ನಿಮ್ಮ ಮನೆ ಮತ್ತು ಬೆಡ್ ರೂಮ್-ಗಳಲ್ಲಿ ಬಳಸುವ ಈ ವಸ್ತುಗಳಿಂದ ಕ್ಯಾನ್ಸರ್ ರೋಗ ಬರುತ್ತಿದೆ; ಇಂತಹ ವಸ್ತುಗಳಿಂದ ದೂರವಿರಿ..

0
2270

ಕ್ಯಾನ್ಸರ್ ಎಲ್ಲಾ ವಯೋಮಾನದವರಿಗೆ ಗಂಡಾಂತರಕಾರಿ ರೋಗವೆನಿಸಿದೆ, ಇದು ವಯಸ್ಸು ಹೆಚ್ಚಾದಂತೆ ಕಾಡುವ ಕಾಯಿಲೆಯಾಗಿದೆ. ವಿಶ್ವಾದ್ಯಂತ 2007ರಲ್ಲಿ ಒಟ್ಟು ಮಾನವ ಸಾವಿನಲ್ಲಿ 13%ರಷ್ಟು ಕ್ಯಾನ್ಸರ್ ನಿಂದ ಉಂಟಾಗಿದೆ. ಇಂತಹ ಕ್ಯಾನ್ಸರ್ ಖಾಯಿಲೆಗೆ ಸಾಮಾನ್ಯವಾದ ಕಾರಣವೆಂದರೆ ವಂಶವಾಹಿನಿಯಲ್ಲಿನ ಅಂಗಾಂಶ ಕೋಶಗಳಲ್ಲಿನ ಪರಿವರ್ತನವು ಅಸ್ವಾಭಾವಿಕತೆಯನ್ನು ತೋರಿಸುತ್ತವೆ. ಕ್ಯಾನ್ಸರ್ ರೋಗಕ್ಕೆ ಇಂತಹ ಅಸ್ವಾಭಾವಿಕ ಕೆಟ್ಟ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಕಾರಕವೆನಿಸಿವೆ. ಉದಾಹರಣೆಗೆ ತಂಬಾಕು ಮತ್ತು ಧೂಮಪಾನ ,ವಿಕಿರಣತೆ, ರಸಾಯನಿಕಗಳು, ಅಥವಾ ಸೋಂಕಿನ ಮೂಲಗಳು ಇಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದು. ಇನ್ನೂ ಕೆಲವೊಂದು ಕಾರಣಗಳು ಅಂದರೆ ವಂಶವಾಹಿನಿಯ Abnormalities DNA ದ ಪ್ರತಿಕೃತಿಗಳು,ಅಥವಾ ವಂಶಪಾರಂಪರಿಕವಾಗಿ ಈ ಜೀವಕೋಶಗಳು ಹುಟ್ಟಿನಿಂದಲೇ ಬರುವ ಸಾಧ್ಯತೆಯು ಈ ಕ್ಯಾನ್ಸರ್ ಗೆ ಮೂಲಕಾರಣವಾಗಿದೆ. ಇವೆಲ್ಲವೂ ಮೊದಲಿಂದ ಬಂದ ಕಾರಣಗಳಾದರೆ. ನಿಮ್ಮ ಮನೆಯಲ್ಲಿ ಉಪಯೋಗಿಸುವ ವಿಷಯುಕ್ತವಾದ ವಸ್ತುಗಳ ಉಪಯೋಗದಿಂದ ಈ ಕ್ಯಾನ್ಸರ್ ಬರುತ್ತಿದೆ. ಈ ವಿಷಯ ಆಶ್ಚರ್ಯಕರ ವಾದರೂ ಕಟ್ಟುಸತ್ಯವಾಗಿದೆ.

Also read: ದೀರ್ಘಕಾಲದ ಯಕೃತ್ತಿನ ರೋಗ ಲಕ್ಷಣಗಳು ಮತ್ತು ಪರಿಣಾಮಗಳಿಗೆ ಸರಳವಾದ ಮನೆಮದ್ದು; ಆಹಾರ ಕ್ರಮಗಳು ಇಲ್ಲಿದೆ ನೋಡಿ..

ಹೌದು ನಿಮ್ಮ ಮನೆಯಲ್ಲಿರುವ ಇಲ್ಲ ನೀವು ನಿತ್ಯವೂ ಬೆಡ್ ರೂಮ್ ನಲ್ಲಿ ಉಪಯೋಗಿಸುವ ವಸ್ತುಗಳು ನಿಮ್ಮಗೆ ಕ್ಯಾನ್ಸರ್ ಕಾರಕವಾಗಿವೆ ಅಂತಹ ವಸ್ತುಗಳು ಇಲ್ಲಿವೆ ನೋಡಿ.

ವಿದ್ಯುನ್ಮಾನ, ಇಲೆಕ್ಟ್ರಾನಿಕ್ ಸಾಧನಗಳು:


Also read: ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಸೇವಿಸಿದರೆ ಈ ಹತ್ತು ಆರೋಗ್ಯ ಲಾಭಗಳನ್ನು ಪಡೆಯುತ್ತೀರ!

ಪ್ರತಿಯೊಬ್ಬರೂ ಮಲಗುವಾಗ Mobiles, headphones ಬಳಕೆ ಸಾಮಾನ್ಯವಾಗಿದೆ ತಡರಾತ್ರಿಯ ವರೆಗೂ ಬಳಕೆ ಮಾಡುವುದು ದಿಬ್ಬಿನಹಿಂದೆ ಇಲ್ಲ ಸಮೀಪವೇ ಇಟ್ಟುಕೊಂಡು ಮಲಗುತ್ತಾರೆ ಮತ್ತು Tv, Ac, computers ಇಂತಹ ಬೇರೆ ತರಹದ ವಿದ್ಯುನ್ಮಾನ ಸಾಧನಗಳೂ ಇರುತ್ತವೆ. ಈ ವಸ್ತುಗಳು ನಮ್ಮನ್ನು ವಿದ್ಯುತ್‌ಕಾಂತೀಯ ತರಂಗಗಳಿಗೆ ಹತ್ತಿರವಾಗಿ ಉಸಿರಾಟದಲ್ಲಿ ಬೆರತು ಕ್ಯಾನ್ಸರ್ ಅಂತಹ ರೋಗಗಳನ್ನು ಹುಟ್ಟುಹಾಕಲು ಸಹಕಾರಿಯಾಗುತ್ತೆ. ಆದರಿಂದ ಇವೆಲ್ಲಗಳ ಬಳಕೆಯಿಂದ ಆದಷ್ಟು ಸಮಯ ಅಂದರೆ ರಾತ್ರಿ ಮಲಗುವಾಗೆ ದೂರ ವಿರುವುದು ಒಳ್ಳೆಯದು.

ಸುವಾಸನೆ ಬರುವ ಸೆಂಟ್:

Also read: ಹಿಮ್ಮಡಿ ಬಿರುಕಿನಿಂದ ನೋವು ಅನುಭವಿಸುತ್ತಿದ್ದಿರ..? ಹಾಗಾದ್ರೆ ನಾವು ಹೇಳುವ ರೀತಿ ನಿಂಬೆಹಣ್ಣನು ಬಳಸಿ ಕೆಲವೇ ದಿನದಲ್ಲಿ ನಿಮ್ಮ ಹಿಮ್ಮಡಿ ಕೋಮಲವಾಗುತ್ತೆ…

ಮನೆಯಲ್ಲಿ ಇಲ್ಲ ಮಲಗುವ ಬೆಡ್‌ರೂಮ್,ಲಿವಿಂಗ್ ರೂಮ್, ಬಾತ್‌ರೂಮ್….ಅಷ್ಟೇ ಏಕೆ,ಕಾರುಗಳು ಮತ್ತು ತಾವು ಕೆಲಸ ಮಾಡುವ ಸ್ಥಳದಲ್ಲಿಯೂ ಅಲ್ಲಿ ಏರ್ ರಿಫ್ರೆಷನರ್‌ಗಳ ಬಳಕೆ ಸಾಮಾನ್ಯವಾಗಿದೆ ಇವುಗಳು ಗಾಳಿಯನ್ನು ತಾಜಾ ಆಗಿರಿಸುವ ಏರ್ ರಿಫ್ರೆಷನರ್‌ಗಳ ಸುವಾಸನೆ ರಾಸಾಯನಿಕವಾಗಿದೆ. ಇದರಿಂದ ನೀವು ನಿತ್ಯವೂ ಬಳಕೆ ಮಾಡುವ ರಾಸಾಯನಿಕ ವಸ್ತು ಕ್ಯಾನ್ಸರ್ ಕಾರಕವಾಗಿದು ಇದನ್ನು ಬಳಕೆ ಮಾಡದೆ ಇರುವುದು ಒಳ್ಳೆಯದು.

ಹತ್ತಿಯಿಂದ ತಯಾರಿಸಿದ ತಲೆದಿಂಬು ಮತ್ತು ಬೆಡ್’ಸಿಟ್:

Also read: ಮಹಿಳೆಯರು ಕಿವಿಗೆ ಚುಚ್ಚುವ ಹಿಂದಿರುವ ವೈಜ್ಞಾನಿಕ ಅರಿವು ಮತ್ತು ಲಾಭಗಳನ್ನು ಕೇಳಿದ್ರೆ ಪ್ರತಿಯೊಬ್ರು ಕಿವಿ ಚುಚ್ಚಿಕೊಳ್ತಿರ!!

ಚಿಕ್ಕ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಮಲಗುವಾಗೆ ಮೆತ್ತೆನೆಯ ತಲೆದಿಂಬು ಬೇಕೇಬೇಕು ಇವುಗಳನ್ನು ತಯಾರಿಸಲು ಬಳಕೆ ಮಾಡುವ ಹತ್ತಿಯನ್ನು ಬೆಳೆಯಲು ಅತಿಯಾಗಿ ಕೀಟನಾಶಕಗಳನ್ನು ಬಳಸುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಹತ್ತಿಯನ್ನು ರಕ್ಷಿಸಲು ಕಳೆನಾಶಕವನ್ನೂ ಸಿಂಪಡಿಸಲಾಗುತ್ತದೆ. ಈ ಕಳೆನಾಶಕಗಳು ಗ್ಲೈಫೋಸೇಟ್ ಎಂಬ ರಾಸಾಯನಿಕವನ್ನು ಒಳಗೊಂಡಿದ್ದು, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ.

ಕಲರ್ ಕಲರ್ ಹಾಸಿಗೆ, ಕರ್ಟನ್ ಬಳಕೆ:

Also read: ಉಗುರು ಕಚ್ಚೋದ್ರಿಂದ ಯಾವ ಖಾಯಿಲೆ ಬರುತ್ತೆ..? ಉಗುರು ಕಚ್ಚು ವವರ ವ್ಯಕ್ತಿತ್ವ ಹೇಗಿರುತ್ತೆ ನೋಡಿ…

ಮನೆಯಲ್ಲಿ , ಬೆಡ್‌ರೂಮ್‌ನಲ್ಲಿ ಸುಂದರವಾಗಿ ಕಾಣಲು ಮತ್ತು ಬೆಚ್ಚೆಗೆ ಇರಲು ಬಳಸುವ ಹಾಸಿಗೆಯನ್ನು ತಯಾರಿಸುವಾಗ ಅವುಗಳ ಗುಣಮಟ್ಟವನ್ನು ಬೆಂಕಿಯಿಂದ ರಕ್ಷಿಸಲು ರಾಸಾಯನಿಕ ಬಳಕೆ ಮಾಡಿರುತ್ತಾರೆ ಇಂತಹ ಹಾಸಿಗೆ ಮತ್ತು ಪರದೆಗಳನ್ನು ಬಳಸುವುದರಿಂದ ಮಿದುಳಿನ ಬೆಳವಣಿಗೆಗೆ ತಡೆಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿದ್ದು, ಜೊತೆಗೆ ಹಾರ್ಮೋನ್‌ಗಳಲ್ಲಿ ವ್ಯತ್ಯಯಗಳನ್ನೂ ಉಂಟು ಮಾಡಬಲ್ಲವು. ಹಾಗೆಯೇ ಕ್ಯಾನ್ಸರ್ ಅಂತಹ ಮಾರಕ ರೋಗಗಳಿಗೆ ಬರಲು ಸಹಾಯಕವಾಗಿದೆ. ಇದರಿಂದ ಉತ್ತಮವಾದ ನೈಸರ್ಗಿಕ ಕಚ್ಚಾವಸ್ತುಗಳಿಂದ ತಯಾರಿಸಿದ ಹಾಸಿಗೆ ಬಳಕೆ ಸರಿಯಾಗಿದೆ.

ಹೆಚ್ಚಿನ ಆಕರ್ಷಣೆವುಳ್ಳ ಬಣ್ಣಗಳ ಬಳಕೆ:

Also read: ಬಿಸಿ ಹಾಲು-ಬೆಲ್ಲ ಹಾಕಿ ಕುಡಿದರೆ ಇಷ್ಟೊಂದೆಲ್ಲ ಪ್ರಯೋಜನ ಇದೆ ಅಂತ ಗೊತ್ತಾದ್ರೆ, ಇವಾಗ್ಲಿಂದಾನೆ ಕುಡಿಯೋಕ್ಕೆ ಶುರು ಮಾಡ್ತೀರ!

ಮನೆ, ಬೆಡ್ ರೂಮ್ ಸುಂದರವಾಗಿ ಕಾಣಲು ಗೋಡೆಗೆ ಬಳೆಯಿವ ಬಣ್ಣದ ವಾಸನೆಯಲ್ಲಿ ಬಾಷ್ಪಶೀಲ ಆರ್ಗಾನಿಕ್ ಸಂಯುಕ್ತ ಗಳನ್ನು ಒಳಗೊಂಡಿದೆ ಇದು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಪೇಂಟರ್‌ಗಳು,ಕಲಾವಿದರು ಮತ್ತು ಇತರ ಕಾರ್ಮಿಕರು ಶ್ವಾಸಕೋಶ,ಮೂತ್ರಕೋಶ,ಬಾಯಿ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗಳಿಗೆ ತುತ್ತಾಗುವ ಅಪಾಯವು ಹೆಚ್ಚಾಗಿರುತ್ತದೆ. ಇಂತಹವರು ನಾನ್‌ಲಿಂಪೊಸೈಟಿಕ್ ಲ್ಯೂಕೇಮಿಯಾಕ್ಕೂ ಗುರಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಅಪಾಯದಿಂದ ದೂರವಿರಲು ವಿಒಸಿಯೇತರ ಬಣ್ಣಗಳನ್ನು ಬೆಡ್‌ರೂಮ್‌ಗೆ ಬಳಸುವುದು ಒಳ್ಳೆಯದು.

ಕೃತಕ ಚರ್ಮದ ವಸ್ತುಗಳು:

Also read: https://kannada.thenewsism.com/permanent-relief-for-half-headache/

ಮನೆಯಲ್ಲಿ ಬಳಸುವ ಪೀಠೋಪಕರಣಗಳು ಮತ್ತು ಕೃತಕ ಚರ್ಮದಿಂದ ಹೆಚ್ಚು ಸುಂದರವಾಗಿ ಕಾಣುತ್ತೆ ಆ ಕಾರಣಕ್ಕೆ ಪ್ರತಿಯೊಬ್ಬರೂ ಈ ಇಂತಹ ವಸ್ತುಗಳನ್ನು ಇಷ್ಟಪಡುತ್ತಾರೆ ಆದರೆ ದುರಾದೃಷ್ಟ ಅಂದರೆ ಚರ್ಮದ ತಯಾರಿಕೆಯಲ್ಲಿ ಪಾಲಿವಿನೈಲ್ ಕ್ಲೋರೈಡ್(ಪಿವಿಸಿ) ಎಂಬ ಅಪಾಯಕಾರಿ ಪ್ಲಾಸ್ಟಿಕ್ ಪಾಲಿಮರ್ ಅನ್ನು ಬಳಸಲಾಗುತ್ತದೆ. ಇದು ಅಪಾಯಕಾರಿಯಾದ ಇತರ ರಾಸಾಯನಿಕಗಳನ್ನೂ ಒಳಗೊಂಡಿರುತ್ತದೆ. ಆದರಿಂದ ನ್ಯೈಸರ್ಗಿಕವಾದ ಮನೆಯ ವಸ್ತುಗಳನ್ನು ಬಳಸುವುದು ಒಳ್ಳೆಯದು.