ಇನ್ಮೇಲಿಂದ ಜ್ಯೋತಿ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರು ಹಾಗು ಅವರ ಕುಟುಂಬದವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದು!!

0
4077

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಿ ನೌಕರರಿಗಾಗಿ ಉಚಿತ ಚಿಕಿತ್ಸೆಯನ್ನು ನೀಡಲು ಜ್ಯೋತಿ ಸಂಜೀವಿನಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಒಂದು ರೂಪಾಯಿ ಕೂಡ ಖರ್ಚು ಆಗದು, ಇದು ಸಂಪೂರ್ಣ ಉಚಿತ. ಈ ಯೋಜನೆ ರಾಜ್ಯ ಸರ್ಕಾರದ ಅತ್ಯುತ್ತಮವಾದ ಯೋಜನೆಗಳಲ್ಲಿ ಒಂದು.

Also read: ಕಿಡ್ನಿ ಸಮಸ್ಯೆಗೆ ಡಯಾಲಿಸಿಸ್ ಮೊರೆ ಹೋಗೋ ಮುಂಚೆ ಈ ನಾಟಿ ವೈದ್ಯರನೊಮ್ಮೆ ಭೇಟಿ ಮಾಡಿ, ಹಣದ ಜೊತೆ ಆರೋಗ್ಯಾನು ಉಳಿಸಿಕೊಳ್ಳಿ!!

ಗಂಭೀರ ಹಾಗೂ ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾದ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಸೂಪರ್‍ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ನೆರವನ್ನು ಒದಗಿಸುವುದು ಜ್ಯೋತಿ ಸಂಜೀವಿನಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಎಲ್ಲ ಸಮುದಾಯ ಆರೋಗ ಕೇಂದ್ರಗಳು, ತಾಲ್ಲೂಕಿ ಸಾರ್ವಜನಿಕ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಹಾಗೂ ನೋಂದಾಯಿತ ಸೂಪರ್‍ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ (ನೆಟ್ ವರ್ಕ್ ಆಸ್ಪತ್ರೆಗಳು) ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಆರೋಗ್ಯ ಮಿತ್ರರು ಕಾರ್ಯ ನಿರ್ವಹಿಸಿ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಭಿತ ಸದಸ್ಯರಿಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗುವಂತೆ ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ನೀಡುತ್ತಿದ್ದಾರೆ.

ಈ ಯೋಜನೆ ಯಾವ ಯಾವ ಕಾಯಿಲೆಗಳಿಗೆ ಅನ್ವಯವಾಗುತ್ತದೆ?

 1. ಹೃದ್ರೋಗ
 2. ಕ್ಯಾನ್ಸರ್
 3. ನರರೋಗ
 4. ಮೂತ್ರ ಪಿಂಡದ ಕಾಯಿಲೆ
 5. ಸುಟ್ಟ ಗಾಯ
 6. ಅಪಘಾತ ( Not Covered by motor vehicle insurance)
 7. ನವ ಜಾತ ಶಿಶುಗಳು / ಚಿಕ್ಕಮಕ್ಕಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆ

ಈ 7 ಖಾಯಿಲೆಗಳಿಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ಮತ್ತು ಯೋಜನೆಗೆ ನೋಂದಾವಣೆಗೊಂಡ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ (ಖಾಸಗೀಆಸ್ಪತ್ರೆ/ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಉಚಿತವಾಗಿಚಿಕಿತ್ಸೆನೀಡಲಾಗುವುದು.ಮತ್ತು ಇದರಲ್ಲಿ ಸಮಾಲೋಚನೆ, ತಪಾಸಣೆ, ಚಿಕಿತ್ಸಾ ವೆಚ್ಚ, ಆಹಾರ, ಆಸ್ಪತ್ರೆಯ ವೆಚ್ಚ, ಔಷಧಗಳು ಮತ್ತು ನಂತರದ ಸೇವೆಗಳನ್ನು 10 ದಿನಗಳವರೆಗೆಒಳಗೊಂಡಿರುತ್ತದೆ. ಇಂಪ್ಲಾಂಟ್ಸ್, ಸ್ಟೆಂಟ್ಗಳಿಗೆ ನಿಗಧಿಯಾಗಿರುವ ಗರಿಷ್ಠ ಮಿತಿಯನ್ನು ಮೀರಿದಲ್ಲಿ ವ್ಯತ್ಯಾಸದ ಮೊತ್ತವನ್ನು ಫಲಾನುಭವಿಯು ಭರಿಸಬೇಕಾಗುತ್ತದೆ. ಇದಲ್ಲದೆ 138 ಅನುಸರಣಾ ಚಿಕಿತ್ಸೆಗಳನ್ನುಯೋಜನೆಯು ಒಳಗೊಂಡಿದ್ದು, ಸಮಾಲೋಚನೆ, ಡಯಾಗ್ನೋಸ್ಟಿಕ್ಸ್ ಮತ್ತು ಔಷಧಗಳನ್ನೊಳಗೊಂಡಿರುತ್ತದೆ.

ಈ ಯೋಜನೆಯನ್ನು ಪಡೆಯಬೇಕಾದ ಯಾವ ಯಾವ ಅರ್ಹತೆ ಇರಬೇಕು?

ರಾಜ್ಯ ಸರ್ಕಾರಿ ನೌಕರರು ಮತ್ತು ಸರ್ಕಾರದ ಸೇವಾ ನಿಯಮಾವಳಿಗಳ ಅಡಿಯಲ್ಲಿ ಬರುವ ಅವರ ಕುಟುಂಬದ ಅವಲಂಭಿತ ಸದಸ್ಯರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

 1. ಸರ್ಕಾರಿ ನೌಕರರ ಪತ್ನಿ ಅಥವಾ ಪತಿ
 2. ಸರ್ಕಾರಿ ನೌಕರರ ತಂದೆ ಮತ್ತು ತಾಯಿ (ಮಲತಾಯಿ ಒಳಗೂಂಡಂತೆ ) ಇವರು ಸರ್ಕಾರಿ ನೌಕರರ ಜೊತೆಯಲ್ಲಿ ಸಾಮಾನ್ಯವಾಗಿ ವಾಸವಿರತಕ್ಕದ್ದು ಮತ್ತು ಇವರ ಮಾಸಿಕ ಆದಾಯ ಒಟ್ಟು ರೂ 6,000 /-ಗಳನ್ನು ಮೀರ ತಕ್ಕದ‌ಲ್ಲ.
 3. ಸರ್ಕಾರಿ ನೌಕರರ ಮೇಲೆ ಸಂಪೂರ್ಣವಾಗಿ ಅವಲಂಭಿಸಿರುವ ಮಕ್ಕಳು (ದತ್ತು ಮಕ್ಕಳು ಮತ್ತು ಮಲ-ಮಕ್ಕಳು ಒಳಗೊಂಡಂತೆ) ಸರ್ಕಾರಿ ನೌಕರನು ತನ್ನ ಕುಟುಂಬದ ಸದಸ್ಯರ ಅವಲಂಬನೆಯ ಕುರಿತು ಪ್ರಮಾಣಿತ ಘೋಷಣೆಯನ್ನು ಸಲ್ಲಿಸತಕ್ಕದ್ದು.
 4. ಯೋಜನೆಯಲ್ಲಿ ನಿಗಧಿಪಡಿಸಿರುವ ಬೆನಿಫಟ್ ಪ್ಯಾಕೇಜ್ ನ ದರಗಳಿಗಿಂತ ಹೆಚ್ಚು ದರದ ಸ್ಟೆಂಟ್, ಪ್ರೋಸ್ತೆಸಿಸ್ ಮತ್ತು ಇಂಪ್ಲಾಂಟ್ಸ್ ಗಳ ಅಳವಡಿಕೆಯನ್ನು ಫಲಾನುಭವಿಯು ಬಯಸಿದ್ದಲ್ಲಿ / ಆಯ್ಕೆ ಮಾಡಿಕೊಂಡಲ್ಲಿ.
 5. ಯೋಜನೆಯಲ್ಲಿ ನಿಗಧಿ ಪಡಿಸಿದ ವಾರ್ಡ್ ಸೌಲಭ್ಯಕ್ಕಿಂತ ಉನ್ನತ ದರ್ಜೆಯ ವಾರ್ಡ್ ಸೌಲಭ್ಯಗಳನ್ನು ಫಲಾನುಭವಿಯು ಆಯ್ಕೆ ಮಾಡಿಕೊಂಡ ಸಂದರ್ಭಗಳಲ್ಲಿ ಫಲಾನುಭವಿಯು ಹೆಚ್ಚುವರಿ ದರಗಳನ್ನು ಭರಿಸತಕ್ಕದ್ದು.

ಅನರ್ಹತೆ :

ಸರ್ಕಾರಿ ಪ್ರಾಯೋಜತ್ವದ ಯಾವುದೇ ಇತರೆ ಆರೋಗ್ಯ ಯೋಜನೆಗಳಲ್ಲಿ ಮೇಲೆ ಉಲ್ಲೇಖಿಸಿರುವ ಏಳು ತರಹದ ಕಾಯಿಲೆಗಳಿಗೆ ನಿಗಧಿಪಡಿಸಿರುವ 567 ಚಿಕಿತ್ಸಾ ವಿಧಾನಗಳಲ್ಲಿ ಈ ಹಿಂದೆಯೇ ವೈದ್ಯಕೀಯ ಸೌಲಭ್ಯವನ್ನು ಪಡೆದಿದ್ದಲ್ಲಿ, ಅಂತಹ ಸರ್ಕಾರಿ ನೌಕರರು ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುವುದಿಲ್ಲ.

ಆಸ್ಪತ್ರೆಗಳ ಸಂಪರ್ಕ ಜಾಲ :

ಫಲಾನುಭವಿಗಳಿಗೆ ಉತ್ತಮ ಗುಣಮಟ್ಟದ ವ್ಯೆದ್ಯಕೀಯ ಚಿಕಿತ್ಸೆಯನ್ನು ಒದಗಿಲು ನೆರವಾಗುವಂತೆ ರಾಜ್ಯದಲ್ಲಿ (ಹಾಗೂ ರಾಜ್ಯದ ಗಡಿ ಭಾಗಕ್ಕೆ ಸಮೀಪವಿರುವ ನೆರೆ ರಾಜ್ಯಗಳೂ ಸೇರಿದಂತೆ) ಅತ್ಯುತ್ತಮ ದರ್ಜೆಯ ಸೂಪರ್‍ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಯೋಜನೆಯೊಂದಿಗೆ ನೋಂದಣೆ ಮಾಡಿಕೊಳ್ಳಲಾಗಿದೆ. ಈ ನೋಂದಾಯಿತ ಸೂಪರ್‍ ಸ್ಪೆಷಾಲಿಟಿ ಆಸ್ಪತ್ರೆಗಳ ಮೂಲಕ ಫಲಾನುಭವಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತದೆ. ಅರ್ಹ ಆಸ್ಪತ್ರೆಗಳ ಮೂಲಕ ಫಲಾನುಭವಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತದೆ . ಅರ್ಹ ಆಸ್ಪತ್ರೆಗಳ ಗುರುತಿಸುವಿಕೆ ಮತ್ತು ಮತ್ತು ನೋಂದಣಿ ಪ್ರಕ್ರಿಯೆಯು ಸಂದರ್ಭಕ್ಕನುಗುಣವಾಗಿ ನಿರಂತವಾದ ಪ್ರಕ್ರಿಯೆಯಾಗಿರುತ್ತದೆ.

ವಾರ್ಡ್ ಸೌಲಭ್ಯಗಳ ವಿವರ :

(1) ವೇತನ ಶ್ರೇಣಿ – ಮಾಸಿಕವಾಗಿ ರೂ.16,000/- ವರೆಗೆ – ಸಾಮಾನ್ಯ ವಾರ್ಡ್
(2) ಮಾಸಿಕವಾಗಿ ರೂ.16,000/- ದಿಂದ ರೂ.43,200/-ವರೆಗೆ – ಅರೆ-ಖಾಸಗಿ ವಾರ್ಡ್
(3) ರೂ.43,201/- ಮತ್ತು ಮೇಲ್ಪಟ್ಟು – ಖಾಸಗೀ ವಾರ್ಡ್.

HRMS ನಲ್ಲಿ ,

(1) ಸರ್ಕಾರಿ ನೌಕರರ ಆಧಾರ್ ನಂ. & ಆತನ ಕುಟುಂಬ ಸದಸ್ಯರ ಆಧಾರ್ ನಂ. Register ಮಾಡಿಸಿ.
(2) ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು.

ಈ ಯೋಜನೆಗೆ ಒಳಪಡುವ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ನಂತರ ಏನು ಮಾಡಬೇಕು?

 • ಆ ಆಸ್ಪತ್ರೆಯ ADMIN ರವರನ್ನು ಭೇಟಿ ಮಾಡಿ,
 • ಆ ಆಸ್ಪತ್ರೆಯು ‘ಜ್ಯೋತಿ ಸಂಜೀವಿನಿ ಯೋಜನೆ’ ಗೆ ಒಳಪಡುತ್ತದೆಯೇ ಖಾತ್ರಿ ಪಡಿಸಿಕೊಳ್ಳಿ. (ಜ್ಯೋತಿ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ ಆಗಾಗ್ಗೆ ಬದಲಾಗುತ್ತಿರುತ್ತದೆ)
 • ನಿಮ್ಮ ಖಾಯಿಲೆಯು ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಬರುತ್ತದೆಯೇ, ಇಲ್ಲವೇ ಎಂದು ADMIN/ ವೈದ್ಯರಿಂದ ಖಚಿತಪಡಿಸಿಕೊಳ್ಳಿ.
 • ADMIN ರಲ್ಲಿ ನೀವು ಸರ್ಕಾರಿ ನೌಕರರೆಂದು ಪರಿಚಯಿಸಿಕೊಂಡು, ನಿಮ್ಮ ಮೊದಲ KGID ನಂ. ನೀಡಿ
 • ಆ ಆಸ್ಪತ್ರೆಯ E-MAIL ID ಪಡೆದು, ನಿಮ್ಮ HRMS SALARY CERTIFICATE & HRMS DETAILS ಆ ಆಸ್ಪತ್ರೆಯ E-MAIL ID ಗೆ ಇ-ಮೇಲ್ ಮಾಡಲು ನಿಮ್ಮ CLERK/ CASE WORKER ರಲ್ಲಿ ವಿನಂತಿಸಿಕೊಳ್ಳಿ. (ಅಥವಾ ನಿಮ್ಮ HRMS SALARY SLIP & HRMS DETAILS print out ನಿಮ್ಮ ಬಳಿ ಇದ್ದಲ್ಲಿ ಆಸ್ಪತ್ರೆಗೆ ನೀಡಿ)
 • ರೋಗಿಯ VOTER ID ಅಥವಾ AADHAAR CARD ಅಥವಾ DL Zerox Copy ಆಸ್ಪತ್ರೆಗೆ ನೀಡಿ.

ಜ್ಯೋತಿ ಸಂಜೀವಿನಿ ಯೋಜನೆಯ ಮಾಹಿತಿಗಾಗಿ

Suvarna Arogya Suraksha Trust,
Department of health and family welfare,
Government of Karnataka.
Mobile: 7829022792
Toll free number-18004258330 18004252646