ಲದ ಪಟಾಕಿಗಳು. ಸಾಮಾನ್ಯವಾಗಿ ಪಟಾಕಿ ತಯಾರಿಸಲು ಲೀಥಿಯಂ, ಅರ್ಸೇನಿಕ್ ಬೇರಿಯಂ ಮತ್ತು ಸೀಸದ ಅಂಶಗಳ ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ಹಸಿರು ಪಟಾಕಿಗಳಲ್ಲಿ ಈ ಅಂಶವು ಮೂರನೇ ಒಂದು ಭಾಗದಷ್ಟಿರುತ್ತದೆ ಅಂದರೆ ಶೇ 30ರಷ್ಟು ರಾಸಾಯನಿಕ ಬಳಕೆ ಮಾಡಲಾಗಿರುತ್ತದೆ.

ಇನ್ನು, ಈ ಹಸಿರು ಪಟಾಕಿ ಮಾರಾಟದ ಬಗ್ಗೆ ಈ ಹಿಂದೆಯೇ ವರ್ತಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. ಪಟಾಕಿಯಂತೆಯೇ ಕಾಣುವ ಇದು ಪರಿಸರ ಸ್ನೇಹಿಯಾಗಿದೆ. ಇನ್ನು ಈ ಹಸಿರು ಪಟಾಕಿ ಪತ್ತೆಗಾಗಿ ಹಸಿರು ಲೋಗೊ ಮತ್ತು ಕ್ಯೂಆರ್ ಕೋಡಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಸಾಮಾನ್ಯ ಪಟಾಕಿಗಳನ್ನು ನೈಟ್ರೇಟ್ ಮತ್ತು ಬೇರಿಯಂಗಳು ಕಂಡು ಬರುತ್ತವೆ. ಈ ರಾಸಾಯನಿಕಗಳು ಹಸಿರು ಪಟಾಕಿಗಳಲ್ಲಿ ಇರುವುದಿಲ್ಲ. ಈ ಹಸಿರು ಪಟಾಕಿಗಳು ಸ್ಪೋಟಿಸಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಪ್ರಯೋಗಾಲಯದ ಮೂಲಕ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನು ಕಳೆದ ವರ್ಷ ಈ ಪಟಾಕಿಯನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು.