ಎಲೆ ಕೋಸುನಲ್ಲಿದೆ ಸಮೃದ್ಧ ವಿಟಮಿನ್‍ಗಳು

0
720

*ಎಲೆಕೋಸನ್ನು ಸಣ್ಣಗೆ ಹೆಚ್ಚಿ ಮಿತವಾಗಿ ಬೇಯಿಸಿ ಬಳಸಬೇಕು. ಎಲೇಕೋಸಿನ ಒಳಭಾಗದ ಎಲೆಗಳಿಗಿಂತ ಹೊರಭಾಗದ ಎಲೆಗಳಲ್ಲಿ ಜೀವಸತ್ವಗಳು ಹೆಚ್ಚು. ಆದ್ದರಿಂದ ಹೊರ ಹೊರ ಭಾಗದ ಎಲೆಗಳನ್ನು ತೆಗೆದು ಎಸೆಯಬಾರದು.

*ಎಲೆಕೋಸನ್ನು ಮಿತವಾಗಿ ಉಪಯೋಗಿಸಬೇಕು. ಹೊಟ್ಟೆ ಹುಣ್ಣು. ವಸಡಿನಿಂದಾಗುವ ರಕ್ತಸ್ರಾವ. ಮೂಲವ್ಯಾಧಿ, ಮೈ ಕಡಿತ (ನವೆ) ಇತ್ಯಾದಿ ರೋಗ ಹೊಂದಿರುವವರು ನಿಗದಿತ ಪ್ರಮಾಣದಲ್ಲಿ ಎಲೆಕೋಸು ಸೇವಿಸಿದರೆ ಗಮನಾರ್ಹ ಸುಧಾರಣೆ ಕಂಡುಬರುವುದು.

* ಇದರಲ್ಲಿ ಕ್ಯಾನ್ಸರನ್ನು ತಡೆಯುವ ಹಲವಾರು ಪೋಷಕಾಂಶಗಳು ಇವೆ. ಮುಖ್ಯಾವಾಗಿ ಡಿಂಡೊಲಿಮೀಥೆನ್ ( ಡಿಐಎಮ್), ಸಿನಿಗ್ರಿನ್, ಲುಪಿಯಲ್, ಸಲ್ಫರಫೇನ್ ಮತ್ತು ಇಂಡೋಲ್ -3 ಕಾರ್ಬಿನೊಲ್ (13C) ಹೂಕೋಸಿನಲ್ಲಿ ಹೆಚ್ಚಾಗಿ ಇದೆ. ಅದರಲ್ಲಿಯು ಕ್ಯಾನ್ಸರನ್ನು ಬರದಂತೆ ತಡೆಯುವಲ್ಲಿ ಸಲ್ಫರಫೇನ್ ಮತ್ತು 13C ಅಂಶಗಳು ಕ್ಯಾನ್ಸರ್ ಬರದಂತೆ ತಡೆಯುತ್ತವೆ.

* ಇದರಲ್ಲಿರುವ ಸಮೃದ್ಧ ವಿಟಮಿನ್ ಸಿಯು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಫ್ರೀ ರಾಡಿಕಲ್ ಗಳನ್ನು ಸಹ ಇದು ಹದ್ದು ಬಸ್ತಿನಲ್ಲಿಟ್ಟಿರುತ್ತದೆ.

* ಉರಿಯೂತದಿಂದ ನಿವಾರಣೆ ಒದಗಿಸುವ ಸಾಧನ ಇದರಲ್ಲಿರುವ ಸಮೃದ್ಧ ಅಮೈನೊ ಆಮ್ಲಗಳು ಉರಿಯೂತದ ಮೇಲೆ ಪ್ರಭಾವ ಬೀರಿ ಇಲ್ಲವಾಗಿಸುತ್ತವೆ.

* ಕಣ್ಣಿನ ಪೊರೆಯನ್ನು ನಿವಾರಿಸುತ್ತದೆ ಎಲೆಕೋಸಿನಲ್ಲಿರುವ ಬೀಟಾ ಕೆರೊಟಿನ್ ಕಣ್ಣಿನ ರಕ್ಷಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಇದು ಮ್ಯಾಕುಲರ್ ಡಿಜನರೇಷನ್ ಉಂಟಾಗದಂತೆ ಕಾಪಾಡುತ್ತದೆ. ಆಗಾಗಿ ಕಣ್ಣಿನ ಪೊರೆ ಉಂಟಾಗುವುದಿಲ್ಲ.

* ತೂಕ ಇಳಿಸುವಲ್ಲಿ ನೆರವಾಗುತ್ತದೆ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಆಹಾರವಾಗಿದೆ. ಇಡೀ ಒಂದು ಕಪ್ ಎಲೆಕೋಸಿನಲ್ಲಿ ಕೇವಲ 33 ಕ್ಯಾಲೋರಿ ಮಾತ್ರವಿರುತ್ತದೆ. ಹಾಗಾಗಿ ಎಲಕೋಸನ್ನು ಸೇವಿಸುವುದರಿಂದ ಯಾವುದೇ ರೀತಿಯಲ್ಲೂ ನೀವು ದಪ್ಪಗಾಗುವ ತೊಂದರೆ ಇರುವುದಿಲ್ಲ.

* ಮಲಬದ್ಧತೆಯಿಂದ ಪರಿಹಾರವನ್ನೊದಗಿಸುತ್ತದೆ ಇದರಲ್ಲಿ ಯಥೇಚ್ಛವಾಗಿರುವ ನಾರಿನಂಶಗಳು ನಮ್ಮ ಜೀರ್ಣಶಕ್ತಿಯನ್ನು ಉದ್ಧೀಪನಗೊಳಿಸುತ್ತವೆ. ಹಾಗಾಗಿ ಮಲಬದ್ಧತೆಯು ನಮ್ಮನ್ನು ಭಾದಿಸುವುದಿಲ್ಲ.

* ತ್ವಚೆಯ ಅತ್ಯುತ್ತಮ ರಕ್ಷಕ ಎಲೆಕೋಸಿನಲ್ಲಿ ಯಥೇಚ್ಛವಾಗಿರುವ ಆಂಟಿ ಆಕ್ಸಿಡೆಂಟ್‍ಗಳು ತ್ವಚೆಯನ್ನು ಫ್ರೀರಾಡಿಕಲ್ಸ್ ಗಳಿಂದ ರಕ್ಷಿಸುತ್ತವೆ. ಇವುಗಳು ನಮ್ಮ ತ್ವಚೆಯು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ.