ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್; ತೀವ್ರ ಬರಗಾಲದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಮೋದಿ ಸರ್ಕಾರದಿಂದ ಬಂದ ಹಣವೆಷ್ಟು ಗೊತ್ತೇ??

0
499

ನಿರಂತರ ಬರಗಾಲ ಮತ್ತು 2018-19ರ ಸಾಲಿನಲ್ಲಿ ಕರ್ನಾಟಕದಲ್ಲಿ ಉಂಟಾದ ಬರ, ಭೂಕುಸಿತ, ಮಳೆ, ಸೈಕ್ಲೋನ್​​ ಹಾನಿಗೆ ಕೇಂದ್ರ ಸರ್ಕಾರ ಪರಿಹಾರ ಅನುದಾನ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕಕ್ಕೆ 949.49 ಕೋಟಿ ರೂ. ಬರ ಪರಿಹಾರ ನೀಡಲು ಅನುಮೋದನೆ ಸಿಕ್ಕಿದ್ದು. ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯಲ್ಲಿ 6 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಒಟ್ಟು 7,214 ಕೋಟಿ ನೆರವು ನೀಡುವ ಸಂಬಂಧ ಒಪ್ಪಿಗೆ ಸೂಚಿಸಿದೆ.

ಹೌದು ಕಳೆದ ವರ್ಷದ ಹಿಂಗಾರು ಋತುವಿನಲ್ಲಿ ಕೆಲವು ರಾಜ್ಯಗಳಲ್ಲಿ ಮಳೆ ಕೈಕೊಟ್ಟಿತ್ತು. ಇನ್ನೂ ಕೆಲವು ರಾಜ್ಯಗಳಲ್ಲಿ ನೆರೆ ಹಾವಳಿ, ಚಂಡಮಾರುತದ ಅಬ್ಬರದಿಂದ ಬೆಳೆದು ನಿಂತಿದ್ದ ಅಪಾರ ಪ್ರಮಾಣದ ಪೈರು ಹಾಳಾಗಿತ್ತು. ಕೇಂದ್ರದಿಂದ ಬಂದಿದ್ದ ತಜ್ಞರ ತಂಡವು ಕ್ಷೇತ್ರ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಕೇಂದ್ರದ ಕೃಷಿ ಸಚಿವಾಲಯದ ಉಸ್ತುವಾರಿಯಲ್ಲಿ ವರದಿ ಪರಿಶೀಲನೆ ಬಳಿಕ ಸರಕಾರ 7,214 ಕೋಟಿ ರೂ. ಬರ ಪರಿಹಾರ ಪ್ರಕಟಿಸಿದೆ. ಬೆಳೆ ನಷ್ಟದಿಂದ ತತ್ತರಿಸಿದ್ದರಿಂದ ರೈತರಿಗೆ ಈ ಪರಿಹಾರ ತುಸು ನೆಮ್ಮದಿ ತರಲಿದೆ.

ಕರ್ನಾಟಕಕ್ಕೆ 949.49 ಕೋಟಿ?

ಇನ್ನುಳಿದಂತೆ ಹಿಮಾಚಲಪ್ರದೇಶಕ್ಕೆ ನೆರೆ ಹಾಗೂ ಭೂಕುಸಿತದ ಪರಿಹಾರವಾಗಿ 317 ಕೋಟಿ ರೂ., ಉತ್ತರಪ್ರದೇಶಕ್ಕೆ 191 ಕೋಟಿ ನೆರೆ ಪರಿಹಾರ, ಆಂಧ್ರಪ್ರದೇಶಕ್ಕೆ 900 ಕೋಟಿ ಬರ ಪರಿಹಾರ, ಗುಜರಾತ್​ಗೆ 127 ಕೋಟಿ ಬರ ಪರಿಹಾರ, ಮಹಾರಾಷ್ಟ್ರಕ್ಕೆ 4,714 ಕೋಟಿ ಬರ ಪರಿಹಾರ ಹಾಗೂ ಪುದುಚೆರಿಗೆ ಸೈಕ್ನೋನ್​​ ಹಾನಿಯ ಪರಿಹಾರಕ್ಕೆ 13 ಕೋಟಿ ರೂ. ನೀಡಲಾಗಿದೆ. ಮಹಾರಾಷ್ಟ್ರಕ್ಕೆ 4,714 ಕೋಟಿ ರೂ. ಬರ ಪರಿಹಾರ ನೀಡಿದ್ದು ಕರ್ನಾಟಕಕ್ಕೆ ಕೇವಲ 949.49 ಕೋಟಿ ರೂ. ನೀಡಲಾಗಿದೆ. ಕೇಂದ್ರ ಸರ್ಕಾರ ಏಕೆ ತಾರತಮ್ಯ ಮಾಡುತ್ತಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಕಷ್ಟದಲ್ಲಿ ಕರ್ನಾಟಕ:

ರಾಜ್ಯದಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಮಳೆಯಿಲ್ಲದೆ ರೈತರು ಬಿತ್ತಿದ ಬೆಳೆ ನಾಶವಾಗಿ ಸಾಲದಲ್ಲಿ ಸಿಲುಕಿದ ರೈತರು ಆತ್ಮಹತ್ಯೆ ಮಾಡಿಕೊಂಡರು. ನಂತರ 2018 ರಲ್ಲಿ ಸುರಿದ ಬಾರಿ ಮಳೆಯಿಂದ ಮಡಿಕೇರಿ ಜಿಲ್ಲೆಯಾದಂತೆ ಬಾರಿ ವಿಕೋಪ ಸಂಭವಿಸಿ ಮನೆ, ಆಸ್ತಿ, ಬೆಳೆ ಎಲ್ಲವನ್ನು ಕಳೆದುಕೊಂಡ ಅದು ಎಷ್ಟೋ ಜನರು ನೀರಿನಲ್ಲಿ ಮುಳುಗಿ ಮೃತಪಟ್ಟರು. ಅದರಲ್ಲಿ ಕೊಡಗಿನ್ಯಾದಂತ ಈ ವಿಕೋಪ ಹೆಚ್ಚು ಕಂಡು ಬಂದಿದು ಸಂಪೂರ್ಣವಾಗಿ ಅಲ್ಲಿನ ಜನರು ಸಂಕಷ್ಟದಲ್ಲಿ ಮನೆಯಿಲ್ಲದೆ ಜೀವನ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದಲ್ಲಿ ರಾಯಚೂರು, ಬಿಜಾಪುರ, ಬಾಗಲಕೋಟೆ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರಿಯಾದ ಮಳೆಯಿಲ್ಲದೆ. ಕುಡಿಯಿವ ನೀರಿಗೂ ಪರದಾಡುವ ಪರಿಸ್ಥಿತಿ ಬಂದಿದೆ. ಹೀಗೆ ರಾಜ್ಯದ ತುಂಬೆಲ್ಲ ಅನೇಕ ತೊಂದರೆಗಳು ನಷ್ಟಗಳಿಂದ ಬರಗಾಲದ ರಾಜ್ಯಗಳಲ್ಲಿ ಕರ್ನಾಟಕ ಒಂದು ಎಂದು ಸಮೀಕ್ಷೆ ಗುರುತಿಸಿದೆ. ಇದೆಲ್ಲವನ್ನು ತಿಳಿದ ಕೇಂದ್ರ ಸರ್ಕಾರ ಅನುದಾನ ನೀಡಿದ್ದು ಸ್ವಲ್ಪ ಮಟ್ಟಿನ ಚೇತರಿಕೆಗೆ ಸಹಾಯವಾಗಿದೆ. ಆದರೆ ಇನ್ನೂ ಹೆಚ್ಚಿನ ಅನುದಾನ ಅವಶ್ಯಕತೆಯಿದೆ ಎಂದು ಮೂಲಗಳು ತಿಳಿಸಿದೆ.

Also read: ಬಿಪಿಎಲ್ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಇನ್ಮುಂದೆ ರೇಷನ್ ಬದಲು ಹಣ ನೀಡಲು ಚಿಂತನೆ ನಡೆಸಿದ ಕೇಂದ್ರ ಸರ್ಕಾರ..