ಸಾಮಾನ್ಯ ಕನ್ನಡಿಗ ಕೃಷಿಕನ ಬಾನ್ನೆತ್ತರದ ವಿಮಾನ ಹಾರಾಟ

0
1447

ಕ್ಯಾಪ್ಟನ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನವರು. ಅವರ ತಂದೆ ಕನ್ನಡ ಶಾಲೆಯ ಮೇಷ್ಟ್ರು. ಗೋಪಿನಾಥ್ ಕೂಡ ಅದೇ ಹಳ್ಳಿಯಲ್ಲಿ ಓದಿದರು. ಅಪ್ಪಟ ಗ್ರಾಮೀಣ ಪರಿಸರದಲ್ಲಿ ವಿದ್ಯಾರ್ಜನೆ. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ. ಹೈಸ್ಕೂಲು ಶಿಕ್ಷಣ ವಿಜಾಪುರದ ಸೈನಿಕ ಶಾಲೆಯಲ್ಲಿ. ಆನಂತರ ಪುಣೆಯ ಖಡಕ್ ವಾಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿ ಅಲ್ಲಿ ತರಬೇತಿ ಪಡೆದು ಭಾರತೀಯ ಸೇನೆಯನ್ನು ಸೇರಿದರು. ಅಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸಮರಾಂಗಣದಲ್ಲಿ ನಿಂತು ಹೋರಾಡಿದರು.

ನಂತರ ಹೊರಗಿನ ಪ್ರಪಂಚದ ಬೇರೇನಾದರೂ ಹುದ್ದೆಯನ್ನು ಹಾಗೂ ಪ್ರಯತ್ನವನ್ನು ಮಾಡುವ ಸಲುವಾಗಿ ಸೈನ್ಯವನ್ನು ಬಿಟ್ಟು ಹಳ್ಳಿಗೆ ವಾಪಸಾದರು ಆಗ ಗೋಪಿನಾಥರಿಗೆ 27 ವರ್ಷ  ಬದುಕಿನ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ .

ತಂದೆಯ ಜಮೀನು ಹೇಮಾವತಿ  ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಮುಳುಗಡೆಯಾಗಿತ್ತು ಇದಕ್ಕೆ ಪರಿಹಾರವಾಗಿ ಸರ್ಕಾರದಿಂದ ಬಂದ ಬಂಜರು ಭೂಮಿ ಊರಿಂದ ಆಚೆ ಇರುವ ಮರುಳುಗಾಡೇ ಸರಿ ,ಆದರೂ ಛಲವನ್ನು ಬಿಡದ ಕ್ಯಾಪ್ಶನ್ ಅಲ್ಲಿಯೇ ಬಿಡು ಬಿಟ್ಟು ಗುಡಿಸಲು ಕಟ್ಟಿಕೊಂಡು ತೆಂಗಿನ ಸಸಿ ನೆಡುವ ಕೃಷಿಯನ್ನು ಶುರು ಮಾಡಿಯೇ ಬಿಟ್ಟರು .

ಕರೆಂಟು ಇಲ್ಲದ ಆ ಜಾಗದಲ್ಲಿ ತಾವೇ ಸ್ವತಃ ನೀರನ್ನು ಹಾಕಿ ಸೊಂಪಾಗಿ ಗಿಡಗಳನ್ನು ಪೋಷಿಸಿದರು .ಎಷ್ಟೋ ಜನ ಬಂದು ಬುದ್ದಿ ಹೇಳಿದರು ಕೇಳದ ಇವರು ನಂತರ ಊಟ ,ತಿಂಡಿ , ದನ ಸಾಕುವುದು , ಒಂದಲ್ಲ ಎರಡಲ್ಲ ಸಾವಿರಾರು  ತೆಂಗಿನ ಸಸಿಗಳ ಪೋಷಣೆ ಎಲ್ಲವನ್ನು ತಾವೇ ಛಲಬಿಡದ ವಿಕ್ರಮನಂತೆ ಒಬ್ಬರೇ ಮಾಡಿದರು , ನಂತರ ಶುರುವಾಗಿದ್ದೇ ರೇಷ್ಮೆ ಕೃಷಿ , ಇದರ ಬಳಿಕ ರೇಷ್ಮೆ ಸಾಕಾಣಿಕೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದರು. ರೇಷ್ಮೆ ಕೃಷಿ ಮಾಡುವಾಗ ಸಾಮಾನ್ಯವಾಗಿ ರೇಷ್ಮೆ ಹುಳುಗಳ ಆಹಾರಕ್ಕೆಂದು ಹಿಪ್ಪುನೇರಳೆ ಗಿಡಗಳನ್ನು ಬೆಳೆಯುತ್ತಾರೆ. ಇದಕ್ಕಾಗಿ ಎಲ್ಲರೂ ನೆಲವನ್ನು ಉಳುಮೆ ಮಾಡುತ್ತಾರೆ. ಆದರೆ ಗೋಪಿನಾಥ್ ಹಾಗೆ ಮಾಡಲಿಲ್ಲ. ಬದಲಿಗೆ ತಮ್ಮ ಜಮೀನನ್ನೆಲ್ಲ ಸೊಪ್ಪು ಸದೆಗಳಿಂದ ಮುಚ್ಚಿದರು. ರೇಷ್ಮೆಹುಳುಗಳನ್ನು ಕಾಪಾಡಲು ಸೋಂಕುನಾಶಕ ಔಷಧವನ್ನು ಬಳಸಲಿಲ್ಲ. ರೇಷ್ಮೆ ಹುಳುಗಳನ್ನು ಸಂರಕ್ಷಿಸಲು ಅವರೇ ಅನೇಕ ಗಾಂವಟಿ ವಿಧಾನಗಳನ್ನು ಶೋಧಿಸಿದರು.

ಈ ಪ್ರಯೋಗದಿಂದ ರೊಲ್ಯಾಕ್ಸ್ ವಾಚ್ ಕಂಪನಿ  ಅವರಿಗೆ ರೊಲ್ಯಾಕ್ಸ್ ಪ್ರಶಸ್ತಿ ನೀಡಿತು, ಸುತ್ತಮುತ್ತ ಹಳ್ಳಿಗಳಲ್ಲಿ ಕ್ರಾಂತಿಕಾರಿ ಕೃಷಿಕನೆಂದೇ ಪ್ರಖ್ಯಾತಿ ಹೊಂದಿದರು ಇವರ ಪ್ರಯೋ ಗಾತ್ಮಕ ಕೃಷಿ  ಜನರಿಗೆ ಮೆಚ್ಚುಗೆಯಾಗಿತ್ತು

ಒಮ್ಮೆ ಅವರ ಬೈಕ್ ಕೆಟ್ಟು ಹೋಗಿರುತ್ತೆ ಅದನ್ನು ಸರಿಮಾಡಿಸಲು ಗೊರೂರಿನಿಂದ ಹಾಸನ ನಗರಕ್ಕೆ ಬೈಕ್ ಅನ್ನು ತಂದು ನಾನಾ ಕಷ್ಟಗಳನ್ನು ಎದುರಿಸುತ್ತಾರೆ ನಂತ ಕಾರಣ ತಿಳಿಯುತ್ತದೆ ಬೈಕ್ ಡೀಲರ್ಶಿಪ್ ನ ಕೊರತೆಯಿದೆ ಎಂದು ಆಗ ಶುರುವಾಗುವ ಯೋಚನೆಯೇ ರಾಯಲ್ ಎಂಫಿಎಲ್ಡ್  ಡೀಲರ್ ಶಿಪ್  ತೆಗೆದುಕೊಳ್ಳುವ  ಆಲೋಚನೆ ಆದರೆ ಈ ಯೋಜನೆ ಬಹಳ ದುಬಾರಿ ಸಾಮಾನ್ಯ ರೈತನಿಗೆ ಎಷ್ಟು ದುಡ್ಡು ಎಲ್ಲಿಂದ ಬಂದೀತು ? ಬ್ಯಾಂಕ್ನಲ್ಲಿ  ಪಂಪ್ಸೆಟ್ ಖರೀದಿಗೆ ಕಾಡಿ ಬೇಡಿದರು ಒಂದು ನಯಾ ಪೈಸೆ ಹುಟ್ಟಲ್ಲ ! ನೀರನ್ನು ಹೊತ್ತು ಗಿಡಗಳಿಗೆ ಹಾಯಿಸಲು ಕತ್ತೆಗಳನ್ನು ಸಾಕಿದರು .

ಬೈಕ್ ಡೀಲರ್‌ಶಿಪ್ ತೆಗೆದುಕೊಂಡ ಸಂದರ್ಭದಲ್ಲಿ ಪಕ್ಕದ ಕಟ್ಟಡ ಖಾಲಿ ಇತ್ತು. ಅಲ್ಲೊಂದು ಹೋಟೆಲನ್ನು ಏಕೆ ಆರಂಭಿಸಬಾರದೆಂದು ಸ್ವತಃ ಹೋಟೆಲಿಗರೂ ಆಗಿದ್ದ ಕಟ್ಟಡದ ಮಾಲೀಕರು ಹೇಳಿದರು. ಗೋಪಿನಾಥ್ ತಡಮಾಡಲಿಲ್ಲ. ಯಗಚಿ ಟಿಫಿನ್ಸ್’ ಹೆಸರಿನಲ್ಲಿ ಹೋಟೆಲನ್ನು ಸ್ಥಾಪಿಸಿದರು.

 

ನಂತರ ದನ ಕಟ್ಟಿದರು, ಡೇರಿ ಮಾಡಿದರು. ಕೋಳಿ ಫಾರ್ಮ್ ಶುರುಮಾಡಿದರು. ರೇಷ್ಮೆ ಸಾಕಿದರು. ತೆಂಗಿನ ಮಂಡಿ ಇಟ್ಟರು. ಬೈಕ್ ಡೀಲರ್ ಆದರು. ಸ್ಟಾಕ್ ಬ್ರೋಕರ್ ಆದರು, ನೀರಾವರಿ ಪಂಪ್‌ಸೆಟ್‌ಗಳ ಡೀಲರ್ ಆದರು. ಸಾವಯವ ಕೃಷಿಯಲ್ಲಿ ವ್ಯವಸಾಯ ಮಾಡಿದರು. ಕೈತೋಟ ವಿನ್ಯಾಸಕಾರರಾದರು. ಕೃಷಿ ಸಲಹಾ ಕೇಂದ್ರ ತೆರೆದರು. ರೈತರಿಗೆ ಮಾರ್ಗದರ್ಶನ ನೀಡುವ ಸಂಸ್ಥೆ ತೆರೆದರು.

ನಂತರ ಬೆಂಗಳೂರಿಗೆ ಬಂದ ಗೋಪಿನಾಥ್, ಡೆಕ್ಕನ್ ಹೆಲಿಕಾಪ್ಟರ್ ಸಂಸ್ಥೆಯನ್ನು ಸ್ಥಾಪಿಸಿದರು!

ಸಾಮಾನ್ಯನ ಅತಿ ಕಡಿಮೆ ದರದ ವಿಮಾನಯಾನಕ್ಕೆ ಅದು ನಾಂದಿ ಹಾಡಿತ್ತು .ಒಬ್ಬ ಸಾಮಾನ್ಯ ಕೃಷಿಕನ  ಅಸಾಮಾನ್ಯ ಕನಸಿನ ನನಸಿನ ಕ್ಷಣವದು ! ಇದಕ್ಕಿಂತ ಕಡಿಮೆ ಬೆಲೆಯ ಟಿಕೆಟ್ ವಿಶ್ವದಲ್ಲೇ ಇರಲಿಲ್ಲ.

ನಂತರದ ದಿನಗಳಲ್ಲಿ ಮಲ್ಯ ಒಡೆತನದ್ದಾಗಿದ್ದ ಕಿಂಗ್ಫಿಶರ್ ಏರ್ಲೈನ್ಸ್ ಸಂಸ್ಥೆಗೆ ಮಾರಿ ಬಂದ ದುಡ್ಡಲ್ಲಿ ಹಾಯಾಗಿರದೆ ಮತ್ತೊಂದು ಪರೀಕ್ಷೆಗೆ ಸಿದ್ಧವಾದರೂ ಅದುವೇ ಡೆಕ್ಕನ್ 360! ವಿಮಾನದ ಮೂಲಕ ಪಾರ್ಸಲ್ ಸೇವೆ!

ಒಬ್ಬ ಸಾಮಾನ್ಯ ರೈತ  ಸ್ವಂತ ಪರಿಶ್ರಮ ಹಾಗೂ ಯಾವುದೇ ಗಾಡ್ ಫಾದರ್ ಇಲ್ಲದೇ ವಿಶ್ವಕ್ಕೆ  ಮಾದರಿಯಾಗಿ

ಜೀವನ ನಡೆಸಿದ ಪರಿ ಇದು , ಕನ್ನಡಿಗನೊಬ್ಬ ವಿಶ್ವದಾದ್ಯಂತ ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದರು .

ಈ ಅಂಕಣವನ್ನು ಓದಿ ಸ್ಪೂರ್ತಿಯನ್ನು ಪಡೆದು ನಮ್ಮಲ್ಲಿ ಹಲವಾರು ಕನ್ನಡಿಗ ‘Enterpreneurs ‘  ಹುಟ್ಟಿದರೆ ನಮಗೂ ಹೆಮ್ಮೆ .