ಏ.1 ರಿಂದ ದೇನಾ, ಬರೋಡಾ ಮತ್ತು ವಿಜಯ ಬ್ಯಾಂಕ್ ವಿಲೀನ; ನೀವು ಈ ಬ್ಯಾಂಕ್-ಗಳಲ್ಲಿ ಖಾತೆ ಹೊಂದಿದ್ದರೆ ನೀವು ಈ ಮಾಹಿತಿಯನ್ನು ತಪ್ಪದೇ ಓದಲೇಬೇಕು!!

0
949

ದೇಶದಲ್ಲಿ ಅಲೆಯನ್ನು ಮೂಡಿಸಿದ ದೇನಾ, ಬರೋಡಾ ಮತ್ತು ವಿಜಯ ಬ್ಯಾಂಕ್ ವಿಲೀನಕ್ಕೆ ದೇಶದ ತುಂಬೆಲ್ಲ ಬಾರಿ ವಿರೋಧಗಳು ಕೇಳಿ ಬಂದಿದವು. ಈ ವಿಷಯವಾಗಿ ಬ್ಯಾಂಕಿಗ್ ಸಂಘಟನೆಗಳು ಹೋರಾಟಕ್ಕೆ ಇಳಿದು ಕೇಂದ್ರ ಸರ್ಕಾರ ವಿರುದ್ದವಾಗಿ ರಸ್ತೆ ಗಿಳಿದಿದ್ದವು. ಇದೆಲ್ಲ ಮುಷ್ಕರ ಹಾಗು ಹಲವು ವಿರೋಧಗಳ ನಡುವೆ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಮಹತ್ವದ ನಿರ್ಧಾರಕ್ಕೆ ಮುಂದಾಗಿ ವಿಲೀನಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಬ್ಯಾಂಕಿಂಗ್ ವಿಲೀನ ಪ್ರಕ್ರಿಯೆ ನಡೆಯಲಿದ್ದು ಗ್ರಾಹಕರು ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು ಅಂತ ಈ ಮಾಹಿತಿ ನೋಡಿ.

ಎಪ್ರಿಲ್ 1 ರಿಂದ ವಿಲೀನ ಪ್ರಕ್ರಿಯೆ?

Also read: ನೊಬೆಲ್‌ ಶಾಂತಿ ಪುರಸ್ಕಾರಕ್ಕೆ 16 ವರ್ಷದ ಬಾಲಕಿ ‘ಗ್ರೇಟಾ ಥನ್ಬರ್ಗ್‌’ ಹೆಸರು ಶಿಫಾರಸು..

ಕೇಂದ್ರ ಸರ್ಕಾರದ ನಿಯಮದಂತೆ ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳೀಸಲು ಕೇಂದ್ರ ಹಣಕಾಸು ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ನ್ನು ಹಲವು ಸಹವರ್ತಿ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಗಿದೆ. ಅದರಂತೆ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಗಳನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಮಾಹಿತಿಯಂತೆ ಬರುವ ಏಪ್ರಿಲ್ 1ನೇ ತಾರೀಕಿನಿಂದ ಪ್ರಕ್ರಿಯೆ ಶುರುವಾಗಲಿದೆ.

ಗ್ರಾಹಕರಿಗೆ ಗೋದಲ?

ಎಸ್ಬಿಐ ಅದರ ಸಹವರ್ತಿ ಬ್ಯಾಂಕುಗಳೊಂದಿಗೆ ವಿಲೀನವಾದಂತೆ ಏಪ್ರಿಲ್ 1ರಂದು ದೇಶದ ಮೂರು ಬ್ಯಾಂಕುಗಳು ವಿಲೀನವಾಗಲಿವೆ. ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಇದರಿಂದ ಜನಸಾಮಾನ್ಯರ ಕೆಲಸ ಸ್ವಲ್ಪ ಹೆಚ್ಚಾಗಲಿದೆ. ಗ್ರಾಹಕರ ಪಾಸ್ಬುಕ್, ಚೆಕ್ಬುಕ್, ಎಟಿಎಂನಲ್ಲಿ ಬದಲಾವಣೆಯಾಗಲಿದೆ. ಹೀಗಾಗಿ ಗ್ರಾಹಕರು ಭಯಪಡುವ ಅಗತ್ಯವಿಲ್ಲ. ಸೇವೆಯಲ್ಲಿ ಯಾವುದೇ ತರಹದ ಸಮಸ್ಯೆ ಆಗುವುದಿಲ್ಲ. ವಿಲೀನದ ಹಿನ್ನೆಲೆಯಲ್ಲಿ ದೇನಾ ಮತ್ತು ವಿಜಯ ಬ್ಯಾಂಕ್ ಎಲ್ಲಾ ನೌಕರರು ಬ್ಯಾಂಕ್ ಆಫ್ ಬರೋಡಾಗೆ ವರ್ಗಾವಣೆ ಆಗಲಿದ್ದಾರೆ ಎಂದು ತಿಳಿಸಿದೆ.

ಗ್ರಾಹಕರ ಮಾಡಬೇಕಾದ ಬದಲಾವಣೆ?

Also read: ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಸುಮಲತಾ-ಎಸ್‌ಎಂ ಕೃಷ್ಣ ಭೇಟಿ; ಬಿಜೆಪಿಯಿಂದ ಸಿಗಲಿದೆಯಾ ಬೆಂಬಲ?

ವಿಲೀನ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಈ ಎರಡು ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬ್ಯಾಂಕಿನ ಗ್ರಾಹಕರು ದಾಖಲಾತಿ ಕೆಲಸಗಳನ್ನು ಮಾಡಬೇಕಾಗುತ್ತದೆ. ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಹೊಸ ಚೆಕ್ ಬುಕ್ ಹಾಗೂ ಪಾಸ್ ಬುಕ್ ಪಡೆಯಬೇಕಾಗುತ್ತದೆ. ಈ ಎಲ್ಲ ಕಾರ್ಯಚಟುವಟಿಕೆಗಳ ಬಗ್ಗೆ ಬ್ಯಾಂಕ್ ಮಾಹಿತಿ ನೀಡುವುದರ ಜೊತೆಗೆ ಗ್ರಾಹಕರಿಗೆ ಸಂಪೂರ್ಣ ಸಮಯ, ಸಹಕಾರ ನೀಡಲಿದೆ. ಮೂರು ಬ್ಯಾಂಕು ಗಳ ವಿಲೀನದಿಂದ ಗ್ರಾಹಕರಿಗೆ ಉತ್ತಮವಾದ ಸೇವೆ ಸಿಗಲಿದ್ದು, ಬ್ಯಾಂಕಿಂಗ್ ನೆಟ್ವರ್ಕ್ ದೊಡ್ಡದಾಗಲಿದೆ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.