ನೋಟು ಕೊಟ್ಟರೂ ಬಸ್ ಪಾಸ್ ಸಿಗಲ್ಲ…!! ಯಾಕೆ ಗೊತ್ತಾ ?

0
900

ಬೆಂಗಳೂರು: ಕೇಂದ್ರ ಸರ್ಕಾರ 500 ಹಾಗೂ 1000ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮಹಾನಗರ ಸಾರಿಗೆ ಸಂಸ್ಥೆಯು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಸಿಕ ಪಾಸ್‍ಗಳನ್ನು ವಿತರಿಸಲಿದೆ.

ಇನ್ನು ಮುಂದೆ ಮಾಸಿಕ ಬಸ್ ಪಾಸ್ ಪಡೆಯುವವರು ಎಟಿಎಂ ಕಾರ್ಡ್ ಮೂಲಕವೇ ಪಡೆಯಬಹುದು ಎಂದು ತಿಳಿಸಿದೆ. ಎಟಿಎಂ ಮುಂದೆ ಕ್ಯೂ ನಿಂತು ಹಣ ಡ್ರಾ ಮಾಡಿ ಪಾಸ್ ಖರೀದಿಸಬೇಕಾದ ಅಗತ್ಯವನ್ನು ಸಂಸ್ಥೆ ತಪ್ಪಿಸಿದೆ.

ಲಕ್ಷಾಂತರ ಜನರ ಪ್ರಯಾಣಿಕರು ಪ್ರತಿ ನಿತ್ಯ ಬಿಎಂಟಿಸಿಯನ್ನೇ ನೆಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಸುಮಾರು 6 ಕೋಟಿ ರೂ. ಮೊತ್ತದ ಮಾಸಿಕ್ ಪಾಸ್ ಗಳು ವಿತರಣೆಯಾಗುತ್ತಿವೆ.

ನೋಟು ನಿಷೇಧದಿಂದಾಗಿ ಚಿಲ್ಲರೆ ಸಮಸ್ಯೆ ಖಂಡಿತ ಕಾಡುತ್ತದೆ ಆದ್ದರಿಂದ ಡೆಬಿಟ್ ಹಾಗು ಕ್ರೆಡಿಟ್ ಸ್ವೈಪ್ ಯಂತ್ರಗಳನ್ನು ಬಿಎಂಟಿಸಿಯ ಹಲವು ಕೇಂದ್ರಗಳಲ್ಲಿ ಅಳವಡಿಸಲಾಗಿದೆ.

ಇದೀಗ ಚಿಲ್ಲರೆ ಸಮಸ್ಯೆ ಮತ್ತು ನೋಟು ನಿಷೇಧ ಸಮಸ್ಯೆ ನಾಗರಿಕಕರನ್ನು ಕಾಡದಂತೆ ನಗರದ 10 ಟಿಟಿಎಂಸಿ ಸೇರಿ 56 ಪ್ರಮುಖ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಸ್ವೈಪಿಂಗ್ ಯಂತ್ರಗಳನ್ನು ಸ್ಥಾಪಿಸಿದೆ. ಯಾವ ಯಾವ ನಿಲ್ದಾಣಗಳಲ್ಲಿ ಸ್ವೈಪಿಂಗ್ ಯಂತ್ರವಿದೆ?

ಶಿವಾಜಿನಗರ ಬಸ್ ನಿಲ್ದಾಣ, ದೇವನಹಳ್ಳಿ, ಹೆಸರಘಟ್ಟ, ಕೆ.ಆರ್.ಮಾರ್ಕೆಟ್, ನೆಲಮಂಗಲ, ಸರ್ಜಾಪುರ, ಕುಮಾರಸ್ವಾಮಿ ಲೇಔಟ್, ಜಾಲಹಳ್ಳಿ ಕ್ರಾಸ್, ಜೈ ಭೀಮಾನಗರ, ಪೀಣ್ಯ 2ನೇ ಹಂತ, ಕೆ.ಆರ್.ಪುರಂ, ಯಲಹಂಕ, ವಿದ್ಯಾರಣ್ಯಪುರ, ಬಸವೇಶ್ವನಗರ ಸೇರಿ 10 ಟಿಟಿಎಂಸಿ ಕೇಂದ್ರಗಳಲ್ಲಿ ಸ್ವೈಪಿಂಗ್ ಯಂತ್ರ ಲಭ್ಯವಿದೆ.