ಪಾಳುಬಿದ್ದ ಜಮೀನಿನ ಪೊದೆಯಲ್ಲಿ ಕಂತೆ ಕಂತೆ ನೋಟು ಪತ್ತೆ!! ಬೆಚ್ಚಿ ಬಿದ್ದ ಕೋಟೆ ಜನ!!

0
250

ದಿಲೀಪ್ ಬಿಲ್ಡ್ಕನ್ ಕಂಪನಿಯಲ್ಲಿ ಕಳವು ಮಾಡಿದ್ದ ಹಣ ಕಂಪನಿಯ ಹಿಂಭಾಗ ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ. ಬುಕ್ಲೂರಹಳ್ಳಿ ಬಳಿ ಘಟನೆ ನಡೆದಿದೆ.

ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬ್ಯುಲ್ಡ್ ಕಂಪನಿಯ ಕಚೇರಿ ಮೂರು ದಿನಗಳ ಹಿಂದೆ ಕಟ್ಟಡದ ಕ್ಯಾಶ್ ರೂಂ ಮೇಲಿನ ಶೀಟ್ ಮುರಿದು ಒಳ ಪ್ರವೇಶಿಸಿ 36 ಲಕ್ಷ ರೂಪಾಯಿ ಕಳ್ಳತನ ಮಾಡಲಾಗಿತ್ತು. ಕ್ಯಾಶ್ ರೂಂ ನಲ್ಲಿದ್ದ ಹಣವನ್ನ ಕಂಪನಿಯಲ್ಲಿನ ಮೇಲಿನ ಸೀಟ್ ಮುರಿದು ಕಳವು ಮಾಡಿದ್ದರು.

ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಕಂಪನಿಯ ಕೆಲ ಸಿಬ್ಬಂದಿಗಳನ್ನು ಸಹ ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದ ತಳುಕು ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆದ್ರೆ ಕಂಪನಿಯಲ್ಲಿ ಕಳುವಾಗಿದ್ದ ಹಣ ಕಂಪನಿಯ ಹಿಂಭಾಗದ ಪೊದೆಯ ಸಮೀಪ ಹಣ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಧಾವಿಸಿದ ಸಿಪಿಐ ಮಂಜುನಾಥ್ ಹಾಗೂ ಎಸ್ಐ ಸತೀಶನಾಯ್ಕ್ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಹಣವನ್ನು ಕಂಡ ಕೆಲವರು ಆಶ್ಚರ್ಯಗೊಂಡು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದಾಗ ಸ್ಥಳಕ್ಕೆ ಬಂದ ಚಳ್ಳಕೆರೆ CPI ಮಂಜುನಾಥ್ ನಲವಾಗಲು ಹಾಗೂ ಸಿಬ್ಬಂದಿ ಹಣವನ್ನ ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ. ಸಿಕ್ಕಿರುವ ಹಣ ಎಷ್ಟು ಎಂದು ಇನ್ನೂ ನಿಖರವಾಗಿ ಗೊತ್ತಾಗದೆ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಮಾಕ್ಷಮ ಹಣ ಎಣಿಕೆ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೀಗ ದಿಲೀಪ್ ಬ್ಯುಲ್ಡ್ ಕಾನ್ ಕಚೇರಿ ಹಿಂಭಾಗದ ಜಮೀನಿನಲ್ಲಿ ಪೊದಯ ಸಮೀಪ ರೂ. 50,100 ಹಾಗೂ 2 ಸಾವಿರ ಮುಖಬೆಲೆಯ ಪತ್ತೆಯಾಗಿದೆ. ಹೀಗಾಗಿ ಯಾರೋ ಕಳ್ಳರೇ ಈ ಹಣವನ್ನ ಬಿಸಾಡಿ ಹೋಗಿರುವ ಅನುಮಾನ ವ್ಯಕ್ತವಾಗಿದೆ.

Also read:
ಏನೂ ಅರಿಯದ ಅಜ್ಜಿಗೆ ಮೋಸದಿಂದ ಕೋಟ್ಯಂತರ ಬೆಲೆ ಬಾಳೋ ಭೂಮಿ ಬರೆಸಿಕೊಂಡು ಪರಾರಿಯಾದ ಮೊಮ್ಮಗಳು!!