ಕಾವೇರಿ ವಿಚಾರವಾಗಿ ಕೊನೆಗೂ ಮಾತನಾಡಿದ ನಿರ್ಮಲಾ ಸೀತರಾಮನ್

0
954

ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಅಥವಾ ಮಧ್ಯಸ್ಥಿಕೆ ಸಾಧ್ಯವಿಲ್ಲ ಎಂದು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ರುವ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ

ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಲ್ಲೇಶ್ವದಲ್ಲಿರುವ ಅರುಣ ಚೇತನ ದಿವ್ಯಾಂಗ ಶಾಲೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಭೇಟಿ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕಾವೇರಿ ವಿಚಾರದಲ್ಲಿ ಪ್ರಧಾನಿಗಳ ಮಧ್ಯಸ್ಥಿಕೆ ಸಾಧ್ಯವಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಪ್ರಧಾನಿಗಳ ಮೇಲೆ ಆರೋಪ ಸರಿಯಲ್ಲ.

ಎರಡು ರಾಜ್ಯಗಳ ನಡುವೆ ನೀರಿಗಾಗಿ ಗಲಾಟೆ ಹಾಗುತ್ತಿರುವುದು ನಿಜ. ನಿಜವಾದ ವಾಸ್ತವಾಂಶವನ್ನ ಕೋರ್ಟ್ ಗೆ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೋರ್ಟ್ ಎರಡು ರಾಜ್ಯಗಳ ವಸ್ತು ಸ್ಥತಿಯನ್ನು ತಿಳಿದು ಅಂತಿಮ ತೀರ್ಪು ನೀಡಲಿ ಎಂದರು .ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.

ಅರುಣ ಚೇತನ ದಿವ್ಯಾಂಗ ಶಾಲೆ ಮಕ್ಕಳೊಂದಿಗೆ ಕೆಲ ಕಾಲ ಕಳೆದರು. ಮಕ್ಕಳಿಗೆ ಫ್ರೂಟ್ಸ್ , ಬುಕ್ ಕಿಟ್ ವಿತರಣೆ ಮಾಡಿದರು., ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಇದ್ದರು.

ಶೀಘ್ರ ಕನ್ನಡ ಕಲಿಯುತ್ತೇನೆ

“ನನಗೆ ಕನ್ನಡ ಇನ್ನೂ ಸರಿಯಾಗಿ ಬರಲ್ಲ. ಕನ್ನಡದಲ್ಲಿ ಮಾತನಾಡಲು ಕಷ್ಟ ಆಗುತ್ತದೆ. ಹಿಂದಿ ಇಲ್ಲವೇ ಇಂಗ್ಲಿಷ್ ನಲ್ಲಿ ಮಾತನಾಡುವೆ”

— ನಿರ್ಮಲಾ ಸೀತಾರಾಮನ್

ಕಳೆದ ಬಾರಿಯಷ್ಟೇ ನೆಕ್ಷ್ಟ್ ಟೈಮ್ ಕನ್ನಡ ದಲ್ಲಿ ಮಾತನಾಡುತ್ತೇನೆ ಅಂದಿದ್ದ ಸಚಿವರು, ಶೀಘ್ರದಲ್ಲೇ ಕನ್ನಡ ಕಲಿಯುತ್ತೇನೆ ಎಂದರು.