ಅಂತೂ ಇಂತೂ ಮೋದಿ ಕನಸು ನನಸು, ನಮ್ಮ ಭಾರತಕ್ಕೆ ಬುಲೆಟ್ ಟ್ರೈನ್ ಬರಲು ಎಲ್ಲಾ ಸಿದ್ಧತೆ ಅಂತಿಮವಾಗಿದೆ..!

0
586

ಮೋದಿಯವರ ಕನಸಿನ ಯೋಜನೆಗಳಲ್ಲಿ ಇದು ಸಹ ಒಂದು ಯೋಜನೆಯಾಗಿತ್ತು. ಮೋದಿ ತಮ್ಮ ಅಧಿಕಾರದಲ್ಲಿ ಹಲವು ರೀತಿಯ ಯೋಜನೆಗಳನ್ನು ಕೈಗೊಂಡಿದ್ದು ಒಂದು ಒಂದೇ ಯೋಜನೆಗಳು ಅಂತಿಮವಾಗುತ್ತಿವೆ ಅದರಲ್ಲಿ ಈ ಬುಲೆಟ್ ಟ್ರೈನ್ ಸಹ ಒಂದು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಬುಲೆಟ್ ಟ್ರೈನ್ ಯೋಜನೆ ಕೊನೆಗೂ ಕೈಗೂಡುವ ಹಂತದಲ್ಲಿದೆ.

ಅಹಮದಾಬಾದ್-ಮುಂಬೈ ನಡುವೆ ಅತಿ ವೇಗದ ರೈಲು ಯೋಜನೆಗೆ ಮುಂದಿನ ಸೆಪ್ಟೆಂಬರ್ 14ರಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯಿಂದ ಎರಡು ನಗರಗಳ ನಡುವಿನ ಪ್ರಯಾಣ ಸಮಯ ಮೂರರಿಂದ ಏಳು ಗಂಟೆಗಳವರೆಗೆ ಉಳಿತಾಯವಾಗಲಿದೆ ಎನ್ನಲಾಗಿದೆ.

ಇನ್ನು ಈ ಟ್ರೈನ್ ನಲ್ಲಿ 750 ಮಂದಿ ಪ್ರಯಾಣಿಸಬಹುದಾದ ಬುಲೆಟ್ ರೈಲು, 2023ರ ಡಿಸೆಂಬರ್’ಗೆ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ. 1.10 ಲಕ್ಷ ಕೋಟಿ ರುಪಾಯಿ ವೆಚ್ಚದ ಈ ಯೋಜನೆಗೆ ಜಪಾನ್ ಅನುದಾನವೂ ದೊರೆಯುತ್ತಿದೆ.